ಗೋಣಿಕೊಪ್ಪಲು, ಆ. 18: ಗೋಣಿಕೊಪ್ಪಲಿನಲ್ಲಿ ದಿನೇ ದಿನೇ ಶುಚಿತ್ವ ಹದಗೆಡುತ್ತಿದೆ. ಅಲ್ಲಲ್ಲಿ ಕಸದ ತ್ಯಾಜ್ಯ ಹೆಚ್ಚಾಗುತ್ತಿದೆ. ಬೈಪಾಸ್ ರಸ್ತೆ ಒಳಗೊಂಡಂತೆ ಗ್ರಾಮೀಣ ರಸ್ತೆ ಗುಂಡಿಗಳಾಗಿದ್ದು ಆತಂಕ ಹೆಚ್ಚಾಗಿದೆ. ನಗರ ಸ್ವಚ್ಛತೆ ಕೇವಲ ಗ್ರಾ.ಪಂ. ಜವಾಬ್ದಾರಿಯಲ್ಲ. ಇಲ್ಲಿನ ಪ್ರತಿಯೊಬ್ಬರ ಜವಾಬ್ದಾರಿ. ಈ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಸುಂದರ ಗೋಣಿಕೊಪ್ಪಲು ಕಾರ್ಯ ಕ್ರಮಕ್ಕೆ ಎಲ್ಲರೂ ಒಗ್ಗೂಡಿ ಚಾಲನೆ ನೀಡಬೇಕಾಗಿದೆ ಎಂದು ಇಲ್ಲಿನ ಲೋಪಾಮುದ್ರಾ ಆಸ್ಪತ್ರೆಯ ಮಾಲೀಕರಾದ ಡಾ. ಅಮೃತ್ ನಾಣಯ್ಯ ಅಭಿಪ್ರಾಯಪಟ್ಟರು.
ಗೋಣಿಕೊಪ್ಪಲು ವಾಹನ ಮಾಲೀಕರು ಮತ್ತು ಚಾಲಕರ ಸಂಘದ ವತಿಯಿಂದ ಇಲ್ಲಿನ ಕಾರು ನಿಲ್ದಾಣದಲ್ಲಿ ಜರುಗಿದ 70 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು.
ಧ್ವಜಾರೋಹಣ ನೆರವೇರಿಸಿ, ಬಳಿಕ ಜಿಲ್ಲಾಮಟ್ಟದ ಸೈಕ್ಲೋಥಾನ್ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಪದಕ ವಿಜೇತ ಪೆÇಲೀಸ್ ವೃತ್ತ ನಿರೀಕ್ಷಕ ಪಿ.ಕೆ.ರಾಜು ಅವರು ಮಾತನಾಡಿ, ತ್ಯಾಗ ಬಲಿದಾನದ ಸ್ಮರಣೀಯ ದಿನವನ್ನು ಸ್ವಾತಂತ್ರ್ಯ ದಿನವಾಗಿ ಆಚರಿಸಲ್ಪಡುತ್ತಿದ್ದು, ಬಾಹ್ಯ ಶಕ್ತಿಗಳ ಧಾಳಿಯನ್ನು ಗಾಳಿ, ಮಳೆ, ಕೊರೆಯುವ ಚಳಿಯನ್ನು ಲೆಕ್ಕಿಸದೆ ಭಾರತದ ಗಡಿಯನ್ನು ಕಾಯುವ ಯೋಧರನ್ನೂ ನಾವಿಂದು ನೆನೆಯಬೇಕಾಗಿದೆ. ಹೊಸ ಹೊಸ ಸವಾಲುಗಳು ನಮ್ಮ ಮುಂದಿದೆ. ಆಂತರಿಕ ಭದ್ರತೆಯ ವಿಚಾರವಾಗಿ ಪೆÇಲೀಸ್ ಇಲಾಖೆಯೂ ಕಟ್ಟೆಚ್ಚರ ದೊಂದಿಗೆ ಕರ್ತವ್ಯ ನಿರ್ವಹಿಸ ಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲ ದುಷ್ಟಶಕ್ತಿಗಳನ್ನು ಮೆಟ್ಟಿ ನಿಲ್ಲುವ ಕೆಲಸ ಆಗಬೇಕಾಗಿದೆ ಎಂದರು. ಅಮ್ಮತ್ತಿ ಜಿ.