ಶ್ರೀಮಂಗಲ, ನ. 14: ಶಾಲೆಗೆ ತೆರಳಿದ್ದ ಮಕ್ಕಳನ್ನು ಮನೆಗೆ ಕರೆದೊಯ್ಯಲು ತೆರಳುತ್ತಿದ್ದ ಮಹಿಳೆಯೋರ್ವರನ್ನು ದೊಣ್ಣೆ ಯಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಇಲ್ಲಿಗೆ ಸಮೀಪದ ವೆಸ್ಟ್‍ನೆಮ್ಮಲೆ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಸರಕಾರಿ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಪ್ರಮೀಳ (33) ಎಂಬಾಕೆ ಹತ್ಯೆಗೀಡಾದ ದುರ್ದೈವಿಯಾಗಿದ್ದಾರೆ.ವೆಸ್ಟ್‍ನೆಮ್ಮಲೆಯ ಕುಮಾರ್ ಎಂಬವರ ಪುತ್ರಿ ಪ್ರಮೀಳಾಗೆ ಗೋಣಿಕೊಪ್ಪಲಿನ ಪ್ರಿಯದರ್ಶಿನಿ ಹೊಟೇಲ್ ಮಾಲೀಕರ ಪುತ್ರ ಗಿರೀಶ್ ಎಂಬಾತನೊಂದಿಗೆ ವಿವಾಹವಾಗಿತ್ತು. ಆದರೆ ಕಳೆದ 5 ವರ್ಷದ ಹಿಂದೆ ಪತಿಯಿಂದ ಬೇರ್ಪಟ್ಟು ತಂದೆಯೊಂದಿಗೆ ನೆಲೆಸಿದ್ದಳು.