ನಾಪೆÇೀಕ್ಲು, ಜ. 16: ಮನುಷ್ಯನ ಒಳ್ಳೆಯ ಗುಣ, ಆತನ ಮೌಲ್ಯ ಏನೆಂಬದು ಆತನ ಸಾವಿನಲ್ಲಿ ಅರಿವಾಗುತ್ತದೆ ಎಂಬ ಮಾತಿದೆ. ಆ ಮಾತಿಗೆ ನೈಜ ಉದಾಹರಣೆ ನಿನ್ನೆ ನಿಧನರಾದ ಕಾಂಗ್ರೆಸ್ ನಾಯಕ ಬಿ.ಟಿ. ಪ್ರದೀಪ್. ಪ್ರದೀಪ್ ಅವರ ಅಂತಿಮ ದರ್ಶನಕ್ಕೆ ಆಗಮಿಸಿದ ಜನ ಇದಕ್ಕೆ ಸಾಕ್ಷಿ. ಜಿಲ್ಲೆಯ ಮೂಲೆ, ಮೂಲೆಯಿಂದ ಬಡವ ಬಲ್ಲಿದ ಎಂಬ ಬೇಧವಿಲ್ಲದೆ ಬಂದ ಜನತೆ ಸರತಿ ಸಾಲಿನಲ್ಲಿ ಕಾದು ನಿಂತು ಅಗಲಿದ ತಮ್ಮ ನಾಯಕನ ಅಂತಿಮ ದರ್ಶನ ಪಡೆದು ಕಂಬನಿಗರೆದರು. ಸಾಲಿನಲ್ಲಿ ಗಣ್ಯರು: ಜನ ಸಾಮಾನ್ಯರೊಡನೆ ಗಣ್ಯರೂ ಕೂಡ ಸರತಿ ಸಾಲಿನಲ್ಲಿ ತಾಳ್ಮೆಯಿಂದ ನಿಂತು ಮೃತ ದೇಹದ ಅಂತಿಮ ದರ್ಶನ ಪಡೆದದ್ದು ವಿಶೇಷವಾಗಿತ್ತು. ಜನ ಜಂಗುಳಿ ಹೆಚ್ಚಿದಂತೆ ದರ್ಶನ ಪಡೆದ ಜನರನ್ನು ಮನೆಯ ಹಿಂಬದಿ ಬಾಗಿಲಿನಿಂದ ಹೊರ ಕಳುಹಿಸುವ ವ್ಯವಸ್ಥೆ ಮಾಡಬೇಕಾಯಿತು.

ನಾಪೆÇೀಕ್ಲುವಿನಲ್ಲಿ ಸೋಮವಾರ ಸಂತೆ ದಿನವಾದ ಕಾರಣ ಜನ ಮತ್ತು ವಾಹನ ದಟ್ಟಣೆ, ಮೃತ ದೇಹದ ಅಂತಿಮ ದರ್ಶನ ಪಡೆಯಲು ಬಂದ ವಾಹನಗಳಿಂದಾಗಿ ರಸ್ತೆ ಕಿಕ್ಕಿರಿದಿತ್ತು. ಶ್ರೀರಾಮ ಮಂದಿದ ಬಳಿಯ ರಸ್ತೆಯಿಂದ ಸಾಗಿ ಮೂಟೇರಿಯಿಂದ ಹಳೇ ತಾಲೂಕು ರಸ್ತೆಗೆ ಸಂಪರ್ಕ ಕಲ್ಪಸುವ ರಸ್ತೆಯನ್ನು ಏಕಮುಖ ಸಂಚಾರಕ್ಕೆ ವ್ಯವಸ್ಥೆಗೊಳಿಸಲಾಗಿತ್ತು. ಆದರೂ ವಾಹನ ದಟ್ಟಣೆ ಕಡಿಮೆಯಾಗದ ಹಿನ್ನೆಲೆಯಲ್ಲಿ ಬಿದ್ದಾಟಂಡ ವಾಡೆಯ ಕೋಲ್ ಮಂದ್ ಹಾಗೂ ಅದರ ಸಮೀಪದ ಗದ್ದೆಯಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲಿಂದ ಸುಮಾರು ಎರಡು ಕಿ.ಮೀ. ದೂರಕ್ಕೆ ನಿಗದಿತ ವಾಹನಗಳಲ್ಲಿ ಮಾತ್ರ ಜನ ಸಾಗಿಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಅದನ್ನು ಕಾಯದ ಜನ ಕಾಲ್ನಡಿಗೆಯಲ್ಲಿ ಧಾವಂತದಿಂದ ಸಾಗುತ್ತಿದ್ದ ದೃಶ್ಯವೂ ಕಂಡು ಬಂತು.

