ವೀರಾಜಪೇಟೆ, ಜ. 26: ನಮ್ಮ ಸಂಸ್ಕøತಿ ಅತ್ಯಂತ ಪ್ರಾಚೀನವಾದದ್ದು. ಪ್ರಜಾಪ್ರಭುತ್ವದ ನೆಲೆಯಲ್ಲಿ ಭಾರತ ದೇಶ ಒಂದು ವಿಶಿಷ್ಟ ಪರಂಪರೆ, ಹತ್ತಾರು ಧರ್ಮಗಳು, ನೂರಾರು ಜಾತಿಗಳು, ಸಾವಿರಾರು ಭಾಷೆಗಳ ಜಾತ್ಯಾತೀತತೆಯ ಮನೋಭಾವನೆ ಯನ್ನು ಹೊಂದಿದೆ. ವಿವಿಧತೆಯಲ್ಲಿ ಏಕತೆ ಎಂಬ ಲೋಕೊಕ್ತಿಯಂತೆ ನಮ್ಮ ಸಂವಿಧಾನವನ್ನು ಅಚ್ಚುಕಟ್ಟಾಗಿ ರಚಿಸಲಾಗಿದೆ ಎಂದು ವಿರಾಜಪೇಟೆ ತಾಲೂಕು ತಹಶೀಲ್ದಾರ್ ಮಹದೇವಸ್ವಾಮಿ ಹೇಳಿದರು.ರಾಷ್ಟ್ರೀಯ ಹಬ್ಬಗಳ ತಾಲೂಕು ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವದಲ್ಲಿ ್ಲ ಧ್ವಜಾರೋಹಣ ಮಾಡಿದ ಮಹದೇವಸ್ವಾಮಿ ಅವರು ಭಾರತ ಪ್ರಜಾಪ್ರಭುತ್ವದ ಸಂವಿಧಾನದಡಿಯಲ್ಲಿ ದೇಶದ ಆಡಳಿತ ಕಾರ್ಯಾಂಗ, ಶಾಸಕಾಂಗ, ಹಾಗೂ ನ್ಯಾಯಾಂಗ ಸಮ್ಮಿಲನದಲ್ಲಿ ವ್ಯವಸ್ಥಿತವಾಗಿ ಮುಂದುವರೆಯುತ್ತಿದೆ. ಕೈಗಾರಿಕೆ, ಶಿಕ್ಷಣ, ವ್ಯವಸಾಯ, ವಿಜ್ಞಾನ ತಂತ್ರಜ್ಞಾನ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ರಾಷ್ಟ್ರಗಳ ಸಾಲಿಗೆ ಭಾರತ ಸೇರುತ್ತಿದೆ. ರಾಷ್ಟ್ರದ ಪ್ರತಿಯೊಬ್ಬ ಪ್ರಜೆಯು ಧೈಂiÀರ್i, ಪ್ರಾಮಾಣಿಕತೆ, ದೇಶಪ್ರೇಮ, ಕರ್ತವ್ಯ ನಿಷ್ಠೆ, ಸನ್ನಡತೆಯಲ್ಲಿ ಮುಂದುವರೆದರೆ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿ ಭದ್ರ ನೆಲೆಗಟ್ಟಿನಲ್ಲಿ ಸಂಪದ್ಭರಿತ ಶಾಂತಿಯ ರಾಷ್ಟ್ರವನ್ನಾಗಿಸಬಹುದು ಎಂದರು.
ಕನ್ನಡ ಜಾಗೃತಿ ಸಮಿತಿ ಸದಸ್ಯೆ ಹಾಗೂ ವೀರಾಜಪೇಟೆ ಕಾವೇರಿ ಕಾಲೇಜು ಉಪನ್ಯಾಸಕಿ ಮುಲ್ಲೇಂಗಡ ರೇವತಿ ಪೂವಯ್ಯ ಮಾತನಾಡಿ, 299 ವಿದ್ವಾಂಸಕರ ತಂಡದ ಸತತ ಪ್ರಯತ್ನದಿಂದ ಸಂವಿಧಾನ ರೂಪುಗೊಂಡಿದೆ. ರಾಷ್ಟ್ರದ ಏಕತೆ ಹಾಗೂ ಸಾರ್ವಭೌಮತೆಗೆ ಧಕ್ಕೆ ಬಾರದ ರೀತಿಯಲ್ಲಿ ಪ್ರತಿಯೊಬ್ಬರು ನಡೆದುಕೊಳ್ಳಬೇಕು ಎಂದು ಹೇಳಿದರು.
ತಾಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಉಪಾಧ್ಯಕ್ಷೆ ತಸ್ನಿಂ ಅಕ್ತರ್, ಡಿವೈಎಸ್‍ಪಿ ನಾಗಪ್ಪ, ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ, ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಕಿರಣ್ ಪಡ್ನೇಕರ್, ಮತ್ತಿತರರು ಉಪಸ್ಥಿತರಿದ್ದರು.
ಸಮಾರಂಭಕ್ಕೆ ಮೊದಲು ಶಾಲಾ ಕಾಲೇಜು ಮಕ್ಕಳಿಂದ ಸ್ತಬ್ಧ ಚಿತ್ರ ಸಹಿತ ಮುಖ್ಯ ಬೀದಿಗಳಲ್ಲಿ ಮೆರವಣಿಗೆ, ಪೋಲಿಸ್ ಸ್ಕೌಟ್ಸ್, ಗೈಡ್ಸ್, ಎನ್.ಸಿ.ಸಿ. ಹಾಗೂ ಶಾಲಾ ವಿದ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು, ತಹಶೀಲ್ದಾರ್ ಮಹದೇವಸ್ವಾಮಿ ಗೌರವ ವಂದನೆ ಸ್ವೀಕರಿಸಿದರು. ಸಮಾರಂಭದ ನಂತರ ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಸ್ತಬ್ಧ ಚಿತ್ರಗಳು
ರಾಷ್ಟ್ರಿಯ ಹಬ್ಬಗಳ ಆಚರಣಾ ಸಮಿತಿ ಮತ್ತು ತಾಲೂಕು ಆಡಳಿತ ವತಿಯಿಂದ ತಾಲೂಕು ಮೈದಾನದಲ್ಲಿ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಅಂಗವಾಗಿ ತಾಲೂಕಿನ ವಿವಿಧ ಶಾಲೆಗಳಿಂದ ಆಯೋಜಿಸಲಾಗಿದ್ದ ಸ್ತಬ್ಧ ಚಿತ್ರ ಪ್ರದರ್ಶನದಲ್ಲಿ ಬಿರುನಾಣಿಯ ಮರೆನಾಡು ಪ್ರೌಡಶಾಲೆಯ ಅಗ್ನಿ ಕ್ಷಿಪ್ಪಣಿಯನ್ನು ಬಿಂಬಿಸುವ ಚಿತ್ರಕ್ಕೆ (ಪ್ರ), ಮುರಾರ್ಜಿ ಶಾಲೆಯ ಸರ್ವಧರ್ಮ ಸಮನ್ವಯವನ್ನು ಬಿಂಬಿಸುವ ಚಿತ್ರ (ದ್ವಿ), ವೀರಾಜಪೇಟೆಯ ಕೂರ್ಗ್ ವ್ಯಾಲಿ ಶಾಲೆಯ ವಿಶಾಲವಾದ ಕೆಂಪು ಕೋಟೆಯ ಚಿತ್ರಕ್ಕೆ (ತೃ) ಸ್ಥಾನ ಪಡೆದುಕೊಂಡರು.