ವೀರಾಜಪೇಟೆ, ನ. 29: ವೀರಾಜಪೇಟೆ ತಾಲೂಕು ಮೈದಾನದಲ್ಲಿ ನಡೆದ 7ನೇ ಕನ್ನಡ ಸಾಹಿತ್ಯ ಸಮ್ಮೇಳÀನದ ಬಹಿರಂಗ ಅಧಿವೇಶÀನದಲ್ಲಿ ಒಟ್ಟು 11 ನಿರ್ಣಯಗಳನ್ನು ಅಂಗೀಕರಿಸಿ ಜಾರಿಗೆ ತರಲು ಮನವಿ ಮೂಲಕ ಸರ್ಕಾರಕ್ಕೆ ಕಳುಹಿಸುವಂತೆ ತೀರ್ಮಾನಿಸ ಲಾಯಿತು.ವೀರಾಜಪೇಟೆ ತಾಲೂಕು ಗಡಿ ಭಾಗವಾಗಿದ್ದು, ಕನ್ನಡ ಪರ ಚಟುವಟಿಕೆಗಳಿಗೆ ಆದ್ಯತೆ ನೀಡಿ ಅನುಷ್ಠಾನಗೊಳಿಸ ಬೇಕಾಗಿರುವದರಿಂದ ಮುಂಗಡ ಪತ್ರದದಲ್ಲಿ ಹೆಚ್ಚು ಅನುದಾನ ಬಿಡುಗಡೆಗೊಳಿಸಬೇಕು. ವೀರಾಜಪೇಟೆ ತಾಲೂಕು ಮಲೆನಾಡು ಹಾಗೂ

(ಮೊದಲ ಪುಟದಿಂದ) ಗಡಿ ಪ್ರದೇಶವಾಗಿರುವ ದರಿಂದ ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಸೌಲಭ್ಯ ನೀಡಬೇಕು. ಕೊಡಗಿನಲ್ಲಿ ಈಚೆಗೆ ನಡೆಯುತ್ತಿರುವ ಆನೆ-ಮಾನವ ಸಂಘರ್ಷವನ್ನು ತಡೆಗಟ್ಟಲು ವೈಜ್ಞಾನಿಕ ಪರಿಹಾರೋಪಾಯ. ಪಡಿತರ ಸೀಮೆಎಣ್ಣೆ ಸರಬರಾಜು ಮಾಡಬೇಕು. ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸುವದು. ಕೊಡವ ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವದು. ಕನ್ನಡ ಶಾಲೆಗಳನ್ನು ಮುಚ್ಚದೆ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಬಿಡುಗಡೆ ಗೊಳಿಸಬೇಕು. ಕೊಡಗು ಮಲೆನಾಡು ಪ್ರದೇಶವಾಗಿರುವದರಿಂದ ಗಿರಿಭತ್ಯೆ ನೀಡಬೇಕು, ಕಡ್ಡಾಯವಾಗಿ ಕನ್ನಡ ನಾಮಫಲಕಗಳ ಅಳವಡಿಕೆ, ಗಡಿನಾಡ ಕನ್ನಡ ಭವನವನ್ನು ನಿರ್ಮಿಸಲು ಒತ್ತಾಯ, ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದವರಿಗೆ ಶೇ 60ರ ಅನುಪಾತದಲ್ಲಿ ಸರ್ಕಾರಿ ಕೆಲಸದಲ್ಲಿ ಮತ್ತು ಖಾಸಗಿ ಉದ್ದಿಮೆಗಳಲ್ಲಿ ಎ,ಮತ್ತು ಬಿ ದರ್ಜೆ ಹುದ್ದೆಗೆ ಆದ್ಯತೆ ನೀಡಲು ಒತ್ತಾಯ, ತಾಲೂಕುಗಳಲ್ಲಿ ನಡೆಯುವ ಸಾಹಿತ್ಯ ಸಮ್ಮೇಳನ ಸಂದರ್ಭ ಸರ್ಕಾರಿ ಶಾಲಾ ಕಚೇರಿಗಳಿಗೆ ಕಡ್ಡಾಯವಾಗಿ ರಜೆ ನೀಡಬೇಕು ಎಂಬ ನಿರ್ಣಯಗಳನ್ನು ತಾಲೂಕು ಕಾರ್ಯದರ್ಶಿ ಚಮ್ಮಟ್ಟಿರ ಪ್ರವೀಣ್ ಮಂಡಿಸಿದರು.

ವೇದಿಕೆಯಲ್ಲಿ ಸಮ್ಮೇಳನ ಅಧ್ಯಕ್ಷೆ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ, ಜಿಲ್ಲಾ ಅಧ್ಯಕ್ಷ ಲೊಕೇಶ್ ಸಾಗರ್, ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ರೇಖಾ ಶ್ರೀಧರ್ ಉಪಸ್ಥಿತರಿದ್ದರು.