ಶ್ರೀಮಂಗಲ, ನ. 16: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸಬಲೀಕರಣ ಮಾಡಲು, ಯುವ ಮುಖಂಡರಿಗೆ ಸ್ಥಾನಮಾನ ನೀಡಿ ಪಕ್ಷಕ್ಕೆ ಯುವಕರನ್ನು ಸೆಳೆಯಲು ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ, ಜಿ.ಪಂ. ಸದಸ್ಯರಾಗಿ ಉತ್ತಮ ಕೆಲಸ ಮಾಡಿರುವ ಶಿವು ಮಾದಪ್ಪ ಅವರಿಗೆ ಕೊಡಗು ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನವನ್ನು ನೀಡಬೇಕೆಂದು ಶ್ರೀಮಂಗಲದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಪ್ರಮುಖರ ಸಭೆಯಲ್ಲಿ ಒತ್ತಾಯಿಸಲಾಯಿತು.

ಜಿಲ್ಲೆಯಲ್ಲಿ ಒಟ್ಟು 5 ಕಾಂಗ್ರೆಸ್ ಬ್ಲಾಕ್‍ಗಳಿದ್ದು, ಇದರಲ್ಲಿ ಪೊನ್ನಂಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶಿವು ಮಾದಪ್ಪ ಅವರು ಜಿ.ಪಂ.ಗೆ ಆಯ್ಕೆಯಾದ ನಂತರ ತಮ್ಮ ಸ್ಥಾನವನ್ನು ಬಿಟ್ಟುಕೊಟ್ಟಿದ್ದಾರೆ. ಜಿಲ್ಲೆಯ 29 ಜಿ.ಪಂ. ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ 10 ಸ್ಥಾನವನ್ನು ಗಳಿಸಿದೆ. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ತಮ್ಮ ಪೊನ್ನಂಪೇಟೆ ಬ್ಲಾಕ್ ವ್ಯಾಪ್ತಿಯಲ್ಲಿ ಈ ಹತ್ತು ಕ್ಷೇತ್ರದಲ್ಲಿ 4 ಸ್ಥಾನದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಶಿವು ಮಾದಪ್ಪ ಅವರ ಪ್ರಯತ್ನ ಹಾಗೂ ಪಕ್ಷ ನಿಷ್ಠೆ ಎಂದು ಸಭೆಯಲ್ಲಿ ಪ್ರಮುಖರು ಅಭಿಪ್ರಾಯ ಪಟ್ಟರು. ಹಾಗೆಯೇ ವೀರಾಜಪೇಟೆ ತಾ.ಪಂ.ನಲ್ಲಿ ಒಟ್ಟು 19 ಸ್ಥಾನಗಳ ಪೈಕಿ 7 ಸ್ಥಾನವನ್ನು ಕಾಂಗ್ರೆಸ್ ಪಡೆದಿದ್ದು, ಇದರಲ್ಲಿ ಬಹುತೇಕ ಸ್ಥಾನ ಪೊನ್ನಂಪೇಟೆ ಬ್ಯಾಕ್ ಕಾಂಗ್ರೆಸ್ ವ್ಯಾಪ್ತಿಗೆ ಒಳ ಪಡುತ್ತದೆ.

ಶಿವು ಮಾದಪ್ಪ ಅವರು ತಮ್ಮ ತಂದೆಯ ಕಾಲದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ನಿಷ್ಠೆಯಿಂದ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದಲ್ಲಿ ಯುವಕರನ್ನು ಸೇರಿಸಲು ಶಿವು ಮಾದಪ್ಪ ಅವರಂತಹ ಯುವ ನಾಯಕರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಅಭಿಪ್ರಾಯ ವ್ಯಕ್ತವಾಯಿತು.

ಸಭೆಯಲ್ಲಿ ಕುಂಞಂಗಡ ಬೋಸ್ ಮಾದಪ್ಪ, ಕಾಳಿಮಾಡ ಪ್ರಶಾಂತ್, ಪೆಮ್ಮಂಡ ರಾಜ, ಐಪುಮಾಡ ಸಂಜು, ಚೋನೀರ ಹರೀಶ್, ನಾಲ್ಕೇರಿಯ ಮಾಚಿಮಾಡ ಮನು, ಕಾಕೂರು ತ್ಯಾಗರಾಜ್, ಬೀರುಗದ ಯು. ವೆಂಕಟೇಶ್, ಕೋಟ್ರಮಾಡ ರಂಜಿ ಸೇರಿದಂತೆ ಶ್ರೀಮಂಗಲ. ಟಿ. ಶೆಟ್ಟಿಗೇರಿ, ನಾಲ್ಕೇರಿ ವ್ಯಾಪ್ತಿಯ ಪಕ್ಷದ ಪ್ರಮುಖರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.