ವೀರಾಜಪೇಟೆ, ಸೆ. 6 : ಗಣಪತಿ ಸೇವಾ ಸಮಿತಿ ಮತ್ತು ಉತ್ಸವ ಸಮಿತಿ, ಪೌರ ಸೇವಾ ನೌಕರರ ಸಂಘ ಪಟ್ಟಣ ಪಂಚಾಯಿತಿ ವೀರಾಜಪೇಟೆ ಇವರ ಸಂಯುಕ್ತ ಆಶ್ರಯದಲ್ಲಿ ನಾಡಹಬ್ಬ ಗೌರಿ ಗಣೇಶ ಹಬ್ಬದ ಪ್ರಯುಕ್ತ ಸಪೆÀ್ಟಂಬರ್ 7ರಿಂದ 10ರವರೆಗೆ ವಿವಿಧ ಆಟೋಟ ಸ್ಫರ್ಧೆಗಳನ್ನು ಆಯೋಜಿಸಲಾಗಿದೆ ಎಂದು ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವಿಶ್ವನಾಥ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ ವಿಶ್ವನಾಥ್ ಅವರು ತಾ. 7 ರಂದು (ಇಂದು) ಸ್ವಚ್ಚ ಭಾರತ್ ಮಿಷನ್ ಅಡಿಯಲ್ಲಿ ಸಾರ್ವಜ&divound;ಕರಿಗೆ ಸ್ವಚ್ಚತೆ ಅರಿವಿನ ಬಗ್ಗೆ ಅರಿವು ಮೂಡಿಸಲು ಪೂರ್ವಾಹ್ನ 6.30 ಗಂಟೆಗೆ ಕಾವೇರಿ ಕಾಲೇಜು ಮುಂಭಾಗದಿಂದ ತಾಲೂಕು ಮೈದಾನದವರೆಗೆ ಮ್ಯಾರಥಾನ್ ಓಟ, 11 ಗಂಟೆಗೆ ಟೌನ್‍ಹಾಲ್ ಸಭಾಂಗಣದಲ್ಲಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಶಟಲ್‍ಕಾಕ್ ಡಬಲ್ಸ್ ಪಂದ್ಯಾವಳಿ ನಡೆಯಲಿದೆ. ಸಂಜೆ 6.30 ಗಂಟೆಗೆ ಹೊನಲು ಬೆಳಕಿನ ಫುಟ್‍ಬಾಲ್ ಪಂದ್ಯಾಟಕ್ಕೆ ಚಾಲನೆ &divound;ೀಡಲಾಗುವದು.

ತಾ. 8 ರಂದು 10 ಗಂಟೆಗೆ ಟೌನ್‍ಹಾಲ್ ಹಾಗೂ ಛತ್ರಕರೆಯ ಬಳಿಯ ಒಳಾಂಗಣ ಕ್ರೀಡಾಂಗಣದಲ್ಲಿ ಪ್ರೌಢಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಶಟಲ್‍ಕಾಕ್ ಸ್ಫರ್ಧೆಗಳು ನಡೆಯಲಿದೆ. ಸಂಜೆ 6.30ರಿಂದ ಹೊನಲು ಬೆಳಕಿನ ಫುಟ್ಬಾಲ್ ಪಂದ್ಯಾಟಗಳು ನಡೆಯಲಿದೆ.

ತಾ. 9 ರಂದು ಒಳಾಂಗಣ ಕ್ರೀಡಾಂಗಣದಲ್ಲಿ ಸಾರ್ವಜ&divound;ಕ ಮಹ&divound;ಯರಿಗೆ ಶಟಲ್ ಡಬಲ್ಸ್ ಪಂದ್ಯಾಟ ನಡೆಯಲಿದೆ. ಟೌನ್‍ಹಾಲ್‍ನಲ್ಲಿ ಸಾರ್ವಜ&divound;ಕ ಮಹಿಳೆಯರಿಗೆ ಬೆಂಕಿ ಇಲ್ಲದೆ ಅಡುಗೆ ತಯಾರಿ ಹಾಗೂ ಸ್ವಾಭಾವಿಕ ಹೂಗಳಿಂದ ಹೂವಿನ ಅಲಂಕಾರ ಸ್ಫರ್ಧೆ ನಡೆಯಲಿದೆ. ಸಂಜೆ 6.30ರಿಂದ ಫುಟ್ಬಾಲ್ ಪಂದ್ಯಾಟ ನಡೆಯಲಿದೆ.

ತಾ. 10 ರಂದು ಸಂಜೆ ಫುಟ್ಬಾಲ್ ಪಂದ್ಯಾಟದ ಫೈನಲ್ ಪಂದ್ಯಾಟ ನಡೆಯಲಿದೆ. ಅಂದು ಉಮ್ಮತಾಟ್, ತಿರುವಂದರ್ ಆಟ್, ಪರೆಯಕಳಿ, ಉರ್‍ಟ್ಟಿಕೊಟ್ಟ್ ಆಟ್ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಮಾತನಾಡಿ ಮೆರಥಾನ್ ಓಟದ ಸಂದರ್ಭದಲ್ಲಿ ಒಲಂಪಿಯನ್ ಚೇಂದಂಡÀ &divound;ಕಿನ್ ತಿಮ್ಮಯ್ಯ, ಏಕಲವ್ಯ ಪ್ರಶಸ್ತಿ ವಿಜೇತ ಕರಿನೆರವಂಡ ಸೋಮಣ್ಣ, ಪಟ್ಟಣ ಪಂಚಾಯಿತಿ ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ, ವೀರಾಜಪೇಟೆ ಶಾಸಕ ಕೆ,ಜಿ ಬೋಪಯ್ಯ, ವಿಧಾನ ಪರಿಷತ್ ಸದಸ್ಯರಾದ ಸು&divound;ೀಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಜಿಲ್ಲಾಧಿಕಾರಿ ವಿನ್ಸೆಂಟ್ ಡಿಸೋಜಾ, ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್, ಉಪವಿಭಾಗಾಧಿಕಾರಿ ಡಾ ನಂಜುಂಡೇಗೌಡ, ಗೌರಿ ಗಣೇಶ ಉತ್ಸವ ಸಮಿತಿ ಅಧ್ಯಕ್ಷ ಕೆ.ಎನ್. ವಿಶ್ವನಾಥ್ ಉಪಸ್ಥಿತಲಿರುವರು ಎಂದು ಹೇಳಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ ಸುನೀತಾ, ಇ.ಸಿ ಜೀವನ್, ಎಸ್.ಎಚ್. ಮೊೈನುದ್ದಿನ್ ಸೇರಿದಂತೆ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು