ವೀರಾಜಪೇಟೆ, ಡಿ. 23: ವೀರಾಜಪೇಟೆಯ ಚಿಕ್ಕಪೇಟೆ ಬಳಿಯಲ್ಲಿ ಇಂದು ಸಂಜೆ 5-30ಗಂಟೆಗೆ ನಡೆದ ಲಾರಿ - ಬೈಕ್ ಡಿಕ್ಕಿಯಲ್ಲಿ ಸವಾರ ಸ್ಥಳದಲ್ಲಿಯೇ ದುರ್ಮರಣಗೊಂಡಿದ್ದಾನೆ.ಕೆ.ಆರ್.ನಗರದಿಂದ ತೋಟ ಕಾರ್ಮಿಕನಾಗಿ ಪಾರಾಣೆಗೆ ಬಂದಿದ್ದ ಮಧು ಕುಮಾರ್ (40) ತೆರಳುತ್ತಿದ್ದ ಬೈಕ್ (ಕೆ.ಎ.21 ಎಚ್ 3588) ಎದುರುಗಡೆಯಿಂದ ಭತ್ತ ತುಂಬಿಕೊಂಡು ಬರುತ್ತಿದ್ದ ಕುಶಾಲನಗರದ ಲಾರಿಗೆ (ಕೆ.ಎ.01 ಎಬಿ 3051) ಡಿಕ್ಕಿಯಾಗಿದೆ. ಸಂಚರಿಸುತ್ತಿದ್ದ ಲಾರಿಯ ಮಧ್ಯ ಭಾಗಕ್ಕೆ ಡಿಕ್ಕಿಯಾಗಿ ಬೈಕ್ ಎರಡು ಭಾಗವಾಗಿದೆ.ಬೈಕ್‍ನಲ್ಲಿ ಸವಾರ ಮಾತ್ರ ಇದ್ದು, ಪಾರಾಣೆಗೆ ಹಿಂತಿರುಗುವ ಸಮಯದಲ್ಲಿ ಈ ದುರಂತ ಸಂಭವಿಸಿದೆ.
ಅಪಘಾತ ಸಂಭವಿಸಿದ ತಕ್ಷಣ ಲಾರಿಯಲ್ಲಿದ್ದ ಕ್ಲೀನರ್ ಹಾಗೂ ಚಾಲಕ ನಾಪತ್ತೆಯಾಗಿರುವದಾಗಿ ಪೊಲೀಸರು ತಿಳಿಸಿದ್ದಾರೆ. ನಗರ ಪೊಲೀಸರು ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.