ಕೂಡಿಗೆ, ನ. 28: ಕುಶಾಲನಗರ ಸಮೀಪದ ಮುಳ್ಳುಸೋಗೆ ಪಂಚಾಯಿತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅನುದಾನದಲ್ಲಿ ಫಲಾನುಭವಿಗಳಿಗೆ ಸೋಲಾರ್ ದೀಪಗಳನ್ನು ವಿತರಿಸಲಾಯಿತು.

ಮುಳ್ಳುಸೋಗೆ ಪಂಚಾಯಿತಿ ಸದಸ್ಯ ಹರೀಶ್ ಮಾತನಾಡಿ, ಸುಮಾರು ರೂ. 2 ಲಕ್ಷ ವೆಚ್ಚದಲ್ಲಿ ರೂ. 2700 ಬೆಲೆಯುಳ್ಳ ಅಧಿಕ ಕಾಲ ಬಾಳುವ ಸೋಲಾರ್ ದೀಪಗಳನ್ನು ಖರೀದಿಸಿ 23 ಫಲಾನುಭವಿಗಳನ್ನು ಗುರುತಿಸಿ ವಿತರಿಸಲಾಗಿದೆ ಎಂದರು.

ಮುಳ್ಳುಸೋಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸಂತೋಷ್, ಮುಳ್ಳುಸೋಗೆ ಪಂಚಾಯಿತಿ ಸದಸ್ಯರಾದ ವಿಶ್ವ, ಸುರೇಶ್, ಗಣೇಶ್, ರುದ್ರಾಂಬಿಕೆ ಮತ್ತಿತರು ಇದ್ದರು.