ಮಡಿಕೇರಿ, ನ.25 : ವೀರಾಜಪೇಟೆ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 7ನೇ ಕನ್ನಡ ಸಾಹಿತ್ಯ ಸಮ್ಮೇಳನ ನ.28 ರಂದು ವೀರಾಜಪೇಟೆಯ ತಾಲೂಕು ಮೈದಾನದಲ್ಲಿ ನಡೆಯಲಿದೆ ಎಂದು ತಾಲೂಕು ಕಸಾಪ ಅಧ್ಯಕ್ಷ ಮುಲ್ಲೇಂಗಡ ಮಧೋಶ್ ಪೂವಯ್ಯ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮ್ಮೇಳನದ ಕುರಿತು ಮಾಹಿತಿ ನೀಡಿದರು. ವಿರಾಜಪೇಟೆ ತಾಲ್ಲೂಕು ಮೈದಾನದ ಬಿ.ಜಿ.ರಘುನಾಥ್ ನಾಯಕ್ ಸ್ಮಾರಕ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮವನ್ನು ಸಮ್ಮೇಳನಾಧ್ಯಕ್ಷ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಉಪಸ್ಥಿತಿಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಲಿದ್ದಾರೆ. ಅರಮೇರಿ ಕಳಂಚೇರಿ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿಗಳ ಸಾನಿಧ್ಯದಲ್ಲಿ ನಿಕಟ ಪೂರ್ವ ಸಮ್ಮೇಳನಾಧ್ಯಕ್ಷ ಡಾ| ಜೆ. ಸೋಮಣ್ಣ ಮಾತನಾಡಲಿದ್ದಾರೆ. ಸ್ಮರಣ ಸಂಚಿಕೆಯನ್ನು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಬಿ.ಎ. ಹರೀಶ್ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕರಾದ ಎಂ.ಪಿ. ಅಪ್ಪಚ್ಚು ರಂಜನ್, ಎಂಎಲ್‍ಸಿ ವೀಣಾ ಅಚ್ಚಯ್ಯ, ಸುನಿಲ್ ಸುಬ್ರಮಣಿ, ರಾಜ್ಯ ರೇಷ್ಮೆ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್, ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ.

ಬೆಳಗ್ಗೆ 7.15 ಕ್ಕೆ ತಾಲೂಕು ಮೈದಾನದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ರಾಷ್ಟ್ರ ಧ್ವಜಾರೋಹಣ ಮಾಡಲಿದ್ದು, ಮಧೋಶ್ ಪೂವಯ್ಯ ಕನ್ನಡ ಸಾಹಿತ್ಯ ಪರಿಷತ್ತಿನ ಧ್ವಜಾರೋಹಣ ಮಾಡಲಿದ್ದಾರೆ. ನಾಡ ಧ್ವಜವನ್ನು ವೀರಾಜಪೇಟೆ ಪಟ್ಟಣ ಪಂಚಾಯಿತಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್ ಆರೋಹಿಸಲಿದ್ದಾರೆಂದರು.

