ಮಡಿಕೇರಿಯ. ಅ.6 - ಮಡಿಕೇರಿ ದಸರಾ ಜನೋತ್ಸವ ಸಾಂಸ್ಕøತಿಕ ಸಮಿತಿಯಿಂದ ತಾ. 8 ರಂದು ಶನಿವಾರ ಆಯೋಜಿತ ಯುವ ದಸರಾದಲ್ಲಿ 13 ಡಾನ್ಸ್ ಟೀಮ್‍ಗಳ ನಡುವೆ ಡಾನ್ಸ್ ವಾರ್ ಸ್ಪರ್ಧೆ ನಡೆಯಲಿದೆ.

ಯುವ ದಸರಾ ಸಂದರ್ಭದಲ್ಲಿ ಏರ್ಪಡಿಸಲಾಗಿರುವ ಡಾನ್ಸ್ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಪ್ರಥಮ ಬಹುಮಾನವಾಗಿ ರೂ. 25 ಸಾವಿರ ದ್ವಿತೀಯ ಬಹುಮಾನವಾಗಿ ರೂ. 20 ಸಾವಿರ ಮತ್ತು ತೃತೀಯ ಬಹುಮಾನವಾಗಿ ರೂ. 15 ಸಾವಿರ ಬಹುಮಾನಗಳನ್ನು ಟ್ರೋಫಿಯೊಂದಿಗೆ ನೀಡಲಾಗುತ್ತಿದೆ.

ಡಾನ್ಸ್ ವಾರ್ ಸ್ಪರ್ಧೆಯಲ್ಲಿ ಮಡಿಕೇರಿಯ ಡಿ ಕಂಪೆನಿ, ಕೂರ್ಗ್ ಫ್ರಿಕ್ಷನ್ಸ್, ರಿಫ್ಲೆಕ್ಷನ್ಸ್, ರಿ ಬಾರ್ನ್, ರೆಡ್ ಒನ್, ಕುಶಾಲನಗರದ ಏಂಜಲ್ ವಿಂಗ್ಸ್, ಡ್ರೀಮ್ ಸ್ಟಾರ್ಸ್, ಸುಂಟಿಕೊಪ್ಪದ ನಾಟಿಬಾಯ್ಸ್, ಟೀಮ್ ಆ್ಯಟಿಟ್ಯೂಡ್, ಸೋಮವಾರಪೇಟೆಯ ಡಾನ್ಸ್ ವಾರಿಯರ್ಸ್, ಬೆಂಗಳೂರಿನ ರಾಯಲ್ ಮಾಸ್ , ಬೈರವ ಡಾನ್ಸ್ ಟೀಮ್, ಮಂಗಳೂರಿನ ಟೀಮ್ ಕುಡ್ಲ ಡಾನ್ಸ್ ಟೀಮ್‍ಗಳು ಪಾಲ್ಗೊಳ್ಳುತ್ತಿವೆ. ಇದರೊಂದಿಗೆ ಡಿಜೆ ಕಾರ್ಯಕ್ರಮವೂ ಯುವ ಪೀಳಿಗೆಯನ್ನು ಆಕರ್ಷಿಸಲಿದೆ. ಮಡಿಕೇರಿಯ ತಾಂಡವಂ, ಮಂಗಳೂರಿನ ಸಿಜ್ಲಿಂಗ್ ಗಯ್ಸ್ ಡಾನ್ಸ್ ಟೀಮ್, ಸುಂಟಿಕೊಪ್ಪದ ಸ್ವಸ್ಥ ವಿಶೇಷ ಶಾಲಾ ಮಕ್ಕಳಿಂದಲೂ ಯುವ ದಸರಾ ಸಂದರ್ಭ ವೈವಿಧ್ಯಮಯ ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ದಸರಾ ಸಾಂಸ್ಕøತಿಕ ಸಮಿತಿ ತಿಳಿಸಿದೆ.

ತಾ.8 ರಂದು ಶನಿವಾರ ಸಂಜೆ 6 ಗಂಟೆಯಿಂದ ಮಧ್ಯರಾತ್ರಿಯವರೆಗೂ ಡಾನ್ಸ್ ವಾರ್ ಮತ್ತು ಡಿಜೆ ನಡೆಯಲಿದ್ದು, ಎಲ್ಲಾ ಅಗತ್ಯ ಸಿದ್ಧತೆಗಳನ್ನು ನಡೆಸಲಾಗುತ್ತಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.