ಪಂ. ಸದಸ್ಯ ಮೂಕೋಂಡ ವಿಜು ಸುಬ್ರಮಣಿ ಮಾತನಾಡಿ, ಗೋಣಿಕೊಪ್ಪಲು ವಾಹನ ಚಾಲಕರ ಸಂಘದ ವತಿಯಿಂದ ಮೂರನೇ ವರ್ಷದ ಸೈಕ್ಲೋಥಾನ್ ಸ್ಪರ್ಧೆ ಏರ್ಪಡಿಸಿರುವದು ಸ್ವಾಗತಾರ್ಹ. ಯುವಜನಾಂಗದ ದೈಹಿಕ ಸಾಮಥ್ರ್ಯ ಹೆಚ್ಚಲು ಬೈಸಿಕಲ್ ವ್ಯಾಯಾಮವೂ ಅಗತ್ಯ. ಯುವಜನಾಂಗ ಸದೃಢವಾ ದಲ್ಲಿ ದೇಶ ಸದೃಢವಾದಂತೆ. ಹಿಂದುಳಿದವರ, ಶೋಷಿತರ ಪರ ಧ್ವನಿಯಾಗಿ ನಾವೆಲ್ಲರೂ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್.ಪ್ರಕಾಶ್ ಮಾತನಾಡಿ, ಗೋಣಿಕೊಪ್ಪಲು ವಾಹನ ಚಾಲಕರ ಸಂಘ ದಕ್ಷತೆ, ಬದ್ಧತೆ ಹಾಗೂ ಪ್ರಾಮಾಣಿಕತೆ ಯೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಈ ಬಾರಿ ಸಂಘವು ಸಾರ್ವಜನಿಕರ ಬಳಕೆಗೆ ತುರ್ತು ಚಿಕಿತ್ಸಾ ಅಂಬ್ಯುಲೆನ್ಸ್ ವಾಹನವನ್ನು ಕೊಡುಗೆಯಾಗಿ ನೀಡುತ್ತಿರುವದು ಅಭಿನಂದನಾರ್ಹ ಎಂದು ಹೇಳಿದರು. ಜಿ.ಪಂ. ಸದಸ್ಯ, ವಾಹನ ಚಾಲಕರ ಸಂಘದ ಅಧ್ಯಕ್ಷ ತುರ್ತು ಚಿಕಿತ್ಸಾ ವಾಹನವನ್ನು ಚಾಲಿಸುವ ಮೂಲಕ ಉದ್ಘಾಟನೆ ನೆರವೇರಿಸಿದರು. ವೇದಿಕೆಯಲ್ಲಿ ಪಾಲಿಬೆಟ್ಟ ತಾ.ಪಂ. ಸದಸ್ಯ ಅಜಿತ್ ಕರುಂಬಯ್ಯ, ಗೋಣಿಕೊಪ್ಪಲು ಪೆÇಲೀಸ್ ಉಪನಿರೀಕ್ಷಕ ಗೋವಿಂದ ರಾಜು, ಕಾಳುಮೆಣಸು ರಫ್ತುದಾರ, ದಾನಿ ಸೌರಬ್ಬಂಕ, ವಾಟೇರಿರ ವೀರಜ್, ಕಿಲನ್ ಗಣಪತಿ, ಇಮ್ತರಾಜ್, ಹಕೀಮ್, ಕುರಿಯಾ ಕೋಸ್, ರಾಮಾಚಾರಿ, ಚಂದ್ರಶೇಖರ್ (ರಾಜು), ರತಿ ಅಚ್ಚಪ್ಪ, ರಾಣಿ ನಾರಾಯಣ, ಸುರೇಶ್ ರೈ, ಕೆ.ಡಿ.ರಾಜೇಂದ್ರ, ಸತೀಶ್ ರೈ, ಪೂಣಚ್ಚ ಸಿ.ಎಸ್. ಕುಲ್ಲಚಂಡ ಬೋಪಣ್ಣ ಮುಂತಾದವರು ಉಪಸ್ಥಿತರಿದ್ದರು. ನವೀನ್ ಸ್ವಾಗತಿಸಿ, ವಂದಿಸಿದರು.
ಬಳಿಕ ಜರುಗಿದ ಸೈಕ್ಲೋಥಾನ್ ಸ್ಪರ್ಧೆಯ ವಿವಿಧ ವಿಭಾಗದಲ್ಲಿ ಸುಮಾರು 150ಕ್ಕೂ ಅಧಿಕ ಸ್ಪರ್ಧಾಳುಗಳು ಪಾಲ್ಗೊಂಡಿದ್ದರು. ಗೋಣಿಕೊಪ್ಪಲು ಬಸ್ ನಿಲ್ದಾಣದಿಂದ ಪಾಲಿಬೆಟ್ಟ ರಸ್ತೆ, ಅತ್ತೂರು, ಗದ್ದೆಮನೆ ಶಾಲೆ ಮಾರ್ಗ ರಾಟೆಕಳ, ಮೂಕಾ ಎಸ್ಟೇಟ್ ಮುಂಭಾಗದಿಂದ ಮತ್ತೆ ದುರ್ಗಾ ಬೋಜಿ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ಅಂತ್ಯವಾಯಿತು.
- ಟಿ.ಎಲ್. ಶ್ರೀನಿವಾಸ್