ಮಡಿಕೇರಿ, ಅ. 26: ರೋಟರಿ ಮತ್ತು ಇನ್ನರ್ ವೀಲ್ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸ್ತನ ಕ್ಯಾನ್ಸರ್ ಮಾಸದ ಅಂಗವಾಗಿ ತಾ. 28 ರಂದು ನಗರದÀ ರೋಟರಿ ಸಭಾಂಗಣದಲ್ಲಿ ‘ಉಚಿತ ಸ್ತನ ಕ್ಯಾನ್ಸರ್ ತಪಾಸಣೆ ಮತ್ತು ಮಹಿಳೆಯರ ಆರೋಗ್ಯ ತಪಾಸಣಾ ಶಿಬಿರ’ ನಡೆಯಲಿದೆ.ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಮಡಿಕೇರಿ ರೋಟರಿ ಅಧ್ಯಕ್ಷ ಡಾ. ಮೋಹನ್ ಅಪ್ಪಾಜಿ, ಅಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದ್ದು, ಸ್ತ್ರೀ ರೋಗಗಳ ತಜ್ಞ ವೈದ್ಯ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ಡಾ. ಮಧುರಾ ಪಾಠಕ್ ತಪಾಸಣಾ ಕಾರ್ಯ ನಡೆಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.

ವಿಶ್ವದಾದ್ಯಂತ ಶೇ. 12 ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‍ಗೆ ತುತ್ತಾಗುತ್ತಿದ್ದಾರೆ. ಈ ಬಗ್ಗೆ ಮಹಿಳೆಯರು ಆತಂಕ ಪಡುವ ಕಾರಣಗಳಿಲ್ಲ. ಪ್ರಸ್ತುತ ರೋಗ ಪತ್ತೆ ಮತ್ತು ಅಗತ್ಯ ಚಿಕಿತ್ಸಾ ಕ್ರಮಗಳು ಲಭ್ಯವಿರುವದಾಗಿ ತಿಳಿಸಿದ ಅವರು, ಶಿಬಿರದ ಸಂಜೆ 6 ಗಂಟೆಗೆ ನಡೆಯುವ ರೋಟರಿ ಕ್ಲಬ್ ಸಭೆಯ ನಂತರ ಡಾ. ಮಧುರಾ ಪಾಠಕ್ ಅವರು ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಮೂಡಿಸುವ ಉಪನ್ಯಾಸ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದರು. ಶಿಬಿರದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ರತನ್ ತಮ್ಮಯ್ಯ, ಜಂಟಿ ಕಾರ್ಯದರ್ಶಿ, ಮಡಿಕೇರಿ ರೋಟರಿ ಮೊ. 94448217099, ನಮಿತಾ ರೈ, ಅಧ್ಯಕ್ಷರು, ಇನ್ನರ್ ವೀಲ್ ಮೊ. 9448976405, ಡಾ. ಶುಭಾ, ಕಾರ್ಯದರ್ಶಿ, ಇನ್ನರ್ ವೀಲ್ ಕ್ಲಬ್, ಮಡಿಕÉೀರಿ ಮೊ. 94449145971 ಅನ್ನು ಸಂಪರ್ಕಿಸಬಹುದೆಂದು ತಿಳಿಸಿದರು. ಕನ್ನಡ ರಾಜ್ಯೋತ್ಸವದ ದಿನವಾದ ನ. 1 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ರೋಟರಿ ಸಭಾಂಗಣದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಡಾ. ಮೋಹನ್ ಅಪ್ಪಾಜಿ ಹೇಳಿದರು.

ಗೋಷ್ಠಿಯಲ್ಲಿ ರೋಟರಿ ಜಂಟಿ ಕಾರ್ಯದರ್ಶಿ ರತನ್ ತಮ್ಮಯ್ಯ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ನಮಿತಾ ರೈ ಹಾಗೂ ಕಾರ್ಯದರ್ಶಿ ಡಾ. ಶುಭಾ ಉಪಸ್ಥಿತರಿದ್ದರು.