ಸುಂಟಿಕೊಪ್ಪ, ಅ. 5: ಗೋ ಮಾತೆಯನ್ನು ರಾಷ್ಟ್ರ ಮಾತೆಯಾಗಿ ಕೇಂದ್ರ ಸರಕಾರ ಘೋಷಿಸಬೇಕೆಂಬ ಸದುದ್ದೇಶದಿಂದ ಮಂಗಲ ಗೋಯಾತ್ರೆಯನ್ನು ಹಮ್ಮಿಕೊಳ್ಳ ಲಾಗಿದೆ ಎಂದು ಉತ್ತರಾಖಂಡ ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಹೇಳಿದರು.
ಸುಂಟಿಕೊಪ್ಪಕ್ಕೆ ಆಗಮಿಸಿದ್ದ ಗೋಕಿಂಕರ ಯಾತ್ರೆಯನ್ನು ಕನ್ನಡ ವೃತ್ತದಲ್ಲಿ ಮಹಿಳೆಯರು ಪೂರ್ಣಕುಂಭ ಕಲಶದೊಂದಿಗೆ ಸ್ವಾಗತಿಸಿ ರಥಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಸ್ವಾಮೀಜಿ ಯವರನ್ನು ಶ್ರೀ ಕೋದಂಡರಾಮ ದೇವಾಲಯಕ್ಕೆ ಮೆರವಣಿಗೆಯಲ್ಲಿ ಕರೆದೊಯ್ಯಲಾಯಿತು.
ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮಾತನಾಡಿದ ಸ್ವಾಮೀಜಿ, ಭಾರತೀಯ ಸಂಸ್ಕಾರ ಆಚಾರ - ವಿಚಾರಗಳಲ್ಲಿ ಗೋಮಾತೆ ಹಾಸು ಹೊಕ್ಕಾಗಿದೆ. ಗೋವುಗಳ ರಕ್ಷಣೆ ಆಗಬೇಕು. ಗೋಮಾತೆ ಯೊಂದಿಗೆ ಹಿಂದೂ ಸನಾತನ ಸಂಸ್ಕøತಿ ಮಿಳಿತಗೊಂಡಿದೆ. ಗೋವಿಗೆ ಸ್ವಾತಂತ್ರ್ಯ ಸಿಗಬೇಕು, ಭಾರತ ಭೂಮಿ ಫಲವತ್ತಾಗಲು ಗೋಸಂತತಿ ಅಗತ್ಯ. ಗೋವಿನ ಮೂತ್ರ 186 ಖಾಯಿಲೆಗಳಿಗೆ ಔಷಧಿಯಾಗಿದೆ ಎಂದು ಹೇಳಿದರು.
ಗೋಕಿಂಕರ ಯಾತ್ರೆಯ ಕೊಡಗು ಜಿಲ್ಲಾ ಪ್ರಮುಖ ಈಶ್ವರಭಟ್ ಪ್ರಾಸ್ತಾವಿಕ ನುಡಿಯಾಡಿದರು.
ವೇದಿಕೆಯಲ್ಲಿ ಸುಂಟಿಕೊಪ್ಪ ನಾಡುಗೌಡ ಸಮಾಜದ ಅಧ್ಯಕ್ಷ ಯಂಕನ ಉಲ್ಲಾಸ್ ಹಾಗೂ ಸಾಮಾಜಿಕ ಕಾರ್ಯಕರ್ತ ಚಿ.ನಾ. ಸೋಮೇಶ್ ಉಪಸ್ಥಿತರಿದ್ದರು. ಹರದೂರು ಗ್ರಾಮದ ಗೋಕಿಂಕರ ಜಾಥಾದ ಪ್ರಮುಖ ಎಂ.ಎನ್. ಹರೀಶ್ ಸ್ವಾಗತಿಸಿದರು.
ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಡಿ. ನರಸಿಂಹ, ತಾ.ಪಂ. ಸದಸ್ಯೆ ವಿಮಲಾವತಿ, ಗ್ರಾ.ಪಂ. ಸದಸ್ಯರುಗಳಾದ ಬಿ.ಎಂ. ಸುರೇಶ್ (ಪುಟ್ಟ), ಸಿ. ಚಂದ್ರ, ಗಿರಿಜಾ ಉದಯ್, ಸುಂಟಿಕೊಪ್ಪ ಮಲಯಾಳಿ ಸಮಾಜದ ಅಧ್ಯಕ್ಷ ಪಿ.ಸಿ. ಮೋಹನ್, ಗೌರಿ ಗಣೇಶ ಆಚರಣಾ ಸಮಿತಿ ಅಧ್ಯಕ್ಷ ಬಿ.ಕೆ. ಮೋಹನ್, ಕಾರ್ಯದರ್ಶಿ ಎಂ.ಎಸ್. ಸುನಿಲ್, ಸುಂಟಿಕೊಪ್ಪ ನಾಡು ಗೌಡ ಸಮಾಜದ ಕಾರ್ಯದರ್ಶಿ ಕೌಶಿಕ್, ಖಜಾಂಚಿ ಉದಯ ಕುಮಾರ್, ಮಾತೃ ಮಂಡಳಿ ಸದಸ್ಯರು ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾ ಮೇದಪ್ಪ, ಪಿ.ಕೆ. ಮುತ್ತಣ್ಣ, ಉದ್ಭವ ಗಣಪತಿ ದೇವಸ್ಥಾನ ಸಮಿತಿ ಅಧ್ಯಕ್ಷ ವಿನೋದ್, ಗ್ರಾ.ಪಂ. ಮಾಜಿ ಅಧ್ಯಕ್ಷೆÀ ಬಿ.ಐ. ಭವಾನಿ, ಪ್ರಶಾಂತ್, ಪಿ.ಆರ್. ಸುನಿಲ್ ಕುಮಾರ್, ಶಿವಮಣಿ, ಬಿ.ಎಸ್. ಅಶೋಕ್ ಶೇಟ್, ಗೋಪಾಲ್ ಭಟ್ ಮತ್ತಿತರರು ಇದ್ದರು.