ಮಡಿಕೇರಿ, ಡಿ.20 : 1964 ರ ಕರ್ನಾಟಕ ಭೂ ಕಂದಾಯ ಕಾಯ್ದೆಯಡಿ ರಚಿಸಲಾದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ಹಾಗೂ 1969 ರ ನಿಯಮವನ್ನು ಅನುಷ್ಠಾನಗೊಳಿಸುವಲ್ಲಿ ಕಂದಾಯ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪ್ರಗತಿಪರ ಚಿಂತಕರ ವೇದಿಕೆ ಆರೋಪಿಸಿದೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಸಂಚಾಲಕ ಕೆ.ಆರ್. ವಿದ್ಯಾಧರ್ ದಿಡ್ಡಳ್ಳಿಯಲ್ಲಿ ಗಿರಿಜನರನ್ನು ನಿರಾಶ್ರಿತರನ್ನಾಗಿ ಮಾಡಿರುವದು ಸಾಮ್ರಾಜ್ಯಶಾಹಿ ಧೋರಣೆ ಯಾಗಿದೆಯೆಂದು ಟೀಕಿಸಿದರು. ಕಂದಾಯ ಕಾಯ್ದೆ ನಿಯಮ 5ರ ಪ್ರಕಾರ ಸಾರ್ವಜನಿಕ ಉಪಯೋಗಕ್ಕೆ ಮೀಸಲಾಗಿರುವ ಜಾಗವನ್ನು ಹೊರತು ಪಡಿಸಿ ಮಂಜೂರಾತಿಗೆ ಲಭ್ಯವಿರುವ ಪೈಸಾರಿ ಜಾಗದ ಶೇ.50ರಷ್ಟು ಜಮೀನನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು. 1979 ರಲ್ಲಿ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ರಚನೆಯಾಗಿ ಮಂಜೂರಾತಿಯನ್ನು ಸಮರ್ಪಕವಾಗಿ ನಡೆಸುವ ಬಗ್ಗೆ ಹೆಚ್ಚಿನ ಮಾರ್ಗದರ್ಶನವನ್ನು ನೀಡಲಾಗಿದೆ. ಆದರೆ, ಇಲ್ಲಿಯವರೆಗೆ ಕರ್ನಾಟಕ ಭೂ ಮಂಜೂರಾತಿ ನಿಯಮಗಳು ಹಾಗೂ 1969ರ ನಿಯಮದ ಪ್ರಕಾರ ಪೈಸಾರಿ ಜಾಗವನ್ನು ಗುರುತಿಸಿ ಪಟ್ಟಿ ತಯಾರಿಸಿಲ್ಲ. ಇದರಿಂದಾಗಿಯೆ ಹೆಚ್ಚಿನ ಭೂಮಿ ಹೊಂದಿರುವವರೇ ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿಕೊಳ್ಳುವಂತಾಗಿದೆ. ಈ ಕಾರಣದಿಂದಲೇ ನಿವೇಶನÀವಿಲ್ಲದೆ ಬಡಜನರು ಅತಂತ್ರ ಸ್ಥಿತಿಗೆ ತಳ್ಳಲ್ಪಡುತ್ತಿದ್ದಾರೆ ವಿದ್ಯಾಧರ್ ಆರೋಪಿಸಿದರು.

ಕಂದಾಯ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನ ಮಾಡುವ ಕುರಿತು ಸರ್ಕಾರ ಕ್ರಮ ಕೈಗೊಳ್ಳ ಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿ ಗಳಿಗೆ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ದಿಡ್ಡಳ್ಳಿ ಸಂತ್ರಸ್ತರ ಪರ ಪ್ರಗತಿಪರ ಚಿಂತಕರ ವೇದಿಕೆ ನಿರಂತರ ಹೋರಾಟ ನಡೆಸಲಿದೆ. ಮೊದಲ ಹಂತದ ಗೆಲುವು ಲಭಿಸಿದೆ ಎಂದು ಅಭಿಪ್ರಾಯಪಟ್ಟ ಕೆ.ಆರ್. ವಿದ್ಯಾಧರ್, ಗುಡಿಸಲುಗಳಿದ್ದ ಪ್ರದೇಶ ಅರಣ್ಯ ಪ್ರದೇಶವೆ ಎಂಬದನ್ನು ಖಾತರಿ ಪಡಿಸಿಕೊಂಡ ನಂತರ ತೆರವು ಕಾರ್ಯಾಚರಣೆ ಕೈಗೊಳ್ಳಬೇಕಾಗಿತ್ತು ಎಂದರು. ದಿಡ್ಡಳ್ಳಿಯಲ್ಲಿ ಹೊರಗಿನಿಂದ ಬಂದವರು ಕೂಡ ಇದ್ದಾರೆ ಎಂದು ಕೆಲವರು ಅಪಸ್ವರ ಎತ್ತಿದ್ದಾರೆ. ಆದರೆ, 577 ಕುಟುಂಬಗಳು ಸ್ಥಳೀಯರೆ ಆಗಿದ್ದಾರೆ ಎಂದು ಪಟ್ಟಿಯನ್ನು ಈಗಾಗಲೆ ಸಿದ್ಧಪಡಿಸಲಾಗಿದೆ ಎಂದರು.

