ಸುಂಟಿಕೊಪ್ಪ, ಸೆ. 2: ಇಲ್ಲಿನ ವಿಶ್ವ ಹಿಂದೂ ಪರಿಷದ್ ಮತ್ತು ಗೌರಿ ಗಣೇಶೊತ್ಸವ ಸಮಿತಿಯ ವತಿಯಿಂದ ತಾ. 4ರಿಂದ ತಾ.11 ರವರೆಗೆ ಗೌರಿ ಗಣೇಶೊತ್ಸವವನ್ನು ಆಚರಿಸಲಾಗು ವದೆಂದು ಸಮಿತಿ ಅಧ್ಯಕ್ಷ ಬಿ.ಕೆ.ಮೋಹನ್ ತಿಳಿಸಿದ್ದಾರೆ.

ತಾ. 4 ರಂದು ಬೆಳಿಗ್ಗೆ 9 ಗಂಟೆಗೆ ರಾಮ ಮಂದಿರದಿಂದ ಹೊರಟು ಪಟ್ಟೆಮನೆ ಮಾದಯ್ಯ ಅವರ ಬಾವಿಯಿಂದ ಗಂಗಾ ಜಲದೊಂದಿಗೆ ಮುಖ್ಯ ಬೀದಿಯಲ್ಲಿ ಮೆರವಣಿಗೆ ಮೂಲಕ ಗೌರಿಯನ್ನು ತಂದು ಬೆಳಿಗ್ಗೆ 11 ಗಂಟೆಗೆ ರಾಮ ಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗುವದು. ತಾ. 5 ರಂದು 10 ಗಂಟೆಗೆ ಗಣೇಶ ಮೂರ್ತಿಯ ಪ್ರತಿಷ್ಠಾಪನೆ ನಡೆಯಲಿದೆ.

ತಾ. 6ರಂದು ಸಂಜೆ 7 ಗಂಟೆಯಿಂದ ಮಹಿಳೆಯರು ಮತ್ತು ಮಕ್ಕಳಿಗಾಗಿ ರಂಗೋಲಿ, ಮಡಿಕೆ ಒಡೆಯುವದು ಮತ್ತು ಬೆಲೂನ್ ಒಡೆಯುವ ಸ್ಪರ್ಧೆ, ತಾ. 7 ರಂದು ಸಂಜೆ ಶಂಕರಯ್ಯ ಕಲಾ ತಂಡದವರಿಂದ ಭರತನಾಟ್ಯ ಮತ್ತು ಸ್ವಸ್ಥ ಶಾಲೆಯ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ, ತಾ.8 ರಂದು ಅಮ್ಮತ್ತಿಯ ರಾಜ್ಯ ಪ್ರಶಸ್ತಿ ವಿಜೇತ ಎನ್.ಆರ್. ರಾಜೇಶ್ ಅವರ ರನನ್ ರಾಜೇಶ್ ತಂಡದವರಿಂದ ಜಾದು ಪ್ರದರ್ಶನ, ತಾ.9 ರಂದು ಸಂಜೆ ಧನಂಜಯ ಅಗೋಳಿ ಕಜೆ ಮತ್ತು ರವಿ ಭೂತನಕಾಡು ತಂಡದವರಿಂದ ಭಾವ-ರಾಗ-ತಾಳ ಸಂಗಮ, ತಾ.10 ರಂದು ಬೆಳಿಗ್ಗೆ 10.30 ಗಂಟೆಗೆ ಗಣಹೋಮ, ಸಂಜೆ 7 ಗಂಟೆಗೆ ಓಂಕಾರೇಶ್ವರ ಯಕ್ಷಗಾನ ಕಲಾ ಮೇಳದವರಿಂದ ‘’ಗಜೇಂದ್ರ ಮೋಕ್ಷ’’ ಯಕ್ಷಗಾನ, ತಾ.11 ರಂದು ಸಂಜೆ 4 ಗಂಟೆಗೆ ಶ್ರೀ ರಾಮ ಮಂದಿರದಿಂದ ಪೂಜಾ ಕೈಂಕರ್ಯ ನಂತರ ವಿದ್ಯುತ್ ದೀಪ ಅಲಂಕೃತವಾದ ಭವ್ಯ ಮಂಟಪದಲ್ಲಿ ವಾದ್ಯ ಗೋಷ್ಠಿ ಗಳೊಂದಿಗೆ ಮುಖ್ಯ ಪಟ್ಟಣದಲ್ಲಿ ಮೆರವಣಿಗೆ ಮೂಲಕ ಸಾಗಿ ಗದ್ದೆಹಳ್ಳದ ವೈ.ಯಂ. ಕರುಂಬಯ್ಯ ಅವರ ಕುಟುಂಬಸ್ಥರ ಕೆರೆಯಲ್ಲಿ ವಿಸರ್ಜಿಸಲಾಗುವದು ಎಂದು ತಿಳಿಸಿದ್ದಾರೆ.