ವೀರಾಜಪೇಟೆ,ಡಿ.22: ವೀರಾಜಪೇಟೆಯ ಗಾಂಧಿನಗರದ ಸರ್ವ ಜನಾಂಗ ಸಂಘಟನೆಯ ಪ್ರಥಮ ವರ್ಷದ ವಾರ್ಷಿಕೋತ್ಸವ ವನ್ನು ಡಿಸೆಂಬರ್ 31 ರಂದು ಸಂಜೆ 6.30 ಗಂಟೆಗೆ ವೀರಾಜಪೇಟೆಯ ತಾಲೂಕು ಮೈದಾನದ ರೋಟರಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟನೆಯ ಅಧ್ಯಕ್ಷ ಪಿ.ಎ ಮಂಜುನಾಥ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್ ಅವರು ಸರ್ವಜನಾಂಗ ಸಂಘಟನೆ ಪ್ರಾರಂಭಗೊಂಡು ಒಂದು ವರ್ಷ ಕಳೆದಿದೆ. ಪ್ರಥಮ ವರ್ಷದಲ್ಲಿಯೇ ವಿವಿಧ ಜನಪರ ಕಾರ್ಯಗಳನ್ನು ಮಾಡಿ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದೆ. ಇದರಿಂದ ಮೊದಲ ವರ್ಷದ ವಾರ್ಷಿಕೋತ್ಸವವನ್ನು ನಡೆಸಲು ಉದ್ದೇಶಿಸಲಾಗಿದೆ. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಸನ್ಮಾನಿಸಲಾಗುವದು. ಸಮಾಜ ಸೇವೆ ಹಾಗೂ ಜನಪರ ಹೋರಾಟದಲ್ಲಿ ಮೇರಿಯಂಡ ಸಂಕೇತ್ ಪೂವಯ್ಯ, ಸ್ಚಚ್ಛತಾ ಆದ್ಯತೆಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, 2015-16ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಮೊದಲ ಸ್ಥಾನ ಪಡೆದ ಕುಮಾರಿ ನಿಹಾರಿಕಾ, ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಅಂಕಿತಾ ಲೋಬೋ, ಎಂ ಅಸೀನಾ, ಅಂತರ್ರಾಷ್ಟ್ರಿಯ ಕ್ರೀಡಾಪಟು ಲಲಿತಾ ಎ.ಬಿ ಅವರುಗಳನ್ನು ಸನ್ಮಾನಿಸಲಾಗುವದು. ನನಾ ಸ್ವಾಮೀಜಿ, ಸಂತ ಅನ್ನಮ್ಮ ದೇವಾಲಯದ ಧರ್ಮಗುರು ಫಾದರ್ ಮದಲೈಮುತ್ತು, ನೆಲ್ಲಿ ಹುದಿಕೇರಿಯ ದಾರಸ್ಸಲಾಂ ಮದರಸದ ತಮ್ಲಿಖ್ ದಾರಿಮಿ, ವೀರಾಜಪೇಟೆ ಶಾಸಕ ಕೆ.ಜಿ ಬೋಪಯ್ಯ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಸಚಿನ್ ಕುಟ್ಟಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ, ಕೊಡಗು ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರಪ್ರಸಾದ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಜಿಲ್ಲಾ ಕಾಂಗ್ರೆಸ್ನ ಮಾಜಿ ಅಧ್ಯಕ್ಷ ಬಿ.ಟಿ ಪ್ರದೀಪ್, ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷೆ ದೇಚಮ್ಮ ಕಾಳಪ್ಪ, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಲಾಂ, ಸಮಾಜ ಸೇವಕರಾದ ಜಾನ್ಸಿಕಿರಣ್, ಚೋಪಿ ಜೋಸೇಫ್, ಜಿಲ್ಲಾ ಉಸ್ತುವಾರಿ ಸಚಿವರ ಆಪ್ತ ಕಾರ್ಯದರ್ಶಿ ಕದ್ದಣಿಯಂಡ ಹರೀಶ್ ಬೋಪಣ್ಣ, ಕಾಕೋಟುಪರಂಬು ಗ್ರಾಮ ಪಂಚಾಯಿತಿ ಸದಸ್ಯ ಅನಿಲ್ ಅಯ್ಯಪ್ಪ, ಸಮಾಜ ಸೇವಕರಾದ ಡಿ.ಎಚ್ ಸೂಫಿ, ಶೃಜೇಶ್ ಭರತನ್, ಮಾಲೇಟಿರ ಕುಂಞಪ್ಪ, ಸಿ.ಎ ಬಶೀರ್, ಎಸ್.ಎಚ್ ಮಂಜುನಾಥ್, ಎಂ.ಎಲ್. ಸೈನುದ್ದಿನ್ ಉಪಸ್ಥಿತರಿರುವರು. ಸಮಾರಂಭದ ನಂತರ ಕೇರಳದ ತಂಡದವರಿಂದ ಸಂಗೀತಾ ರಸ ಮಂಜರಿ ಹಾಗೂ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ ಎಂದು ಹೇಳಿದರು.