ಸೂಕ್ತ ಪೆÇಲೀಸ್ ವ್ಯವಸ್ಥೆ: ಜನ ಹಾಗೂ ವಾಹನ ದಟ್ಟಣೆಯ ಹಿನ್ನಲೆಯಲ್ಲಿ ಡಿವೈಎಸ್ಪಿ ಛಬ್ಬಿ ನೇತೃತ್ವದಲ್ಲಿ ಮೂವರು ಜನ ವೃತ್ತ ನಿರೀಕ್ಷಕರು, ಮೂವರು ಎಸ್.ಐ, ಎಂಟು ಜನ ಮಹಿಳಾ ಸಿಬ್ಬಂದಿ ಸೇರಿದಂತೆ ಒಟ್ಟು 50 ಪೆÇಲೀಸ್ ಸಿಬ್ಬಂದಿ ವಾಹನ ನಿಯಂತ್ರಣಾ ಕಾರ್ಯಕ್ಕೆ ನಿಯೋಜನೆಗೊಂಡಿದ್ದರು. ಕರ್ತವ್ಯಕ್ಕೆ ಆಗಮಿಸಿದ್ದ ಪೆÇಲೀಸರು ಕೂಡ ಪಾರ್ಥಿವ ಶರೀರಕ್ಕೆ ಪುಷ್ಪಗುಚ್ಚವಿರಿಸಿ ಗೌರವ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ಅಂತಿಮ ದರ್ಶನ ಪಡೆದ ಗಣ್ಯರು: ಜಿಲ್ಲಾ ಉಸ್ತುವಾರಿ ಸಚಿವ ಎಂ. ಆರ್. ಸೀತಾರಾಂ, ರಾಜ್ಯ ರೇಷ್ಮೆ ಮತ್ತು ಪಶು ಸಂಗೋಪನಾ ಸಚಿವ ಎ.ಮಂಜು, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಕೆ.ಜಿ.ಬೋಪಯ್ಯ, ಅಪ್ಪಚ್ಚು ರಂಜನ್, ಎಂ.ಎಲ್.ಸಿ ಸುನಿಲ್ ಸುಬ್ರಮಣಿ, ರಾಜ್ಯ ಕರಕುಶಲ ನಿಗಮದ ಅಧ್ಯಕ್ಷೆ ಶಾಂತೆಯಂಡ ವೀಣಾ ಅಚ್ಚಯ್ಯ, ಅರಣ್ಯ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೆÇನ್ನಪ್ಪ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಸಂಕೇತ್ ಪೂವಯ್ಯ, ಮಾಜಿ ಸಂಸದ ಹೆಚ್.ವಿಶ್ವನಾಥ್, ಮಾಜಿ ಮಂತ್ರಿ ಜೀವಿಜಯ, ಮಾಜಿ ಶಾಸಕ ಹೆಚ್.ಡಿ.ಬಸವರಾಜು, ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮಾಜಿ ಎಂ.ಎಲ್.ಸಿ. ಅರುಣ್ ಮಾಚಯ್ಯ, ಮುಖಂಡರಾದ ಚಂದ್ರಮೌಳಿ, ಕದ್ದಣಿಯಂಡ ಹರೀಶ್ ಬೋಪಣ್ಣ, ಬೊಟ್ಟೋಳಂಡ ಮಿಟ್ಟು ಚಂಗಪ್ಪ, ಯಾಕೂಬ್, ಕೊಲ್ಯದ ಗಿರೀಶ್, ಎಂ.ಹೆಚ್. ಅಬ್ದುಲ್ ರಹೀಮಾನ್, ವಿ.ಪಿ.ಸುರೇಶ್, ಶಶಿಧರ್, ಗ್ರಾಮ ಪಂಚಾಯತ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಪಾರ್ಥಿವ ಶರೀರಕ್ಕೆ ಪುಷ್ಪ ಗುಚ್ಚವಿರಿಸಿ ಅಂತಿಮ ನಮನ ಸಲ್ಲಿಸಿದರು.

ಸಂಜೆ ನಾಲ್ಕು ಗಂಟೆಯ ನಂತರ ಮೃತ ದೇಹವನ್ನು ವಿಧಿ ವಿಧಾನಗಳೊಂದಿಗೆ ಬಿದ್ದಾಟಂಡ ವಾಡೆಯ ಕೋಲ್ ಮಂದ್ ಬಳಿಯಿರುವ ಕುಟುಂಬದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು.

ಶಾಲೆಗಳಿಗೆ ರಜೆ: ಮೃತರ ಗೌರವಾರ್ಥ ನಾಪೆÇೀಕ್ಲು ಪಟ್ಟಣ ಮತ್ತು ವ್ಯಾಪ್ತಿಯ ಎಲ್ಲಾ ಶಾಲೆಗಳಿಗೆ ಅರ್ಧ ದಿನದ ರಜೆ ಘೋಷಿಸುವ ಮೂಲಕ ಮೃತರ ಆತ್ಮಕ್ಕೆ ಶಾಂತಿ ಕೋರಲಾಯಿತು. 12 ಗಂಟೆಯಿಂದ ಅಪರಾಹ್ನ 2 ಗಂಟೆಯವರೆಗೆ ಪಟ್ಟಣದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ವರ್ತಕರು ಮುಚ್ಚಿ ಮೃತರಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

-ಪಿ.ವಿ. ಪ್ರಭಾಕರ್