ಸುಂಟಿಕೊಪ್ಪ, ಆ. 1: ಗ್ರಾಮ ಪಂಚಾಯಿತಿ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಸಂಯೋಗದೊಂದಿಗೆ ಸ್ವಾತಂತ್ರ್ಯೋತ್ಸವ ಪೂರ್ವಬಾವಿ ಸಿದ್ಧತೆÀ ಸಭೆಯನ್ನು ಶುಕ್ರವಾರ ಗುಂಡುಕುಟ್ಟಿ ಮಂಜನಾಥಯ್ಯ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಅಧ್ಯಕ್ಷತೆಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾ ಆಶ್ರಯದಲ್ಲಿ ನಡೆಸಲಾದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ನಡೆದಿದ್ದು ಉಪಾಧ್ಯಕ್ಷರಾಗಿ ಬ್ಲೂಬಾಯ್ಸ್ ಸಂಘದ ಎ.ಶ್ರೀಧರ್, ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾಮೇದಪ್ಪ, ಪ್ರಧಾನ ಕಾರ್ಯ ದರ್ಶಿಯಾಗಿ ಶಕ್ತಿ ದಿನ ಪತ್ರಿಕೆಯ ವರದಿಗಾರ ಬಿ.ಡಿ.ರಾಜುರೈ, ಗ್ರಾ.ಪಂ. ಸದಸ್ಯೆ ನಾಗರತ್ನ, ಕೋಶಾಧಿಕಾರಿಯಾಗಿ ಚೆಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಡಿ. ನರಸಿಂಹ, ಸಂಘಟನಾ ಕಾರ್ಯದರ್ಶಿಯಾಗಿ ವರ್ಕ್‍ಶಾಪ್ ಮಾಲೀಕರ ಸಂಘದ ಅಧ್ಯಕ್ಷ ವಿ.ಎ. ಸಂತೋಷ್ ಸಮಿತಿ ಸದಸ್ಯರಾಗಿ ನಾಗೇಶ್ ಪೂಜಾರಿ, ಇಸಾಕ್‍ಖಾನ್, ವೆಂಕಪ್ಪ ಪೂಜಾರಿ, ರಜಾಕ್, ಜಯಣ್ಣ, ತಿಮ್ಮಪ್ಪ, ಮುಸ್ತಾಫ, ಶಿವಮಣಿ, ಗೀತಾ, ಮಧುರ ಯಶೋಧರ, ತಾಹಿರ ಇವರುಗಳನ್ನು ನೇಮಕಗೊಳಿಸ ಲಾಯಿತು.

ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸ್ವಾತಂತ್ರ್ಯೋತ್ಸವದ ಅಂಗವಾಗಿ ಗೌರವವಂದನೆ, ಪಥಸಂಚಲನ ಹಾಗೂ ಸಾಂಸ್ಕøತಿಕ ಕಾರ್ಯ ಕ್ರಮಗಳೊಂದಿಗೆ ಅತೀ ವಿಜ್ರಂಭಣೆ ಯಿಂದ ಆಚರಿಸಲು ನಿರ್ಧರಿಸಲಾಯಿತು.

ಸಭೆಗೆ ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಎಂ.ಎಸ್.ಸುನೀಲ್ ವಾಚಿಸಿ, ಕೋಶಾಧಿಕಾರಿ ಡಿ.ನರಸಿಂಹ ಲೆಕ್ಕಪತ್ರ ಮಂಡಿಸಿದರು.

ಮೊದಲಿಗೆ ಎಂ.ಎಸ್.ಸುನೀಲ್ ಸ್ವಾಗತಿಸಿ, ರಾಜುರೈ ವಂದಿಸಿದರು.