ವೀರಾಜಪೇಟೆ, ಅ. 31: ಜಾತಿ, ಮತ, ಬೇಧವಿಲ್ಲದೆ ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಸಮಸ್ಯೆಗೆ ಸ್ಪಂದಿಸುವಂತಹ ಸಂಘಟನೆಗಳು ಸ್ಥಾಪನೆಯಾದರೆ ಮಾತ್ರ ಜಾತಿ ರಹಿತ ಸಮಾಜ ಸೇವೆ ಅರ್ಥ ಪೂರ್ಣ ವಾಗಲಿದೆ ಎಂದು ಉದ್ಯಮಿ ಎ.ಸಿ. ಚೋಪಿ ಜೋಸೆಫ್ ಅಭಿಪ್ರಾಯಪಟ್ಟರು.ವೀರಾಜಪೇಟೆಯ ಗಾಂಧಿನಗರದ ಸರ್ವಜನಾಂಗ ಸಂಘಟನೆಯ ಲಾಂಛನ (ಲೋಗೋ) ಬಿಡುಗಡೆ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚೋಪಿ ಜೋಸೆಫ್ ಅವರು ನಿಸ್ಸಹಾಯಕರು, ಕಡು ಬಡವರು, ನಿರ್ಗತಿಕ ವರ್ಗಗಳಿಗೆ ಸಂಘಟನೆ ಸೇವೆಯಲ್ಲಿ ಆದ್ಯತೆ ನೀಡುವಂತಾಗಬೇಕು ಎಂದರು.

ಗಾಂಧಿನಗರದ ಮಾಳೇಟೀರ ಕಾಶಿ ಕುಂಞಪ್ಪ ಮಾತನಾಡಿ, ಜಾತ್ಯಾತೀತ ಮನೋಭಾವನೆಯನ್ನು ಹೊಂದಿರುವ ಸರ್ವಜನಾಂಗ ಸಂಘಟನೆ ಯಾವದೇ ಜಾತಿ, ಧರ್ಮ, ರಾಜಕೀಯ ಪಕ್ಷಕ್ಕೆ ಸೀಮಿತವಾಗದೆ ಸರ್ವಜನಾಂಗಕ್ಕೂ ಸಮಾನತೆಯ ಸೇವೆ ಸಲ್ಲಿಸುವಂತಾಗ ಬೇಕು ಎಂದರು. ಸಂಘಟನೆಯ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಗಾಂಧಿನಗರದ ಪಿ.ಎ.ಮಂಜುನಾಥ್ ಮಾತನಾಡಿ, ಸರ್ವ ಜನಾಂಗ ಸರ್ವ ಧರ್ಮೀಯರ ಒಕ್ಕೂಟ, ಸಮಾಜಕ್ಕೆ ಒಳಿತಾಗುವ ಸೇವೆಗೆ ಸಂಘಟನೆ ಮೀಸಲಾಗಿದ್ದು ಸೇವೆಯಲ್ಲಿ ಯಾವದೇ ಜಾತಿ ಬೇಧವಿಲ್ಲ. ಸಂಘಟನೆಯಲ್ಲಿ ಎಲ್ಲರಿಗೂ ಸಮಾನತೆಯ ಸೇವೆ ಒದಗಲಿದೆ ಎಂದರು.

ಅತಿಥಿಯಾಗಿ ಭಾಗವಹಿಸಿದ್ದ ಉದ್ಯಮಿ ಅಶ್ರಫ್ ಮಾತನಾಡಿದರು. ವೀರಾಜಪೇಟೆ ಪಟ್ಟಣ ಪಂಚಾಯಿತಿಗೆ ಸೇರಿದ ಗಾಂಧಿನಗರದ ಕೊಡವ ಒಕ್ಕೂಟ ನಿರ್ವಹಣೆಯ ಕಟ್ಟಡದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಕಾರ್ಯರ್ತರುಗಳಾದ ಕುಂಞÂೀರ ಸುನು ಸುಬ್ಬಯ್ಯ, ಉದ್ಯಮಿ ಎಸ್.ಎಚ್.ಮಂಜುನಾಥ್, ಫಾಜಿಲ್, ನೌಪಲ್, ಬ್ಲೇಜಿ ಸಿಕ್ಷೇರಾ, ಲತೀಫ್, ವಸಂತ್ ಕುಮಾರ್, ತಿಮ್ಮಯ್ಯ, ಹರ್ಷಗೌಡ, ಟಿ.ಆರ್.ಹರ್ಷ, ಮನೋಜ್ ಗೌಡ, ಬೆನ್ನಿ, ಕೆ.ಆರ್. ಅನಿಲ್, ಎಂ.ಕೆ.ಗಣೇಶ್, ಶ್ರೀಜಿತ್, ಮೈಕಲ್ ಮೇನೇಜಸ್, ಪ್ರಿತೇಶ್ ಮತ್ತಿತರರು ಹಾಜರಿದ್ದರು.