ಚೆಟ್ಟಳ್ಳಿ, ನ. 30: ಕೊಡವ ಸಂಸ್ಕøತಿ ಕುರಿತ ಕಾರ್ಯಕ್ರಮವನ್ನು ಕೊಡಗಿನ ಆಯಾ ಊರಿನಲ್ಲಿ ನಡೆಸಿಕೊಂಡು ಬರುತ್ತಿದ್ದು, ಅದು ಆಯಾಯ ಊರಿನ ಮಹತ್ವವನ್ನು ಪ್ರತಿಬಿಂಬಿಸುತ್ತಿದೆ ಎಂದು ಚೆಂಬೆಬೆಳ್ಳೂರಿನಲ್ಲಿ ನಡೆದ ಆಟ್ ಪಾಟ್‍ಪಡಿಪು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಕರ್ನಾಟಕ ಕೊಡವÀ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಹೇಳಿದರು.
ಕೊಡವÀ ಸಾಹಿತ್ಯ ಅಕಾಡೆಮಿ ಪ್ರಾರಂಭವಾದಲ್ಲಿಂದ ವಿವಿಧ ಕಾರ್ಯಕ್ರಮವನ್ನು ಆಯೋಜಿಸುತ್ತಾ ಬಂದಿದ್ದು, 3 ವರ್ಷಗಳಿಂದ ಹಲವು ಕಾರ್ಯಕ್ರಮವನ್ನು ಆಯೋಜಿಸ ಲಾಗಿದೆ ಎಂದರು.
ಊರಿನ ಮಂದ್,ಮಾನಿ ದೇವಾಲಯಗಳಲ್ಲಿ ಸಂಸ್ಕøತಿಯ ಉಳಿಕೆಯ ಜೊತೆಗೆ ರಕ್ಷಣೆಯ ಜವಾಬ್ದಾರಿ ನಮ್ಮೆಲ್ಲರ ಕರ್ತವ್ಯ ವೆಂದರು. ಕೊಡಗಿನಲ್ಲಿ ಸಂಸ್ಕøತಿ ಆಚರಣೆ ಚೆಂಬೆಬೆಳ್ಳೂರು ಮಹಿಳಾ ಸಮಾಜದಲ್ಲಿ ಕರ್ನಾಟಕ ಕೊಡವÀ ಸಾಹಿತ್ಯ ಅಕಾಡೆಮಿ, ಚೆಂಬೆಬೆಳ್ಳೂರಿನ ಕೊಡವ ಅಸೋಸಿಯೇಷನ್ ಹಾಗೂ ಮಹಿಳಾ ಸಮಾಜದ ಸಂಯುಕ್ತ ಆಶ್ರಯದಲ್ಲಿ ನಡೆದ ಆಟ್-ಪಾಟ್‍ಪಡಿಪು ಸಮಾರೋಪ ಸಮಾರಂಭದ ಅಂಗವಾಗಿ ಕೊಡವ ಅಸೋಸಿಯೇಷನ್‍ನಿಂದ ದುಡಿಕೊಟ್ಟ್ ಹಾಡಿನೊಂದಿಗೆ ಮಹಿಳಾ ಸಮಾಜಕ್ಕೆ ತೆರಳಲಾಯಿತು. ಕೊಡವ ಅಸೋಸಿಯೇಷನ್‍ನ ಅಧ್ಯಕ್ಷ ಕೊಳವಂಡ ಕಾರ್ಯಪ್ಪ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿ, ಸಂಸ್ಕøತಿಯು ಪ್ರತಿಯೊಂದು ಜನಾಂಗದ ಆಧಾರ ಸ್ತಂಭ ಅದನ್ನೇ ಕಳೆದುಕೊಂಡರೆ ಜನಾಂಗಕ್ಕೆ ತೊಂದರೆಯಾಗಲಿದೆ ಎಂದರು. ಅಳಿವಿನ ಅಂಚಿನಲ್ಲಿರುವ ಈ ಸಂಸ್ಕøತಿಯನ್ನು ಉಳಿಸುವ ಕಾರ್ಯವನ್ನು ಕೊಡವ ಸಾಹಿತ್ಯ ಅಕಾಡೆಮಿ ನಡೆಸುತ್ತಿದೆಂದರು. ವೇದಿಕೆಯಲ್ಲಿದ್ದ ಅತಿಥಿಗಳು ಕೊಡವ ಸಂಸ್ಕøತಿಯ ಬಗ್ಗೆ ಮಾತನಾಡಿದರು.
ಅತಿಥಿಗಳಾಗಿ ಚೆಂಬೆಬೆಳ್ಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ವಾಟೇರಿರ ಪ್ರೇಮ್ ನಾಣಯ್ಯ, ಚೆಂಬಂಡ ಮುದ್ದಪ್ಪ, ಊರಿನ ಅಧ್ಯಕ್ಷ ಚಾರಿಮಂಡ ಬಾನು ಬೋಪಣ್ಣ, ಮಹಿಳಾ ಸಮಾಜದ ಅಧ್ಯಕ್ಷೆ ಮಂಡೇಪಂಡ ಸುಮಿತ್ರ, ಗ್ರಾಮ ಪಂಚಾಯಿತಿ ಸದಸ್ಯರಾದ ಚೆಂಬಂಡ ರಂಜು ಭೀಮಯ್ಯ, ಕೋಳೆರ ಟೀನಾ, ತರಬೇತುದಾರರಾದ ಐಮಂಡ ರಶ್ಮಿ, ಮುಂಡಚಾಡಿರ ರೆನ್ನಿ, ಚೇಂದಂಡ ಅಚ್ಚಯ್ಯ ಭಾಗವಹಿಸಿದ್ದರು. ಮಕ್ಕಳಿಂದ ಬೊಳಕಾಟ್, ಕೋಲಾಟ್, ಉಮ್ಮತಾಟ್ ಹಾಗೂ ಎರವಾಟ್ ಪ್ರದÀರ್ಶನವಿತ್ತು.
ಚೇದಂಡ ಪಾಯಲ್ ತಂಡದಿಂದ ಪ್ರಾರ್ಥನೆ, ಕೊಡವ ಅಸೋಸಿಯೇಷನ್‍ನ ಕಾರ್ಯದರ್ಶಿ ಚೇಂದಂಡ ನವೀನ್ ಸ್ವಾಗತಿಸಿ, ಚೆಂಬಾಂಡ ಮುದ್ದಪ್ಪ ವಂದಿಸಿದರು. ಕೊಡವ ಸಾಹಿತಿ ಸೋಮೆಯಂಡ ಬೋಸ್ ಬೆಳ್ಯಪ್ಪ ನಿರೂಪಿಸಿದರು.
-ಪುತ್ತರಿರ ಕರುಣ್ ಕಾಳಯ್ಯ, ಪಪ್ಪು ತಿಮ್ಮಯ್ಯ