ಕುಶಾಲನಗರ, ಡಿ. 22: ಜನವರಿಯಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್‍ನ 11ನೇ ಜಿಲ್ಲಾ ಸಮ್ಮೇಳನದ ಮೆರವಣಿಗೆ ಸಮಿತಿಯ ಪೂರ್ವಭಾವಿ ಸಿದ್ಧತೆ ಸಭೆ ಇತ್ತೀಚೆಗೆ ನಡೆಯಿತು.

ಸಮ್ಮೇಳನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮೆರವಣಿಗೆ ಸಮಿತಿಯ ಅಧ್ಯಕ್ಷ ಫಿಲಿಪ್‍ವಾಸ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜನವರಿ 10 ರಂದು ನಡೆಯಲಿರುವ ಮೆರವಣಿಗೆಯ ಬಗ್ಗೆ ಮಾಹಿತಿ ಒದಗಿಸಿದರು.

ಮೆರವಣಿಗೆಯಲ್ಲಿ ಸಮ್ಮೇಳನ ಅಧ್ಯಕ್ಷರೊಂದಿಗೆ ಹಲವು ಸ್ತಬ್ಧ ಚಿತ್ರಗಳು ಹಾಗೂ ಸಾಂಸ್ಕøತಿಕ ಕಲಾ ತಂಡಗಳು ಭಾಗವಹಿಸಲಿವೆ. ಈ ನಿಟ್ಟಿನಲ್ಲಿ ಸ್ಥಳೀಯ ತಂಡಗಳಿಗೆ ಆದ್ಯತೆ ನೀಡಲಾಗುವದು ಎಂದು ಫಿಲಿಪ್‍ವಾಸ್ ತಿಳಿಸಿದರು.

ಈ ಸಂದರ್ಭ ಉಪಸ್ಥಿತರಿದ್ದ ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅದ್ಧೂರಿಯಾಗಿ ನಡೆಯಲಿರುವ ಸಮ್ಮೇಳನದಲ್ಲಿ ಆಕರ್ಷಕ ಮೆರವಣಿಗೆಗೆ ಸಂಪೂರ್ಣ ತಯಾರಿ ನಡೆಸುವದರೊಂದಿಗೆ ಎಲ್ಲರ ಸಹಕಾರ ಕೋರಿದರು. ಮೆರವಣಿಗೆ ಸಮಿತಿಯ ಸಹ ಸಂಚಾಲಕರಾದ ಹೆಚ್.ಎನ್. ರಾಮಚಂದ್ರ, ಕೆ.ಎನ್. ಅಶೋಕ್, ಚಿಲ್ಲನ ಗಣಿಪ್ರಸಾದ್ ಮತ್ತು ಸದಸ್ಯರುಗಳು ಪ್ರಚಾರ ಸಮಿತಿಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು, ಶಾಲಾ-ಕಾಲೇಜು ಮುಖ್ಯಸ್ಥರು ಪಾಲ್ಗೊಂಡಿದ್ದರು.