ಸುಂಟಿಕೊಪ್ಪ, ಆ. 29: ಶ್ರೀ ಕೃಷ್ಣನ ಬದುಕಿನ ವಿಚಾರಧಾರೆಗಳನ್ನು ಎಲ್ಲರೂ ತಿಳಿದುಕೊಳ್ಳಬೇಕು ಎಂದು ಮಹಿಳಾ ಸಮಾಜದ ಅಧ್ಯಕ್ಷೆ ಲೀಲಾ ಮೇದಪ್ಪ ಹೇಳಿದರು.

ವಿಶ್ವ ಹಿಂದೂ ಪರಿಷದ್ ಮತ್ತು ಮಾತೃ ಮಂಡಳಿ ಸಮಿತಿಯ ವತಿಯಿಂದ ಇಲ್ಲಿನ ರಾಮ ಮಂದಿರ ದಲ್ಲಿ ನಡೆದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸ್ವಸ್ಥ ಸಮಾಜದ ನಿರ್ಮಾಣ ಕ್ಕಾಗಿ, ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಕೃಷ್ಣನ ಜೀವನ ಚರಿತ್ರೆಯನ್ನು ಅಧ್ಯಯನ ಮಾಡುವದರಿಂದ ಸಮಾಜದಲ್ಲಿ ಉತ್ತಮ ಜೀವನವನ್ನು ನಡೆಸಲು ಸಾಧ್ಯ ಎಂದರು. ಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ 3 ರಿಂದ 7 ವಯಸ್ಸಿನ ಒಳಗಿನ ಮಕ್ಕಳಿಗೆ ಶ್ರೀ ಕೃಷ್ಣ ಮತ್ತು ರಾಧ ಛದ್ಮವೇಷವನ್ನು ಏರ್ಪಡಿಸ ಲಾಗಿತ್ತು. ಪುಟ್ಟಪುಟ್ಟ ಮಕ್ಕಳು ಬಹಳ ಉತ್ಸಾಹದಿಂದಲೇ ಭಾಗವಹಿಸಿ ಬಹುಮಾನ ಪಡೆದುಕೊಂಡರು. ನಂತರ ರಾಮ ಮಂದಿರದಲ್ಲಿ ಮಾತೃ ಮಂಡಳಿ ವತಿಯಿಂದ ಪೂಜೆ ಕೈಂಕರ್ಯಗಳು ನಡೆದವು. ಈ ಸಂದರ್ಭ ಮಾತೃ ಮಂಡಳಿಯ ಅಧ್ಯಕ್ಷೆ ರಾಜಲಕ್ಷ್ಮಿ, ಉಪಾಧ್ಯಕ್ಷೆ ಮಂಗಳ ಕಾಮತ್, ಕಾರ್ಯದರ್ಶಿ ಜಾನು ಭಾಸ್ಕರ್, ಖಜಾಂಚಿ ಗಿರಿಜ ಉದಯಕುಮಾರ್, ಮತ್ತಿತರರು ಇದ್ದರು.