ಮಡಿಕೇರಿ, ಡಿ. 19 : ತಾ. 11 ರಂದು ಶ್ರೀ ಕೋದಂಡರಾಮ ದೇವಾಲಯ ಟ್ರಸ್ಟ್ ಆಶ್ರಯದಲ್ಲಿ ವಿಶೇಷ ಸಭೆಯೊಂದನ್ನು ಕರೆಯಲಾಗಿತ್ತು. ಸಭೆಯ ಅಧ್ಯಕ್ಷತೆಯನ್ನು ಟ್ರಸ್ಟ್‍ನ ಅಧ್ಯಕ್ಷ ಎಸ್. ಸಂಪತ್‍ಕುಮಾರ್ ವಹಿಸಿದ್ದರು. ಈ ವಿಶೇಷ ಸಭೆಯಲ್ಲಿ ಶ್ರೀರಾಮಸೇವಾ ಸಮಿತಿಯ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ತಿಮ್ಮಯ್ಯ ಹೆಚ್. ಎನ್., ಉಪಾಧ್ಯಕ್ಷರಾಗಿ ಕಾವೇರಪ್ಪ ಹೆಚ್. ಜಿ., ಪ್ರಧಾನ ಕಾರ್ಯದರ್ಶಿಯಾಗಿ ವಿಶ್ವನಾಥ ಆರ್., ಖಜಾಂಚಿಯಾಗಿ ಭರತ್ ಎಸ್., ಕಾರ್ಯದರ್ಶಿಯಾಗಿ ಗಿರೀಶ್ ಭೀಮಯ್ಯ ಹೆಚ್. ಬಿ., ಸಹ ಕಾರ್ಯದರ್ಶಿಯಾಗಿ ರಘು ಹೆಚ್. ಆರ್., ನಿರ್ದೇಶಕರುಗಳಾಗಿ ಕಾಳಪ್ಪ ಹೆಚ್. ಎನ್., ಗಂಗಾಧರ್ ಹೆಚ್. ಆರ್., ಶಿವಕುಮಾರ್ ಹೆಚ್. ಎಂ., ಗೋಪಿನಾಥ್ ಹೆಸ್. ಎಸ್. ಸೋಮಶೇಖರ್ ಹೆಚ್. ಎನ್. , ಸುರೇಶ್ ಹೆಚ್. ಕೆ., ಸುಬ್ರಮಣಿ ಹೆಚ್. ಎನ್., ಶೇಖರ್ ಹೆಚ್. ಡಿ.; ವಸಂತ ಎಸ್., ಹರೀಶ್ ಹೆಚ್. ಕೆ., ಯತೀಶ್ ಹೆಚ್. ಎಸ್. ಇವರುಗಳನ್ನು ಆಯ್ಕೆ ಮಾಡಲಾಯಿತು. ಮುಖ್ಯ ಸಲಹೆಗಾರರಾಗಿ ಜಿ. ರಾಜೇಂದ್ರ, ಆಹ್ವಾನಿತರಾಗಿ ಎಸ್. ಸಂಪತ್ ಕುಮಾರ್, ನಂಜುಂಡ ಹೆಚ್. ಎನ್. ಕುಶಾಲ್ ಎಸ್. ಇವರುಗಳನ್ನು ಆರಿಸಲಾಯಿತು.