ಮಲಬಾರ್ ರಸ್ತೆಯಲ್ಲಿ ಡಿ.ಜೆ. ಪದ್ಮನಾಭ ಸ್ಮಾರಕ ದ್ವಾರವನ್ನು

ತಾ.ಪಂ. ಸದಸ್ಯ ಬಿ.ಎಂ. ಗಣೇಶ್, ಪಂಜರಪೇಟೆಯಲ್ಲಿ

(ಮೊದಲ ಪುಟದಿಂದ) ಬಿ.ಡಿ. ಗಣಪತಿ ಸ್ಮಾರಕ ದ್ವಾರವನ್ನು ತಾಪಂ ಸದಸ್ಯರಾದ ರಾಜು, ಮೂರ್ನಾಡು ರಸ್ತೆಯಲ್ಲಿ ಮುಲ್ಲೇರ ಜಿಮ್ಮಿ ಸ್ಮಾರಕ ದ್ವಾರವನ್ನು ತಾ.ಪಂ. ಸದಸ್ಯ ಮಾಳೆÉೀಟಿರ ಪ್ರಶಾಂತ್ ಉತ್ತಪ್ಪ, ಮಾರಿಯಮ್ಮ ದೇವಸ್ಥಾನದ ಬಳಿ ಡಾ| ಮುಕ್ಕಾಟಿರ ಎಂ. ಚಂಗಪ್ಪ ಸ್ಮಾರಕ ದ್ವಾರವನ್ನು ತಾ.ಪಂ. ಸದಸ್ಯರಾದ ಆಲತಂಡ ಪಿ. ಸೀತಮ್ಮ ಉದ್ಘಾಟಿಸಲಿದ್ದಾರೆ. ಪಟ್ಟಣ ಪಂಚಾಯ್ತಿ ಮುಂಭಾಗದ ನಡಿಕೇರಿಯಂಡ ಚಿಣ್ಣಪ್ಪ ಸ್ಮಾರಕ ಮುಖ್ಯ ದ್ವಾರವನ್ನು ಜಿಲ್ಲಾ ಪಂಚಾಯಿತಿ ಸದಸ್ಯ ಮಹೇಶ್ ಗಣಪತಿ ಉದ್ಘಾಟಿಸಲಿದ್ದಾರೆಂದು ಮಾಹಿತಿ ನೀಡಿದರು.

ತೆಲುಗರ ಬೀದಿಯಿಂದ ಸಮ್ಮೇಳನ ನಡೆಯುವ ತಾಲೂಕು ಮೈದಾನದವರೆಗೆ ಸಮ್ಮೇಳನಾಧ್ಯಕ್ಷ ಕುಲ್ಲಚಂಡ ಚಿಪ್ಪಿ ಕಾರ್ಯಪ್ಪ ಅವರ ಮೆರವಣಿಗೆ ಮಂಗಳವಾದ್ಯ, ಕಲಶಗಳು, ಸ್ತಬ್ಧ ಚಿತ್ರಗಳು, ಗೊಂಬೆಗಳು, ಡೊಳ್ಳು ಕುಣಿತ, ವೀರಗಾಸೆ ಕೊಡಗಿನ ವಾಲಗ, ಇತ್ಯಾದಿ ವರ್ಣರಂಜಿತ ಕಲಾಕೃತಿಗಳೊಂದಿಗೆ ನಡೆಯಲಿದೆ. ಮೆರವಣಿಗೆಯನ್ನು ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮತಿಯ ಅಧ್ಯಕ್ಷ ಮೂಕೊಂಡ ಶಶಿ ಸುಬ್ರಮಣಿ ಉದ್ಘಾಟಿಸಲಿದ್ದಾರೆ. ಜಿ.ಪಂ. ಮಾಜಿ ಅಧ್ಯಕ್ಷೆ ಶರಿನ್ ಸುಬ್ಬಯ್ಯ ಅವರು ಕಲಾ ತಂಡಗಳಿಗೆ ಚಾಲನೆ ನೀಡಲಿದ್ದಾರೆಂದು ಮಧೋಶ್ ಪೂವಯ್ಯ ತಿಳಿಸಿದರು.

