ಬೆಂಗಳೂರು ಆ.26 : ಡಿವೈಎಸ್‍ಪಿ ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮಾಡುತ್ತಿರುವ ಸಿಐಡಿ ಅಧಿಕಾರಿಗಳು ಮಾಜಿ ಗೃಹ ಸಚಿವ ಕೆ.ಜೆ.ಜಾರ್ಜ್ ಅವರನ್ನ ವಿಚಾರಣೆ ಮಾಡಲಾಗುತ್ತಿದೆ. ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಕೆಜೆ ಜಾರ್ಜ್ ವಿಚಾರಣೆ ನಡೆಯುತ್ತಿದ್ದು, ಎಡಿಜಿಪಿ ಪ್ರತಾಪ್ ರೆಡ್ಡಿ, ಡಿಐಜಿ ಸೋನಿಯಾ ನಾರಂಗ್ ಅವರಿಂದ ವಿಚಾರಣೆ ನಡೆದಿದೆ. ಪ್ರಕರಣ ದಾಖಲಾದ ಬಳಿಕ ಮೊದಲ ವಿಚಾರಣೆ ಇದಾಗಿದೆ. ಜುಲೈ 7 ರಂದು ಮಡಿಕೇರಿ ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದ ಮಂಗಳೂರು ಡಿವೈಎಸ್‍ಪಿ ಗಣಪತಿ ತಮ್ಮ ಮರಣ ಪೂರ್ವ ಹೇಳಿಕೆಯಲ್ಲಿ ಜಾರ್ಜ್ ಅವರ ಹೆಸರನ್ನು ಪ್ರಸ್ತಾಪಿಸಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆ ನಡೆದಿದೆ.