ಮಡಿಕೇರಿ, ಸೆ. 24: ದ ಕೂರ್ಗ್ ಫೌಂಡೇಷನ್ ಮತ್ತು ಸ್ವಸ್ಥ ವತಿಯಿಂದ ಸ್ವಸ್ಥ ಸಮುದಾಯ ಆಧಾರಿತ ಪುನರ್ವಸತಿ (ಸಿ.ಬಿ.ಆರ್) ಕಾರ್ಯಕ್ರಮದಡಿ ದ ಕೂರ್ಗ್ ಫೌಂಡೇಷನ್ ಹಾಗೂ ಎ.ಪಿ.ಡಿ. ಸಂಸ್ಥೆ, ಬೆಂಗಳೂರು ಇವರ ಸಹಯೋಗ ದೊಂದಿಗೆ ಬಡ ವಿಶೇಷಚೇತನರಿಗೆ ಉಚಿತ ಸಾಧನ ಸಲಕರಣೆಗಳ ವಿತರಣಾ ಸಮಾರಂಭ ಇಂದು ಬಾಲ ಭವನದಲ್ಲಿ ನಡೆಯಿತು. ಸಮಾರಂಭ ವನ್ನು ಜಿಲ್ಲಾ ಶಿಶು ಕಲ್ಯಾಣ ಸಮಿತಿ ಪ್ರಧಾನ ಕಾರ್ಯದರ್ಶಿ ಸೀತಾಲಕ್ಷ್ಮಿ ರಾಮಚಂದ್ರ ಉದ್ಘಾಟಿಸಿದರು. ಅಧ್ಯಕ್ಷರಾದ ಮೋಹನ್ ಮೊಣ್ಣಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಭಿವೃದ್ಧಿ ನಿರೀಕ್ಷಕರಾದ ಶಾರದಾ ರಾಮನ್, ಬಾಲಕಿಯರ ಬಾಲಮಂದಿರದ ಅಧೀಕ್ಷಕರಾದ ಮುಮ್ತಾಜ್ ಮತ್ತಿತರರು ಅತಿಥಿಗಳಾಗಿ ಪಾಲ್ಗೊಂಡಿದ್ದರು.