ಮಡಿಕೇರಿ, ಆ. 22: ವಿಶ್ವ ಛಾಯಾಗ್ರಾಹಕರ ದಿನಾಚರಣೆಯನ್ನು ವೀರಾಜಪೇಟೆ ತಾಲೂಕು ಛಾಯಾಗ್ರಾಹಕರ ಸಂಘದ ವತಿಯಿಂದ ಅರಣ್ಯ ಇಲಾಖೆ ಸಹಕಾರದೊಂದಿಗೆ ಆನೆಚೌಕೂರು ಮುಂದಿರುವ ಅಳೂರು ನಡುವಿನ ತಿರುವಿನಲ್ಲಿ ಅಪಘಾತವನ್ನು ತಪ್ಪಿಸಲು ಎಚ್ಚರಿಕೆ ಸೂಚನಾ ಫಲಕವನ್ನು ಅಳವಡಿಸುವ ಮೂಲಕ ಆಚರಿಸಲಾಯಿತು.

ಸಂಘದ ಮಾಜಿ ಉಪಾಧ್ಯಕ್ಷರು, ಗೌರವ ಅಧ್ಯಕ್ಷ ಎಸ್.ಎಲ್. ಶಿವಣ್ಣ ಅವರು ಉದ್ಘಾಟಿಸಿದರು. ಹೊಸಿಲು ಮಾರಮ್ಮ ದೇವಸ್ಥಾನದ ಬಳಿ ಸ್ವಚ್ಛತೆಯನ್ನು ಕಾಪಾಡಲು ಕಸದ ತೊಟ್ಟಿಯನ್ನು ಅಳವಡಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶಿವಣ್ಣ ಅವರು ಸ್ವಚ್ಛತೆಯನ್ನು ಕಾಪಾಡಬೇಕು, ವನ್ಯ ಜೀವಿಗಳನ್ನು ಪ್ರೀತಿಸಬೇಕು ಎಂದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಶಿವಕುಮಾರ್, ಉಪಾಧ್ಯಕ್ಷ ಸತ್ತಾರ್, ಕಾರ್ಯದರ್ಶಿ ಎಚ್.ಬಿ. ರಾಜಾ, ಖಜಾಂಚಿ ಸುರೇಶ್, ಸಹಕಾರ್ಯದರ್ಶಿ ಹರ್ಷಿತ್, ಸದಸ್ಯರಾದ ರವೀಂದ್ರ, ಮೈಕಲ್ ಜಾನ್, ಮಣಿ, ಅಭಿ, ಶಿವಾ, ಮಂಜು, ಜುಬೇರ್, ರಂಜಿತ್, ಅಜಿಶ್ ಮತ್ತಿತರರು ಉಪಸ್ಥಿತರಿದ್ದರು.