ಮಡಿಕೇರಿ, ಸೆ. 22: ನಗರಸಭೆ ವ್ಯಾಪ್ತಿಯಲ್ಲಿನ ವ್ಯಾಪಾರ ಉದ್ದಿಮೆ ನಡೆಸುತ್ತಿರುವವರು ಕಡ್ಡಾಯವಾಗಿ ವ್ಯಾಪಾರೋದ್ಯಮ ಪರವಾನಗಿ ಪಡೆದುಕೊಳ್ಳುವಂತೆ ನಗರಸಭೆ ಅಧ್ಯಕೆÀ್ಷ ಕಾವೇರಮ್ಮ ಸೋಮಣ್ಣ ಮನವಿ ಮಾಡಿದ್ದಾರೆ.

ನಗರಸಭೆ ಆವರಣದಲ್ಲಿ ಏರ್ಪಡಿಸಲಾಗಿದ್ದ ವ್ಯಾಪಾರೋದ್ಯಮ ಪರವಾನಗಿ ಆಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕರ್ನಾಟಕ ಪುರಸಭೆ ಕಾಯ್ದೆ 1964ರ ಅಧಿನಿಯಮ ಸೆಕ್ಷನ್ 256ರಂತೆ ವ್ಯಾಪಾರ ಉದ್ದಿಮೆ ನಡೆಸುತ್ತಿರುವ ಎಲ್ಲಾ ವ್ಯಾಪಾರೋದ್ಯಮಿಗಳು ಪರವಾನಗಿ ಪಡೆಯುವದು ಕಡ್ಡಾಯª Áಗಿದೆ. ಆ ನಿಟ್ಟಿನಲ್ಲಿ ತಾ. 29ರೊಳಗೆ ವ್ಯಾಪಾರ ಉದ್ದಿಮೆಯ ಪರವಾನಗಿ ಪಡೆದುಕೊಳ್ಳುವಂತೆ ಕೋರಿದರು.

ಉದ್ದಿಮೆ ಪರವಾನಗಿಯನ್ನು ಕಡ್ಡಾಯವಾಗಿ ಪಡೆದುಕೊಳ್ಳುವದರ ಜೊತೆಗೆ ಕಾಲಮಿತಿಯೊಳಗೆ ತೆರಿಗೆ ಪಾವತಿಸಿ ನಗರಾಭಿವೃದ್ಧಿಗೆ ಕೈಜೋಡಿಸುವಂತೆ ಮನವಿ ಮಾಡಿದರು.

ಮಡಿಕೇರಿ ನಗರವನ್ನು ಮತ್ತಷ್ಟು ಸ್ವಚ್ಛ ನಗರವನ್ನಾಗಿ ಮಾಡುವ ನಿಟ್ಟಿನಲ್ಲಿ ನಗರದ ಜನತೆ ಕೈಜೋಡಿಸಬೇಕು. ಪ್ಲಾಸ್ಟಿಕ್ ತ್ಯಜಿಸಿ ಪರಿಸರವನ್ನು ಉಳಿಸಬೇಕು. ಹಸಿರು ಬೆಳೆಸಿ ನೀರನ್ನು ಮಿತವಾಗಿ ಬಳಸುವಂತಾಗಬೇಕು ಎಂದು ಹೇಳಿದರು. ಪೌರಾಯುಕ್ತೆ ಬಿ.ಬಿ.ಪುಷ್ಪಾವತಿ ಮಾತನಾಡಿ ನಗರಸಭಾ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುತ್ತಿರುವ ಎಲ್ಲಾ ಉದ್ದಿಮೆದಾರರು ಉದ್ದಿಮೆ ಪರವಾನಗಿ ಪಡೆಯುವದು ಕಡ್ಡಾಯವಾಗಿದ್ದು, ಆ ದಿಸೆಯಲ್ಲಿ ತಾ.29ರೊಳಗೆ ವಿಶೇಷ ಆಂದೋಲ ನವನ್ನು ಹಮ್ಮಿಕೊಳ್ಳಲಾಗಿದೆ. ಉದ್ದಿಮೆ ಹಾಗೂ ವ್ಯಾಪಾರಸ್ಥರು ತಮ್ಮ ಉದ್ದಿಮೆ ಹಾಗೂ ವ್ಯಾಪಾರಕ್ಕೆ ಸಂಬಂಧಿಸಿದಂತೆ ಆನ್‍ಲೈನ್ ತಂತ್ರಾಂಶದ ಮೂಲಕ ಸೂಚಿತ ಡಿಜಿಟಲ್ ಸಹಿ ಉಳ್ಳ ಉದ್ದಿಮೆ ಪರವಾನಗಿ ಯನ್ನು ನಗರಸಭೆಯಿಂದ ಪಡೆದು ಕೊಳ್ಳುವಂತೆ ಕೋರಿದರು. ಉಪಾಧ್ಯಕ್ಷ ಟಿ.ಎಸ್.ಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷ ಮನ್ಸೂರ್ ಮತ್ತಿತರರು ಇದ್ದರು.