ಕುಶಾಲನಗರ, ಆ. 15: ಬೆಳ್ತಂಗಡಿಯ ಶ್ರೀ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆ ಆಶ್ರಯದಲ್ಲಿ ಕೊಪ್ಪ ಗ್ರಾಮದ ಸಮುದಾಯ ಭವನದಲ್ಲಿ ಸಿರಿ ಹಬ್ಬ ವಸ್ತು ಪ್ರದರ್ಶನ ಮತ್ತು ಮಾರಾಟ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಒಂದು ತಿಂಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಗ್ರಾಮೀಣ ಸಂಸ್ಥೆಯ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಮಹಿಳೆಯರು ಸ್ವತಃ ತಾವೇ ತಯಾರಿಸಿದ್ದ ಆಹಾರೋತ್ಪನ್ನಗಳು, ಸಿದ್ದ ಉಡುಪುಗಳು, ಗೃಹಪಯೋಗಿ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಮಾರಾಟಕ್ಕೆ ಇಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ಜಗದೀಶ್ ತಿಳಿಸಿದ್ದಾರೆ.

ಸ್ಯಾರಿ, ಫ್ರಾಕ್, ನೈಟ್ ಡ್ರೆಸ್, ರೆಗ್ಸಿನ್ ಬ್ಯಾಗ್, ಖಾದಿ, ಶರ್ಟ್, ಪ್ಯಾಂಟ್, ಕೊಕಂ ಜ್ಯೂಸ್, ಉಪ್ಪಿನಕಾಯಿ, ಕೊಬ್ಬರಿ ಎಣ್ಣೆ, ಅಗರಬತ್ತಿ, ಫಿನಾಯಿಲ್, ಬ್ಲೀಚಿಂಗ್ ಪೌಡರ್, ಲಿಕ್ವಿಡ್ ಸೋಪ್ ಮೊದಲಾದ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಹಮ್ಮಿ ಕೊಳ್ಳಲಾಗಿದೆ.