ಆರ್.ಜೆ. ಮುಕುಂದ್ ಸಿಂಗ್ ಸ್ಮಾರಕ ಚಿತ್ರಕಲಾ ಮತ್ತು ಛಾಯಾಚಿತ್ರ ಪ್ರದರ್ಶನ ಮಳಿಗೆಯನ್ನು ಜಿಲ್ಲಾ ಪಂಚಾಯ್ತಿ ಸದ್ಯರಾದ ಅಪ್ಪಂಡೇರಂಡ ಭವ್ಯ, ಐ.ಮಾ. ಮುತ್ತನ್ಣ ಸ್ಮಾರಕ ಪುಸ್ತಕ ಮಳಿಗೆಯನ್ನು ಜಿ.ಪಂ. ಸದಸ್ಯ ಚೀಯಕಪೂವಂಡ ಬೋಪಣ್ಣ, ಬಿ.ಜಿ. ರಘುನಾಥ್ ನಾಯಕ್ ಸ್ಮಾರಕ ಸಭಾಂಗಣವನ್ನು ಜಿ.ಪಂ. ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಮೂಕೊಂಡ ವಿಜು ಸುಬ್ರಮಣಿ, ಅಪ್ಪಚ್ಚ ಕವಿ ಸ್ಮಾರಕ ವೇದಿಕೆಯನ್ನು ತಾ.ಪಂ. ಉಪಾಧ್ಯಕ್ಷ ನೆಲ್ಲಿರ ಚಲನ್ ಉದ್ಘಾಟಿಸಲಿದ್ದಾರೆಂದು ತಿಳಿಸಿದರು.

ಮಧ್ಯಾಹ್ನ 12.30 ರಿಂದ ಆರಂಭಗೊಳ್ಳುವ ವಿಚಾರಗೋಷ್ಠಿಗೆ ನಿವೃತ್ತ ಪ್ರಾಂಶುಪಾಲ ಇಟ್ಟೀರ ಬಿದ್ದಪ್ಪ ಚಾಲನೆ ನೀಡಲಿದ್ದಾರೆ. ಕನ್ನಡ ಸಾಹಿತ್ಯಕ್ಕೆ ಕೊಡಗಿನವರ ಕೊಡುಗೆ ವಿಚಾರದ ಕುರಿತು ಉಪನ್ಯಾಸಕ ಮುಲ್ಲೇಂಗಡ ರೇವತಿ ಪೂವಯ್ಯ, ಗಡಿನಾಡಿನಲ್ಲಿ ಕನ್ನಡದ ಸ್ಥಿತಿಗತಿ ವಿಷಯದ ಕುರಿತು ಪ್ರೊ| ಕೆ. ಬಸವರಾಜು ಮಾತನಾಡಲಿದ್ದಾರೆ. ನಂತರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಮಾದಂಡ ಎಸ್. ಪೂವಯ್ಯ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ.

ಸನ್ಮಾನ ಸಮಾರಂಭದಲ್ಲಿ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿಗಳು ಹಾಗೂ ವೀರಾಜಪೇಟೆ ಸಂತ ಅನ್ನಮ್ಮ ಚರ್ಚ್‍ನ ರೆ|ಫಾ| ಮದಲೈ ಮುತ್ತು ಆಶೀರ್ವಚನ ನೀಡಲಿದ್ದಾರೆ. ಈ ಸಂದರ್ಭ ನಿಕಟ ಪೂರ್ವ ಜಿಲ್ಲಾ ಕಸಾಪ ಅಧ್ಯಕ್ಷ ಟಿ.ಪಿ. ರಮೇಶ್, ಅಧ್ಯಕ್ಷ ಲೋಕೇಶ್ ಸಾಗರ್ ಹಾಗೂ ನಿಕಟ ಪೂರ್ವ ತಾಲೂಕು ಅಧ್ಯಕ್ಷ ಕೇಶವ ಕಾಮತ್ ಅವರಿಗೆ ಗೌರವ ಅರ್ಪಿಸಲಾಗುತ್ತದೆಂದು ಮಧೋಶ್ ಪೂವಯ್ಯ ಮಾಹಿತಿ ನೀಡಿದರು.

