ಕುಶಾಲನಗರ, ಆ.1 : ಕುಶಾಲನಗರದ ಶಾರದ ಮಹಿಳಾ ಪತ್ತಿನ ಸಹಕಾರ ಸಂಘ 2015-16ನೇ ಸಾಲಿನಲ್ಲಿ 3 ಲಕ್ಷದ 35 ಸಾವಿರ ರೂಗಳ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷೆ ಎಸ್.ಶಾಂತ ಶ್ರೀಪತಿ ತಿಳಿಸಿದ್ದಾರೆ.

ಸಂಘದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, 2015 ರಲ್ಲಿ 775 ಸದಸ್ಯರೊಂದಿಗೆ ಪ್ರಾರಂಭಗೊಂಡ ಸಂಘ ಪ್ರಸ್ತುತ 899 ಸದಸ್ಯರನ್ನು ಒಳಗೊಂಡಿದೆ. 2016 ಮಾರ್ಚ್ ಅಂತ್ಯಕ್ಕೆ ಸಂಘ ರೂ 24,10,000 ಪಾಲುಬಂಡವಾಳದೊಂದಿಗೆ 78 ಲಕ್ಷ ರೂಗಳ ಠೇವಣಿ ಹೊಂದಿದೆ ಎಂದು ತಿಳಿಸಿದ್ದಾರೆ. ಮಹಾಸಭೆಯ ನಿರ್ಣಯದಂತೆ ಈ ಸಾಲಿನಲ್ಲಿ ಸದಸ್ಯರಿಗೆ ಶೇ 10 ರಷ್ಟು ಡಿವಿಡೆಂಟ್ ನೀಡಲಾಗುವದು. ಸಂಘದ ವಾರ್ಷಿಕ ಮಹಾಸಭೆ ಇದೇ ತಿಂಗಳ 31 ರಂದು ಕುಶಾಲನಗರದ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷೆ ಕವಿತಾ ಜಯಂತ್ ಹಾಗೂ ನಿರ್ದೇಶಕಿ ಆಶಾ ಅಶೋಕ್, ಉಮಾರಾಜ್, ಮಂಜುಳಾ ಎನ್. ಗುಪ್ತ, ಆರ್.ಜಿ.ಛಾಯ, ಇಂದಿರಾ ತಿಮ್ಮಪ್ಪ, ಸುಶೀಲ ಸ್ವಾಮಿ, ಸುನಿತಾ ವಿಮಲ್, ರೇಖಾ ಕಮಲೇಶ್ ಇದ್ದರು.