ಶ್ರೀಮಂಗಲ, ಡಿ. 19: ನೆಮ್ಮಲೆ ಗ್ರಾಮದ ಶ್ರೀ ದುರ್ಗಿ ದೇವಿಯ ಉತ್ಸವ ತಾ. 11 ರಂದು ಕೊಡಿಮರ ನಿಲ್ಲಿಸುವದರೊಂದಿಗೆ ಪ್ರಾರಂಭವಾಗಿ ಹುತ್ತರಿ ಹಬ್ಬದೊಂದಿಗೆ ವಿಜೃಂಭಣೆಯಿಂದ ಜರುಗಿತು.
ವರ್ಷಂಪ್ರತಿ ಹುತ್ತರಿ ಹಬ್ಬದಂದೇ ಜರುಗುವ ದುರ್ಗಿ ದೇವಿಯ ಉತ್ಸವ ಈ ಬಾರಿ ಮಂಗಳವಾರ ಪೂರ್ವಾಹ್ನ ವಿವಿಧ ಪೂಜಾ ಕೈಂಕರ್ಯಗಳೊಂದಿಗೆ ಪ್ರಾರಂಭವಾಗಿ ಸಂಜೆ 5 ಗಂಟೆಗೆ ದೇವಿಯ ಉತ್ಸವಮೂರ್ತಿ ದೇವಸ್ಥಾನಕ್ಕೆ ಪ್ರದಕ್ಷಿಣೆ ಬರುವದರೊಂದಿಗೆ ವಸಂತಪೂಜೆ ನಡೆದು ದುರ್ಗಿ ದೇವಿಯ ಮೂಲಸ್ಥಾನಕ್ಕೆ ಬಂದು ರಾತ್ರಿ 7.30 ಗಂಟೆಗೆ ದೇವಿಯ ಅವಬೃತ ಸ್ನಾನದ ನಂತರ 8 ಗಂಟೆಗೆ ಕದಿರು ತೆಗೆಯಲಾಯಿತು.
ಉತ್ಸವದ ಮೇಲುಸ್ತುವಾರಿಯನ್ನು ದೇವಸ್ಥಾನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಚೆಟ್ಟಂಗಡ ಪಿ. ಡಾಲಿ ಹಾಗೂ ಆಡಳಿತ ಮಂಡಳಿ ಸದಸ್ಯರು, ತಕ್ಕ ಮುಖ್ಯಸ್ಥರಾದ ಚೆಟ್ಟಂಗಡ ಕೆ. ನಾಣಯ್ಯ, ಚೊಟ್ಟೆಯಾಂಡಮಾಡ ಮಂಜು, ಚೊಟ್ಟೆಯಾಂಡಮಾಡ ದೇವಯ್ಯ, ಅರ್ಚಕ ಜಯಂತ್ ಮತ್ತಿತರರು ವಹಿಸಿದ್ದರು.