ಮಡಿಕೇರಿ, ಡಿ. 5: ಕನ್ನಡ ಮತ್ತು ಸಂಸ್ಕøತಿ ಇಲಾಖೆ ಹಾಗೂ ವಿವಿಧ ಅಕಾಡೆಮಿಗಳು ಮತ್ತು ಪ್ರಾಧಿಕಾರಗಳ ಸಂಯುಕ್ತಾಶ್ರಯದಲ್ಲಿ ತಾ. 7 ರಂದು (ನಾಳೆ) ಮತ್ತು ತಾ. 8 ರಂದು ನಗರದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಸಂಗಮ - ಸಂಭ್ರಮ - 2016 ಸಾಂಸ್ಕøತಿಕ ಸಾಮರಸ್ಯ ಕಾರ್ಯಕ್ರಮಕ್ಕೆ ಭರದ ಸಿದ್ಧತೆ ನಡೆಯುತ್ತಿದೆ.
60ಘಿ 40 ಅಡಿ ಅಳತೆಯ ಭವ್ಯ ವೇದಿಕೆ ನಿರ್ಮಾಣವಾಗುತ್ತಿದ್ದು, 2000ಕ್ಕೂ ಅಧಿಕ ಮಂದಿ ಕುಳಿತು ಕಾರ್ಯಕ್ರಮ ವೀಕ್ಷಿಸಲು ಪೆಂಡಾಲು ವ್ಯವಸ್ಥೆ ಮಾಡಲಾಗುತ್ತಿದೆ. ವೇದಿಕೆಯ ಬಲಭಾಗದಲ್ಲಿ 30 ಸ್ಟಾಲ್‍ಗಳನ್ನು ತೆರೆಯಲಾಗುತ್ತಿದ್ದು, ಪುಸ್ತಕ, ಲಲಿತ ಕಲೆ, ಶಿಲ್ಪಕಲೆ ಪ್ರದರ್ಶನ ಕೊಡವ ಗೌಡ ಸಂಸ್ಕøತಿಯನ್ನು ಬಿಂಬಿಸುವ ಪ್ರಾಚೀನ ವಸ್ತುಗಳ ಸಂಗ್ರಹ ನೋಡುಗರ ಕಣ್ಮನ ಸೆಳೆಯಲಿದೆ. ತಾ. 7 ರಂದು (ನಾಳೆ) ಬೆಳಿಗ್ಗೆ 10 ಗಂಟೆಗೆ ಗಾಂಧಿ ಮೈದಾನದಿಂದ ಫೀ.ಮಾ. ಕಾರ್ಯಪ್ಪ ಕಾಲೇಜುವರೆಗೆ ಆಕರ್ಷಕ ಸಾಂಸ್ಕøತಿಕ ಮೆರವಣಿಗೆ ನಡೆಯಲಿದ್ದು, ಬಳಿಕ 11.30 ಗಂಟೆಗೆ ಸಮಾರಂಭ ನಡೆಯಲಿದೆ.