ಮೂರ್ನಾಡು, ನ. 15: ಕುಂಬಳದಾಳು ಹಾಗೂ ಅರ್ವತೋಕ್ಲು ಮುಕ್ಕಾಟೀರ ಕುಟುಂಬಸ್ಥರ ವತಿಯಿಂದ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರನ್ನು ಸನ್ಮಾನಿಸಲಾಯಿತು.

ಕುಂಬಳದಾಳು ಮುಕ್ಕಾಟಿರ ಐನ್‍ಮನೆಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಹಾಗೂ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪ್ಲೈಟ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದ ಮುಕ್ಕಾಟೀರ ಸಾಬು ಕುಟ್ಟಪ್ಪ ಅವರನ್ನು ಶಾಲು ಹೊದಿಸಿ ಫಲ ತಾಂಬೂಲದೊಂದಿಗೆ ಕಿರುಕಾಣಿಕೆ ನೀಡಿ ಸನ್ಮಾನಿಸಲಾಯಿತು.

ಮುಕ್ಕಾಟಿರ ಕುಟುಂಬದ ಅಧ್ಯಕ್ಷ ಉತ್ತಪ್ಪ, ಕಾರ್ಯದರ್ಶಿ ಮುಕ್ಕಾಟಿರ ಪಿ. ಮೊಣ್ಣಪ್ಪ ಹಾಗೂ ಸದಸ್ಯರು ಹಾಜರಿದ್ದರು.