ಕುಶಾಲನಗರ, ಜು. 8: ರೋಟರಿ ಸಂಸ್ಥೆ ಮೂಲಕ ಬಡಜನರ ಏಳಿಗೆಗಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ರೋಟರಿ ಜಿಲ್ಲಾ 3181 ರ ನಿಯೋಜಿತ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ ಕರೆ ನೀಡಿದ್ದಾರೆ.

ಸ್ಥಳೀಯ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆದ ಕುಶಾಲನಗರ ರೋಟರಿ ಸಂಸ್ಥೆಯ 2016-17ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸರಕಾರಗಳ ಯೋಜನೆಗಳನ್ನು ತಳಮಟ್ಟದಲ್ಲಿ ತಲಪಿಸುವ ನಿಟ್ಟಿನಲ್ಲಿ ಸಂಘ-ಸಂಸ್ಥೆಗಳ ಪಾತ್ರ ಪ್ರಮುಖವಾಗಿದೆ ಎಂದ ಅವರು, ರೋಟರಿ ಅಂತರರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿದೆ ಎಂದರು.

ನಿಯೋಜಿತ ರಾಜ್ಯಪಾಲ ಮಾತಂಡ ಸುರೇಶ್ ಚಂಗಪ್ಪ 2016-17ನೇ ಸಾಲಿನ ನೂತನ ಅಧ್ಯಕ್ಷ ಸಿ.ಎ.ಮುದ್ದಪ್ಪ ಮತ್ತು ಕಾರ್ಯದರ್ಶಿ ಎನ್.ಜಿ. ಪ್ರಕಾಶ್ ಅವರ ನೇತೃತ್ವದ ತಂಡಕ್ಕೆ ಪ್ರಮಾಣ ವಚನ ಬೋಧಿಸಿ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ಶಾಲಾ-ಕಾಲೇಜುಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸದಸ್ಯರುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಇದೇ ಸಂದರ್ಭ ಇಬ್ಬರು ನೂತನ ಸದಸ್ಯರುಗಳನ್ನು ರೋಟರಿ ಸಂಸ್ಥೆಗೆ ಸೇರ್ಪಡೆಗೊಳಿಸಲಾಯಿತು. ಕುಶಾಲನಗರ ರೋಟರಿಯಿಂದ ಫಿಲಿಪೈನ್ಸ್ ದೇಶಕ್ಕೆ ತೆರಳಿ ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಂಡ 6 ಮಂದಿ ಸದಸ್ಯರನ್ನು ಈ ಸಂದರ್ಭ ಸನ್ಮಾನಿಸಲಾಯಿತು.

ಹಿಂದಿನ ಸಾಲಿನ ಅಧ್ಯಕ್ಷೆ ಶೋಭಾ ಸತೀಶ್ ಮಾತನಾಡಿ, ತಮ್ಮ ಅವಧಿಯಲ್ಲಿ ಹಲವು ಯೋಜನೆಗಳನ್ನು ಹಮ್ಮಿಕೊಂಡಿದ್ದು ಈ ಸಂದರ್ಭ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಅರ್ಪಿಸಿದರು. ನೂತನವಾಗಿ ನೇಮಕಗೊಂಡ ಅಧ್ಯಕ್ಷರಾದ ಸಿ.ಎ. ಮುದ್ದಪ್ಪ ಮುಂದಿನ ಸಾಲಿನ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿ ಎಲ್ಲರ ಸಹಕಾರ ಕೋರಿದರು.

ರೋಟರಿಯ ಸಹಾಯಕ ರಾಜ್ಯಪಾಲ ಡಾ. ಸಿ.ಆರ್. ಪ್ರಶಾಂತ್, ವಲಯ ಲೆಫ್ಟಿನೆಂಟ್ ಎನ್. ಮಹೇಶ್ ಉಪಸ್ಥಿತರಿದ್ದು ಮಾತನಾಡಿದರು. ಹಿಂದಿನ ಸಾಲಿನ ಕಾರ್ಯದರ್ಶಿ ಸುನಿತಾ ಮಹೇಶ್, ಪದಾಧಿಕಾರಿಗಳಾದ ಪಿ.ಆರ್. ನವೀನ್, ಸಿ.ಬಿ. ಹರೀಶ್, ಡಾ. ಹರಿ ಎ. ಶೆಟ್ಟಿ, ಎ.ಎ. ಚಂಗಪ್ಪ, ಎಸ್.ಕೆ. ಸತೀಶ್, ಸಿ.ಪಿ. ಸುಧೀಶ್, ಕೆ.ಎಸ್. ರಾಜಶೇಖರ್, ಡಾ. ಧರಣೇಂದ್ರ, ಪ್ರೇಮಾ ಅಚ್ಚಯ್ಯ, ಆರತಿ ಹೆಚ್. ಶೆಟ್ಟಿ, ಶಾಜಿ ಕೆ. ಜಾರ್ಜ್, ಮತ್ತಿತರರು ಇದ್ದರು. ಮಡಿಕೇರಿ ಸೇರಿದಂತೆ ವಿವಿಧ ರೋಟರಿ ಅಧ್ಯಕ್ಷರುಗಳು, ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.