ಸ್ಪರ್ಧೆಗಳಿಗೆ ಹೆಸರು ನೋಂದಾಯಿಸಿಕೊಳ್ಳಲು ತಾ. 5 ಕೊನೆ ದಿನ

ಮಡಿಕೇರಿ, ಡಿ. 1: “ತುಳುನಾಡಿನಲ್ಲಿ ಜಾತಿ, ಮತ, ಭಾಷಾ ಸೌಹಾರ್ಧತೆ” ಎಂಬ ನೆಲೆಗಟ್ಟಿನಲ್ಲಿ ತಾ. 9 ರಿಂದ 13 ರವರೆಗೆ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ “ವಿಶ್ವ ತುಳುವೆರ ಆಯನೋ-2016” ಎಂಬ ಬೃಹತ್ ಕಾರ್ಯಕ್ರಮ ನಡೆಯಲಿದೆ. ಈ ನಿಟ್ಟಿನಲ್ಲಿ ಕೊಡಗು ಜಿಲ್ಲೆಯಿಂದಲೂ ವಿವಿಧ ಕಾರ್ಯಕ್ರಮಗಳನ್ನು ನೀಡಲು ಆಸಕ್ತ ತುಳು ಭಾಷಿಕರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದಾಗಿದೆ ಎಂದು ಕೊಡಗು ಜಿಲ್ಲಾ ತುಳುವೆರ ಜನಪದ ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಬದಿಯಡ್ಕದಲ್ಲಿ ನಡೆಯುವ ವಿವಿಧ ಸ್ಪರ್ಧೆಗಳನ್ನು ಪ್ರಕಟಿಸಿದ್ದಾರೆ. ಸಾಂಸ್ಕøತಿಕ ಸ್ಪರ್ಧೆಯಲ್ಲಿ ತುಳು ಭಜನೆ, ತುಳು ಭಾಷಣ, ತುಳು ಏಕಾಂಕ ನಾಟಕ, ಏಕ ಪಾತ್ರಾಭಿನಯ, ಓಬೇಲೆ ಹಾಡು, ತುಳು ಜನಪದ ಹಾಡು, ತುಳು ಯಕ್ಷಗಾನ ಸ್ಪರ್ಧೆ ನಡೆಯಲಿದೆ.

ಜಾನಪದ ನೃತ್ಯ ಸ್ಪರ್ಧೆಯಲ್ಲಿ ದುಡಿ ಕುಣಿತ, ತುಳು ಜನಪದ ನೃತ್ಯ, ಹುಲಿವೇಷ, ತುಳುನಾಡಿನ ವಿವಿಧ ಜಾನಪದ ಕ್ರೀಡಾ ಸ್ಪರ್ಧೆಗಳಾದ ಗ್ರಾಮೀಣ ಕುಸ್ತಿ, ಅಕ್ಕಿ ಮುಡಿ ಕಟ್ಟುವದು, ಗ್ರಾಮೀಣ ದೇಹದಾಢ್ರ್ಯ ಪ್ರದರ್ಶನ, ಬೀಡಿ ಕಟ್ಟುವದು, ಮಡಲು ಹೆಣೆಯುವದು, ತೆಂಗಿನ ಕಾಯಿ ಕುಟ್ಟುವದು, ಚೆನ್ನೆಮಣೆ, ಇಟ್ಟಿಗೆ ನಡೆತ, ಚೆಂಡು ಆಟ, ಸೈಕಲ್ ಟಯರ್ ಓಟ, ಪತ್ನಿಯನ್ನು ಹೊತ್ತುಕೊಂಡು ಓಡುವದು, ಹಗ್ಗಜಗ್ಗಾಟ, ಕೋಳಿ ಓಟ, ಉತ್ತಮ ಕೋಳಿ, ಕೃತಕ ದನದ ಓಟ, ಕಲ್ಲಾಟ, ಜಿಬಿಲಿ, ಗುಡ್ಡಗಾಡು ಓಟ, ಕೋಳಿ ಅಂಕ ಇತ್ಯಾದಿ ಸ್ಪರ್ಧೆಗಳು ನಡೆಯಲಿವೆ. ಈ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಛಿಸುವ ಕೊಡಗಿನ ತುಳು ಭಾಷಿಕರು ಇದೇ ಡಿ.5 ರೊಳಗೆ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬಹುದಾಗಿದೆ ಎಂದು ಪಿ.ಎಂ. ರವಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಈ ಸಂಖ್ಯೆಗಳನ್ನು ಸಂಪರ್ಕಿಸ ಬಹುದಾಗಿದೆ. ಪ್ರಧಾನ ಕಾರ್ಯದರ್ಶಿ ಪಿ.ಎಂ. ರವಿ (94832 33656), ಮಡಿಕೇರಿ ತಾಲೂಕು ಅಧ್ಯಕ್ಷ ಪ್ರಭು ರೈ (78291 31743), ಸೋಮವಾರ ಪೇಟೆ ತಾಲೂಕು ಅಧ್ಯಕ್ಷ ದಿನೇಶ್ ಕುಲಾಲ್ (99800 60334), ವೀರಾಜಪೇಟೆ ತಾಲೂಕು ಅಧ್ಯಕ್ಷ ಸಚ್ಚಿ ಕುಮಾರ್ (94490 76386).