ಮಡಿಕೇರಿ, ಜು. 23: ಡಿ. ದೇವರಾಜ ಅರಸು ಜನ್ಮ ಶತಮಾ ನೋತ್ಸವದ ಪ್ರಯುಕ್ತ ಸಾಮಾಜಿಕ, ಆರ್ಥಿಕ ಕಾರ್ಯಕ್ರಮಗಳ ಮೂಲಕ ಆಧುನಿಕ ಕರ್ನಾಟಕದ ಅಭಿವೃದ್ಧಿಯನ್ನು ಪರಿಕಲ್ಪಿಸಿಕೊಂಡ ದೇವರಾಜ ಅರಸುರವರ ಜನಪರ ಚಿಂತನೆಗಳನ್ನು ಪ್ರಸ್ತುತ ಪಡಿಸುವ ನಿಟ್ಟಿನಲ್ಲಿ, ದೇವರಾಜ ಅರಸು ಜನ್ಮ ಶತಮಾನೋತ್ಸವ ಸಮಿತಿ ವತಿಯಿಂದ ಸಮತಾ ಸಮಾಜ ನಾಯಕತ್ವ ನಿರ್ಮಾಣ ಶಿಬಿರ ತಾ. 30 ಮತ್ತು 31 ರಂದು ಎರಡು ದಿವಸಗಳ ಕಾಲ ಮಂಗಳೂರಲ್ಲಿ ನಡೆಯಲಿದೆ.

ಶಿಬಿರದಲ್ಲಿ ತಾಲೂಕು ಪಂಚಾಯಿತಿ ಸದಸ್ಯರು, ಜಿಲ್ಲಾ ಪಂಚಾಯಿತಿ ಸದಸ್ಯರು, ವಿದ್ಯಾರ್ಥಿ ನಾಯಕರು, ಶಿಕ್ಷಕರು-ಉಪನ್ಯಾಸಕರು/ಸ್ತ್ರೀ ಶಕ್ತಿ ಸಂಘಟಕರು, ಎನ್‍ಜಿಒ ಕಾರ್ಯಕರ್ತರು, ಸಾಮಾಜಿಕ, ಸಾಂಸ್ಕೃತಿಕ ಸಂಘಟನೆಗಳ ಕಾರ್ಯ ಕರ್ತರು ಪಾಲ್ಗೊಳ್ಳಬಹುದಾಗಿದೆ. ಆಸಕ್ತರು ತಾ. 23 ರೊಳಗಾಗಿ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿ. ಇಲ್ಲಿಗೆ ಮನವಿಯನ್ನು ಸಲ್ಲಿಸುವದು.

ಜಿಲ್ಲೆಯಿಂದ ಒಟ್ಟು 7 ಅಭ್ಯರ್ಥಿ ಗಳಿಗೆ ಅವಕಾಶವಿದೆ. ಶಿಬಿರಾರ್ಥಿ ಗಳಿಗೆ ವಸತಿ ಸೌಲಭ್ಯವನ್ನು ಒದಗಿಸ ಲಾಗುವದಲ್ಲದೆ, ಅವರ ಪ್ರಯಾಣ ಹಾಗೂ ಎರಡೂ ದಿವಸಗಳ ಊಟ ತಿಂಡಿಯ ವೆಚ್ಚ ಭರಿಸಲಾಗುವದು.

ಹೆಚ್ಚಿನ ಮಾಹಿತಿಗೆ 9747757291 ಹಾಗೂ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ದೇವರಾಜ ಅರಸು ಭವನ, ಮ್ಯಾನ್ಸ್ ಕಾಂಪೌಂಡ್ ಹತ್ತಿರ, ಮಡಿಕೇರಿ. ಈ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು. ಇಲ್ಲಿನ ದೂ ಸಂ. 08272-225628 ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಜಿಲ್ಲಾ ಬಿಸಿಎಂ ಅಧಿಕಾರಿ ಕೆ.ವಿ. ಸುರೇಶ್ ಕೋರಿದ್ದಾರೆ.