ಕೂಡಿಗೆ, ಸೆ. 24: 2016-17ನೇ ಸಾಲಿನ ಕುಶಾಲನಗರ ಬಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಿರಂಗಾಲದ ಸರ್ಕಾರಿ ಪ್ರೌಢಶಾಲೆ ಮೂರನೆ ಬಾರಿ ಸಮಗ್ರ ಪ್ರಶಸ್ತಿ ಪಡೆಯುವದರೊಂದಿಗೆ ಹ್ಯಾಟ್ರಿಕ್ ಸಾಧನೆ ಮಾಡಿದೆ. ವಲಯ ಮಟ್ಟದಲ್ಲಿ ಪಾಲ್ಗೊಂಡ ಬಾಲಕಿಯರು ಖೋ-ಖೋ, ಹಾಕಿ, ಹ್ಯಾಂಡ್‍ಬಾಲ್‍ನಲ್ಲಿ ಪ್ರಥಮ ಸ್ಥಾನವನ್ನುಗಳಿಸಿ, ಬಾಲ್ ಬ್ಯಾಡ್ಮಿಂಟನ್‍ನಲ್ಲಿ ಹಾಗೂ ಅಥ್ಲೇಟಿಕ್ಸ್‍ನಲ್ಲಿ ದ್ವಿತೀಯ ಸ್ಥಾನಗಳನ್ನು ಪಡೆದರು. ಬಾಲಕರು ಥ್ರೋಬಾಲ್‍ನಲ್ಲಿ ಪ್ರಥಮ, ಬಾಲ್ ಬ್ಯಾಡ್ಮಿಂಟನ್ ಮತ್ತು ಹ್ಯಾಂಡ್‍ಬಾಲ್‍ಗಳಲ್ಲಿ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ.

ಬಾಲಕಿಯರ ಅಥ್ಲೇಟಿಕ್ಸ್ ವಿಭಾಗದಲ್ಲಿ ಶ್ವೇತ, ಮನುಶ್ರೀ, ರಕ್ಷಿತಾ, ಎಸ್.ಎಸ್. ಅನುಷಾ, ಅಂಜಲಿ, ಚಂದನ ಸಾಧನೆ ಮಾಡಿದ್ದಾರೆ. ಬಾಲಕರ ಅಥ್ಲೇಟಿಕ್ಸ್ ವಿಭಾಗದಲ್ಲಿ ಎಸ್.ಎಸ್. ಸುದೀಪ್ ಕೆ.ಜೆ. ಕಾರ್ತಿಕ್, ಶಶಾಂಕ್, ಎಂ.ಸಿ. ಚೇತನ್, ಮನೋಜ್ ಕೆ.ಎಂ., ಸೋಮಶೇಖರ್ ಇವರುಗಳು ಸ್ಥಾನಗಳಿಸಿದ್ದಾರೆ.