ಸಾಹಿತ್ಯ ಕ್ಷೇತ್ರದಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ| ದಂಬೆಕೋಡಿ ಸುಶೀಲ ಸುಬ್ರಮಣಿ, ವೈದ್ಯಕೀಯ ಕ್ಷೇತ್ರದಲ್ಲಿ ಡಾ| ಶ್ರೀನಿವಾಸ್ ಮೂರ್ತಿ, ಕ್ರೀಡಾ ಕ್ಷೇತ್ರದಲ್ಲಿ ಮುಲ್ಲೇರ ಪೊನ್ನಮ್ಮ ಪೂವಣ್ಣ, ಸಾಮಾಜಿಕ ಕ್ಷೇತ್ರದಲ್ಲಿ ಎಂ.ಡಬ್ಲ್ಯು. ಅಯ್ಯಪ್ಪ, ಕೃಷಿ ಕ್ಷೇತ್ರದಲ್ಲಿ ಸುಳ್ಳಿಮಾಡ ಪಾರ್ವತಿ ತಿಮ್ಮಯ್ಯ, ಪತ್ರಿಕೋದ್ಯಮದಲ್ಲಿ ಕಾಂಗೀರ ಬೋಪಣ್ಣ, ಪೌರ ಕಾರ್ಮಿಕರ ಸೇವಾ ಕ್ಷೇತ್ರದಲ್ಲಿ ರಂಗಮ್ಮ ನಂಜುಂಡ, ನೃತ್ಯ ಕಲೆಯಲ್ಲಿ ಕಾರ್ತಿಕ್ ಶೆಣೈ, ಜಾನಪದ ಕ್ಷೇತ್ರದಲ್ಲಿ ಪೊನ್ನ, ಶಿಕ್ಷಣ ಕ್ಷೇತಕ್ಕೆ ಸಂಬಂಧಿಸಿದಂತೆ ವಿವಿಧ ಶಾಲೆಗಳಿಗೆ ಪ್ರಶಸ್ತಿಯನ್ನು ನೀಡಲಾಗುತ್ತದೆಂದರು.

ಬಹಿರಂಗ ಅಧಿವೇಶನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಚಮ್ಮಟ್ಟೀರ ಪ್ರವೀಣ್ ಉತ್ತಪ್ಪ, ರೇಖಾ ಶ್ರೀಧರ್, ಕೋಶಾಧಿಕಾರಿ ಹೆಚ್.ವಿ. ರಾಮ್‍ದಾಸ್ ನಿರ್ಣಯ ಮಂಡಿಸಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಸಮ್ಮೇಳನಾಧ್ಯಕ್ಷರು ಆಶಯ ನುಡಿಗಳನ್ನಾಡಲಿದ್ದು, ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರು ಜಿಲ್ಲಾಧ್ಯಕ್ಷರ ನುಡಿಯಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಇತರ ಜನ ಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ. ಸಂಜೆ 6.30ಕ್ಕೆ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ಗೋಣಿಕೊಪ್ಪಲು ಕಾವೇರಿ ವಿದ್ಯಾಸಂಸ್ಥೆಯ ಅಧ್ಯಕ್ಷ ಡಾ|ಎ.ಸಿ. ಗಣಪತಿ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ವಿಧಾನ ಪರಿಷತ್ ಮಾಜಿ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ ವಹಿಸಲಿದ್ದಾರೆ. ನಂತರ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ಸಾಂಸ್ಕøತಿಕ ವೈವಿಧ್ಯ ನಡೆಯಲಿದೆಯೆಂದು ಮಧೋಶ್ ಪೂವಯ್ಯ ತಿಳಿಸಿದರು.

ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವರೂ ಪಾಲ್ಗೊಂಡು ಯಶಸ್ವಿಗೊಳಿಸುವಂತೆ ಅವರು ಇದೇ ಸಂದರ್ಭ ಮನವಿ ಮಾಡಿದರು.

ಸುದ್ದಿಗೋಷ್ಠಿಯಲ್ಲಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ಶಶಿ ಸುಬ್ರಮಣಿ, ಜಿ.ಪಂ. ಸದಸ್ಯ ಸಿ.ಕೆ. ಬೋಪಣ್ಣ, ಮೆರವಣಿಗೆ ಸಮಿತಿ ಅಧ್ಯಕ್ಷ ರಘು ನಾಣಯ್ಯ ಹಾಗೂ ಜೀವನ್ ಉಪಸ್ಥಿತರಿದ್ದರು.