ಸುಂಟಿಕೊಪ್ಪ, ಸೆ. 25: ಸುಂಟಿಕೊಪ್ಪ ಮಲಯಾಳಿ ಸಮಾಜದ ವತಿಯಿಂದ 10ನೇ ವರ್ಷದ ಓಣಂ ಆಚರಣೆ ಭರದ ಸಿದ್ಧತೆ ನಡೆದಿದೆ.

ತಾ. 26 ರಂದು ಬೆಳಿಗ್ಗೆ 10.30 ಗಂಟೆಗೆ ಶ್ರೀ ಮಂಜುನಾಥಯ್ಯ ಮಿನಾಕ್ಷಮ್ಮ ಕಲ್ಯಾಣ ಮಂಟಪದಲ್ಲಿ ಓಣಂ ಆಚರಣಾ ಉದ್ಘಾಟನಾ ಸಮಾರಂಭಕ್ಕೆ ಸಂಸದ ಪ್ರತಾಪ್‍ಸಿಂಹ ವಿದ್ಯುಕ್ತ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಇಲ್ಲಿನ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಸಿ. ಮೋಹನ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಹಾಸನ ಗ್ರಾಹಕರ ವ್ಯವಹಾರಗಳ ವೇದಿಕೆ ಅಧ್ಯಕ್ಷ ಎ. ಲೋಕೇಶ್ ಕುಮಾರ್ ಕುಶಾಲನಗರ ಕ್ಷೇತ್ರ ಜಿ.ಪಂ. ಸದಸ್ಯ ಪಿ.ಎಂ. ಲತೀಫ್, ರಾಜ್ಯ ಐಎನ್‍ಟಿಯುಸಿ ಉಪಾಧ್ಯಕ್ಷ ನಾಪ್ಪಂಡ ಮುತ್ತಪ್ಪ, ರಾಜ್ಯ ಐಎನ್‍ಟಿಯುಸಿ ಕಾರ್ಯದರ್ಶಿ ನಾಪ್ಪಂಡ ಮುದ್ದಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್‍ಮೇರಿ ರಾಡ್ರಿಗಸ್, ಜಿ.ಪಂ. ಮಾಜಿ ಅಧ್ಯಕ್ಷ ವಿ.ಎಂ. ವಿಜಯ, ಜಿ.ಪಂ. ಮಾಜಿ ಸದಸ್ಯ ಬಿ.ಬಿ. ಭಾರತೀಶ್, ಗ್ರಾ.ಪಂ. ಸದಸ್ಯ ಜಿ.ಜಿ. ಹೇಮಂತ್ ಕುಮಾರ್ ಭಾಗವಹಿಸಲಿದ್ದಾರೆ.

ಮೈಸೂರು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀಶ್ರೀ ಸೋಮನಾಥ ಸ್ವಾಮೀಜಿ, ಮಂಗಳೂರಿನ ಮಾಂಟುಗೋಳಿಯ ಜನಾಬ್ ಅಬೂಬಕರ್ ಸಿದ್ದಿಕ್ ಮುಸ್ಲಿಯಾರ್, ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ಎಡ್ವರ್ಡ್ ವಿಲಿಯಂ ಸಲ್ಡಾನ, ಆಶಿರ್ವಚನ ನೀಡಲಿದ್ದಾರೆ.

ವಿಶೇಷ ಆಹ್ವಾನಿತರಾಗಿ ಮಲಯಾಳಿ ಸಮಾಜದ ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪಿ.ಡಿ.ಪ್ರಕಾಶ್, ಮಡಿಕೇರಿಯ ಕೆ.ಎಸ್. ರಮೇಶ, ಕುಶಾಲನಗರ ಶಿವನ್, ಸಿದ್ದಾಪುರದ ಶ್ರೀನಿವಾಸನ್, ಚೆಟ್ಟಳ್ಳಿಯ ಪಿ.ಕೆ.ಶಶಿಕುಮಾರ್, ಮೂರ್ನಾಡಿನ ಕೆ.ಬಾಬು, ಮರಗೋಡಿನ ಬಾಲಕೃಷ್ಣನ್, ನಾಕೂರಿನ ಗಂಗಾಧರ್, ಸುಂಟಿಕೊಪ್ಪ ಶ್ರೀ ಪುರಂ ಅಯ್ಯಪ್ಪ ದೇವಸ್ಥಾನದ ಗೌರವಾಧ್ಯಕ್ಷ ಹೆಚ್. ಗಂಗಾಧರ್ ಆಗಮಿಸಲಿದ್ದಾರೆ.

ಸಂಜೆ 6.30 ಗಂಟೆಗೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಸುಂಟಿಕೊಪ್ಪ ಠಾಣಾಧಿಕಾರಿ ಅನೂಫ್ ಮಾದಪ್ಪ ನೇರವೇರಿಸಲಿದ್ದು, ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಸೇವಾ ಸಮಿತಿ ಕಾರ್ಯದರ್ಶಿ ಸುದರ್ಶನ್ ನಾಯ್ಡು, ಸುಂಟಿಕೊಪ್ಪ ವಿ.ಎಸ್.ಎಸ್.ಎನ್ ಅಧ್ಯಕ್ಷ ಎನ್.ಸಿ. ಪೊನ್ನಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ.ಎ. ಉಸ್ಮಾನ್ ಭಾಗವಹಿಸಲಿದ್ದಾರೆ ಎಂದು ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಸಿ. ಮೋಹನ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.