ಅಧಿಕಾರಿಗಳು ಕಾನೂನು ಪಾಲನೆಯನ್ನು ಸಮರ್ಪಕವಾಗಿ ಮಾಡಿದ್ದರೆ, ಇಂತಹ ಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲವೆಂದು ತಿಳಿಸಿದ ಕೆ.ಆರ್. ವಿದ್ಯಾಧರ್, ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರ ಹಾದಿ ತಪ್ಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಿದ್ದಾರೆ ಎಂದು ಟೀಕಿಸಿದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದು ಇಷ್ಟು ವರ್ಷಗಳೇ ಆಗಿದ್ದರು ಅಕ್ರಮ ಸಕ್ರಮ ಸಮಿತಿ ಸಭೆÉ ನಡೆಯದೇ ಇರುವದಕ್ಕೆ ಅರಣ್ಯ ಹಾಗೂ ಕಂದಾಯ ಇಲಾಖೆÉ ಶಾಮೀಲಾಗಿರುವದೆ ಕಾರಣವೆಂದು ಆರೋಪಿಸಿದರು.

ಸಮಿತಿಗೆ ಸಲ್ಲಿಕೆಯಾಗಿರುವ 3 ಸಾವಿರ ಅರ್ಜಿಗಳಲ್ಲಿ 2600 ಅರ್ಜಿಗಳು ಸಿ ಅಂಡ್ ಡಿ ಭೂಮಿ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೇಳಲಾಗುತ್ತಿದೆ. ಜಿಲ್ಲೆಯಲ್ಲಿ ಬಂಡವಾಳಶಾಹಿಗಳು 6 ಸಾವಿರ ಏಕರೆ ವ್ಯಾಪ್ತಿಯಲ್ಲಿ ರಬ್ಬರ್ ಎಸ್ಟೇಟ್ ನಿರ್ಮಿಸಿ, ಅದರ ಗುತ್ತಿಗೆ ಅವಧಿ ಪೂರೈಸಿದ್ದರೂ ಅದನ್ನು ಇಲ್ಲಿಯವರೆಗೆ ಸರ್ಕಾರ ಮರಳಿ ತನ್ನ ವಶಕ್ಕೆ ತೆಗೆದುಕೊಂಡಿಲ್ಲವೆಂದು ಟೀಕಿಸಿದರು.

ಸಂಸದ ಪ್ರತಾಪ ಸಿಂಹ ಅವರು ದಿಡ್ಡಳ್ಳಿಯಲ್ಲಿ ನಡೆಸಿರುವ ಗುಡಿಸಲು ತೆರವು ಕಾರ್ಯಾಚರಣೆ ಕೇಂದ್ರದ ಮಾಜಿ ಸಚಿವ ಚಿದಂಬರಂ ಅವರ ಪರವಾಗಿ ನಡೆದಿದೆಯೆಂದು ಹೇಳಿಕೆ ನೀಡಿರುವದು ಹಾಸ್ಯಾಸ್ಪದವಾಗಿದೆ. ಬಿಜೆಪಿ ಪ್ರತಿ ಹಂತದಲ್ಲಿ ತÀನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ ಯೆಂದು ವಿದ್ಯಾಧರ್ ಆರೋಪಿಸಿ ದರು.ಪ್ರಮುಖರಾದ ಕುಂಞ ಅಬ್ದುಲ್ಲ ಮಾತನಾಡಿ, ಜಿಲ್ಲಾಧಿಕಾರಿ ಗಳ ನಿರ್ಲಕ್ಷ್ಯವೆ ದಿಡ್ಡÀಳ್ಳಿ ಬೆಳವಣಿಗೆಗೆ ಕಾರಣವೆಂದು ಟೀಕಿಸಿದರು. ಸುದ್ದಿಗೋಷ್ಠಿಯಲ್ಲಿ ಪ್ರಧಾನ ಸಂಚಾಲಕ ಅಲ್ಲಾರಂಡ ವಿಠÀಲ ಹಾಗೂ ಜೋಸೆಫ್ ಉಪಸ್ಥಿತರಿದ್ದರು.