ಮಡಿಕೇರಿ, ಡಿ. 1: ಗಾಳಿಬೀಡು ಅಂಗನವಾಡಿ ಕೇಂದ್ರದಲ್ಲಿ ನವ್ಯ ಮತ್ತು ನಿರ್ಮಲ ಸ್ತ್ರೀಶಕ್ತಿ ಗುಂಪಿನ 3ನೇ ವರ್ಷದ ವಾರ್ಷಿಕೋತ್ಸವವು ನಡೆಯಿತು. 2 ಗುಂಪಿನ ಸದಸ್ಯರು ಒಂದೇ ರೀತಿಯ ಸಮವಸ್ತ್ರವನ್ನು ಧರಿಸಿ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿದರು. ಅಂಗನವಾಡಿ ಮಕ್ಕಳಿಗೆ ಮತ್ತು ಗ್ರಾಮಸ್ಥರಿಗೆ ಆಟೋಟ ಸ್ಪರ್ಧೆಯನ್ನು ಏರ್ಪಡಿಸಿ ಬಹುಮಾನ ವಿತರಣೆ ಮಾಡಿದರು.
ಇದೇ ಸಮಯದಲ್ಲಿ ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಹೆಚ್. ವಿ. ರಾಧ ಅವರನ್ನು ಸನ್ಮಾನಿಸ ಲಾಯಿತು. ಮಾದರಿ ಅಂಗನವಾಡಿ ಕೇಂದ್ರಕ್ಕೆ ಸಹಕಾರ ನೀಡಿದ ಜಿ.ಪಂ. ಸದಸ್ಯರಾದ ಯಾಲದಾಳು ಪದ್ಮಾವತಿ ಹೆರಿಟೇಜ್ ರೆಸಾರ್ಟ್‍ನ ಶರವಣ, ಗ್ರಾಮಸ್ಥರಾದ ವೆಂಕಟಪ್ಪ, ಪೂವಮ್ಮ, ತಂಗಮ್ಮ, ಮೊಹನ್ ಕುಮಾರ್, ಮನು ಕುಮಾರ್, ವಾಸುದೇವ, ಜಯಲಕ್ಷ್ಮಿ, ಮಧು, ಕುಮಾರಿ, ಸುಭಾಶ್ ಚಂದ್ರ ನವ್ಯ ನಿರ್ಮಲ ಸ್ತ್ರೀಶಕ್ತಿ ಗುಂಪಿನ ಸದಸ್ಯರಿಗೆ ಹಾಗೂ ಮಾದರಿ ಅಂಗನವಾಡಿ ಕೇಂದ್ರದ ಮಾರ್ಗದರ್ಶಕ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಹಾಗೂ ಶಿಶು ಅಭಿವೃದ್ಧಿ ಯೋಜನಾಧಿಕಾರಿ ದಮಯಂತಿ ಅವರನ್ನು ಈ ಸಂದರ್ಭ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗಾಳಿಬೀಡು ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರಾಣಿ ಮುತ್ತಣ್ಣ ವಹಿಸಿದ್ದರು. ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ಹೆರಿಟೇಜ್ ರೆಸಾರ್ಟ್‍ನ ಶರವಣ, ಶಾಲಾ ಮುಖ್ಯೋಪಾಧ್ಯಾಯಿನಿ ಲೀಲಾವತಿ, ಗ್ರಾಮದ ಹಿರಿಯರಾದ ವೆಂಕಟಪ್ಪ, ಪೂವಮ್ಮ, ಅಂಗನವಾಡಿ ಮಕ್ಕಳು ಪ್ರಾರ್ಥಿಸಿ, ನಿವೃತ್ತಿ ಅಂಗನವಾಡಿ ಕಾರ್ಯಕರ್ತೆ ರಾಧ ಸ್ವಾಗತಿಸಿದರು. ಸ್ತ್ರೀಶಕ್ತಿ ಗುಂಪಿನ ಸದಸ್ಯೆ ರಾಣಿ ಉದಯ ನಿರೂಪಿಸಿದರು. ಸ್ತ್ರೀಶಕ್ತಿ ಗುಂಪಿನಿಂದ ಸೌಭಾಗ್ಯ, ನಿರ್ಮಲ ಸ್ತ್ರೀಶಕ್ತಿ ಹಿತಾಕ್ಷಿ ಗುಂಪಿನ ವರದಿಯನ್ನು ಮಂಡಿಸಿದರು.