ಮೂರ್ನಾಡು, ಡಿ. 29: ಶೀಲ ಶಂಕಿಸಿ ಪತಿ ಪತ್ನಿಯ ನಡುವೆ ಕಲಹ ಏರ್ಪಟ್ಟು ಪತ್ನಿಯನ್ನು ಕತ್ತಿಯಿಂದ ಕಡಿದು ಬರ್ಬರವಾಗಿ ಕೊಲೆಗೈದು ಪತಿ ಕುತ್ತಿಗೆ ಕತ್ತರಿಸಿಕೊಂಡು ಆಸ್ಪತ್ರೆ ಸೇರಿದ ಘಟನೆ ಮೂರ್ನಾಡುವಿನ ಎಂ. ಬಾಡಗ ಗ್ರಾಮದಲ್ಲಿ ಗುರುವಾರ ನಡೆದಿದೆ.ಅಸ್ಸಾಂ ಮೂಲದ ಕೂಲಿ ಕಾರ್ಮಿಕೆ ಜಹಿರುನ್ನಿಸ (24) ಪತಿಯಿಂದ ಕೊಲೆಯಾದ ದುರ್ದೈವಿ. ಕಳೆದ ಮೂರು ತಿಂಗಳ ಹಿಂದೆ ಎಂ. ಬಾಡಗ ಗ್ರಾಮದಲ್ಲಿರುವ ಬಾರಿಯಂಡ ಸಂಜನ್ ಅವರ ಕಾಫಿ ತೋಟಕ್ಕೆ ಕೂಲಿ ಕಾರ್ಮಿಕರಾಗಿ ಬಂದು ಲೈನ್ ಮನೆಯಲ್ಲಿ ವಾಸವಾಗಿದ್ದರು. ಪತಿ (ಮೊದಲ ಪುಟದಿಂದ) ಆತನ ಸಂಬಂಧಿಕರು ಜಗಳ ಮಾಡಿಕೊಳ್ಳದಂತೆ ಬುದ್ಧಿವಾದ ಹೇಳಿದರು ಎನ್ನಲಾಗಿದೆ.ಬುಧವಾರ ರಾತ್ರಿ ಇಬ್ಬರ ನಡುವೆ ಕಲಹ ಏರ್ಪಟ್ಟು ಬೆಳಗ್ಗೆವರೆಗೆ ಜಗಳವಾಡಿದ್ದಾರೆ. ಗುರುವಾರ ಬೆಳಗ್ಗಿನ ಜಾವ ಸುಮಾರು 4 ಗಂಟೆ ಸಮಯದಲ್ಲಿ ಕಲಹ ಜಾಸ್ತಿಗೊಂಡು ಮನೆಯಲ್ಲಿದ್ದ ಕತ್ತಿಯಿಂದ ಪತ್ನಿಯನ್ನು ಕಡಿದು ಕೊಲೆ ಮಾಡಿದ್ದಾನೆ. ಮುಖ, ಕುತ್ತಿಗೆ ತಲೆ, ಬೆನ್ನಿನ ಭಾಗಗಳಿಗೆ 13 ಸ್ಥಳಗಳಲ್ಲಿ ಕಡಿದು ಬರ್ಬರವಾಗಿ ಹತ್ಯೆಗೆದ್ದು, ಬಳಿಕ ಪತಿ ಜಹಿರುಲ್ ಇಸ್ಲಾಂ ಕತ್ತಿಯಿಂದ ತಾನೇ ತನ್ನ ಕುತ್ತಿಗೆಯನ್ನು ಕತ್ತರಿಸಿಕೊಂಡಿದ್ದಾನೆ. ಗಾಯಾಳುವನ್ನು ಕುಟುಂಬದ ಸಂಬಂಧಿಕರು ಮೈಸೂರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಘಟನಾ ಸ್ಥಳಕ್ಕೆ ಪ್ರಬಾರ ಎಸ್ಪಿ ಎಂ. ಮುತ್ತುರಾಜ್, ಡಿವೈಎಸ್ಪಿ ಛಬ್ಬಿ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.