ಮಡಿಕೇರಿ, ಆ. 27: ಸ್ಪರ್ಧಾತ್ಮಕ ವಾದ, ಅತ್ಯಂತ ಕ್ಲಿಷ್ಟಕರವಾದ ಯು.ಪಿ.ಎಸ್.ಸಿ. ಪರೀಕ್ಷೆ ತೆಗೆದು ಕೊಳ್ಳುವ ಕೊಡಗಿನ ಯುವ ಜನಾಂಗದ ಸಂಖ್ಯೆ ಕಡಿಮೆಯೇ ಎನ್ನಬಹುದು. ಇಂತಹ ಸನ್ನಿವೇಶದಲ್ಲಿ ಕೆಲವು ವರ್ಷದ ಹಿಂದೆ ಜಿಲ್ಲೆಯ ಯುವತಿಯೋರ್ವಳು ಈ ಸಾಧನೆ ತೋರಿ ಇತರರಿಗೆ ಪ್ರೇರಣೆಯಾಗಿ ದ್ದಾಳೆ.
ಇಂಜಿನಿಯರಿಂಗ್ ಪದವಿ ಬಳಿಕ ಯು.ಪಿ.ಎಸ್.ಸಿ. ಪರೀಕ್ಷೆ ತೆಗೆದುಕೊಂಡ ಮೂಕೋಂಡ ಪ್ರೀತ್ ನಂತರ ಐ.ಪಿ.ಎಸ್. ಪದವಿ ಪಡೆದು ಆರಂಭದಲ್ಲಿ ಎಸ್.ಪಿ.ಯಾಗಿ ಆಯ್ಕೆಯಾಗಿ ಉತ್ತರಪ್ರದೇಶಕ್ಕೆ ನಿಯೋಜಿತರಾಗಿದ್ದರು. ಆದರೆ ನಂತರದ ದಿನದಲ್ಲಿ ಎಸ್.ಪಿ.ಯಾಗಿ ಕೆಲಸ ನಿರ್ವಹಿಸಲು ಆಸಕ್ತಿ ತೋರದೆ ಮತ್ತೆ ಐ.ಆರ್.ಎಸ್. (ಇಂಡಿಯನ್ ರೆವಿನ್ಯೂ ಸರ್ವೀಸ್) ಸ್ಪರ್ಧಾತ್ಮಕ ಪರೀಕ್ಷೆ ಬರೆದು ಈ ಪದವಿಯನ್ನು ಪಡೆದುಕೊಂಡರು. ಪ್ರಸ್ತುತ ಬೆಂಗಳೂರಿನಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಉನ್ನತ ಅಧಿಕಾರಿ ಯಾಗಿ ಇವರು ಕರ್ತವ್ಯ ನಿರ್ವಹಿಸುತಿ ್ತದ್ದಾರೆ. ನಿವೃತ್ತ ಎಸ್.ಪಿ.ಯಾಗಿರುವ ಅಮ್ಮತ್ತಿಯ ಮೂಕೋಂಡ ಗಣಪತಿ ಹಾಗೂ ಗೌರಿ ದಂಪತಿಯ ಪುತ್ರಿಯಾಗಿರುವ ಪ್ರೀತ್ ಗಣಪತಿ ನಿನ್ನೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ಸಿದ್ದಾಪುರದ ದೇವಣಿರ ವಿಜಯ್ ಹಾಗೂ ಲೀಲಾ ಅವರ ಪುತ್ರ ಸಾಫ್ಟ್‍ವೇರ್ ಇಂಜಿನಿಯರ್ ಕೌಶಿಕ್ ಕಾರ್ಯಪ್ಪ ಅವರನ್ನು ಪ್ರೀತ್ ಬಾಳ ಸಂಗತಿಯನ್ನಾಗಿ ಆರಿಸಿಕೊಂಡಿದ್ದು, ವೀರಾಜಪೇಟೆ ಸೆರಿನಿಟಿ ಹಾಲ್‍ನಲ್ಲಿ ನಿನ್ನೆ ವಿವಾಹ ನೆರವೇರಿತು. -ಶಶಿ