ಮಡಿಕೇರಿ, ನ. 27: ವಿಶ್ವ ಹಿಂದೂ ಪರಿಷತ್‍ನ ಸದಸ್ಯತ್ವ ಅಭಿಯಾನಕ್ಕೆ ನಗರದಲ್ಲಿ ಚಾಲನೆ ನೀಡಲಾಯಿತು.
ನಗರದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಭಜರಂಗದಳದ ಕ್ಷೇತ್ರೀಯ ಸಂಘಟನಾ ಕಾರ್ಯದರ್ಶಿ ಸೂರ್ಯನಾರಾಯಣ ಅವರು ಚಾಲನೆ ನೀಡಿದರು. ಬಳಿಕ ಮಹದೇವಪೇಟೆಯ ಮುಖ್ಯ ರಸ್ತೆಯಲ್ಲಿ ಸಂಚರಿಸಿ ಸದಸ್ಯರನ್ನು ನೋಂದಾಯಿಸಲಾಯಿತು. ಈ ಸಂದರ್ಭ ವಿಹಿಂಪ ನಗರ ಅಧ್ಯಕ್ಷ ಮೋಹನ್, ಭಜರಂಗದಳದ ಜಿಲ್ಲಾ ಸಂಚಾಲಕ ಎಂ.ಕೆ. ಅಜಿತ್‍ಕುಮಾರ್, ಸಹಸಂಚಾಲಕ ಚೇತನ್, ನಗರ ಸಂಚಾಲಕ ಮನು ರೈ ಹಾಗೂ ಇನ್ನಿತರರು ಇದ್ದರು.