ವೀರಾಜಪೇಟೆ, ಆ. 5: ವೀರಾಜಪೇಟೆ ಪಟ್ಟಣ ಪಂಚಾಯಿತಿ ಪೌರ ಕಾರ್ಮಿಕರು ಆರೋಗ್ಯದ ದೃಷ್ಟಿಯಿಂದ ಸರಕಾರ ನೀಡುವ ಅಗತ್ಯ ಸವಲತ್ತುಗಳನ್ನು ಸದುಪಯೋಗಪಡಿಸಿಕೊಂಡು ಪಂಚಾಯಿತಿಗೆ ದಕ್ಷತೆ ಹಾಗೂ ಪ್ರಾಮಾಣಿಕತೆಯಿಂದ ಸೇವೆ ಸಲ್ಲಿಸುವಂತಾಗÀಬೇಕು ಎಂದು ಅಧ್ಯಕ್ಷ ಕೂತಂಡ ಸಚಿನ್ ಹೇಳಿದರು.

ಪಟ್ಟಣ ಪಂಚಾಯಿತಿ ವತಿಯಿಂದ ಶೇಕಡ 24.10ರ ಮೀಸಲು ನಿಧಿಯಿಂದ ಪೌರ ಕಾರ್ಮಿಕರಿಗೆ ಸುರಕ್ಷಾ ಕವಚ, ಮಾಸ್ಕ್, ರೈನ್ ಕೋಟ್, ಕ್ಯಾಪ್, ಬ್ಲೇಜ್, ಸ್ವೆಟರ್, ಕೊಡೆ ಇತ್ಯಾದಿಗಳಿದ್ದ ಕಿಟ್‍ನ್ನು ವಿತರಿಸಿದ ಸಚಿನ್ ಅವರು ಪಟ್ಟಣದ ಶುಚಿತ್ವ ಕಾಪಾಡಲು ನಿರಂತರ ಶ್ರಮಿಸುತ್ತಿರುವ ಕಾರ್ಮಿಕರು ಬೆಳಗ್ಗಿನಿಂದ ಸಂಜೆವರೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಪಟ್ಟಣದ ಶುಚಿತ್ವಕ್ಕೆ ಕಾರ್ಮಿಕರ ಅಮೂಲ್ಯ ಸೇವೆಯ ಕೊಡುಗೆ ಅಪಾರವಾದದ್ದು ಎಂದರು.

ಇದೇ ಸಂದರ್ಭದಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನಿತಾ, ಹಿರಿಯ ಸದಸ್ಯ ಎಸ್.ಎಚ್. ಮೊೈನುದ್ದೀನ್, ಇ.ಸಿ. ಜೀವನ್, ಸರಿತ, ನಾಗಮ್ಮ, ಶಂಕರ್ ಶೆಟ್ಟಿ, ಮುಖ್ಯಾಧಿಕಾರಿ ಶಂಕರ್ ಶೆಟ್ಟಿ, ಅಭಿಯಂತರ ಎನ್.ಪಿ. ಕುಮಾರ್, ಸಿಬ್ಬಂದಿಗಳು ಹಾಜರಿದ್ದರು. ಪ್ರಾರಂಭದಲ್ಲಿ ಯೋಜನಾಧಿಕಾರಿ ಶೈಲಾ ಪ್ರಾಸ್ತಾವಿಕವಾಗಿ ಮಾತನಾಡಿದರು.