ಗೋಣಿಕೊಪ್ಪಲು, ಡಿ. 24 : ಕಾವೇರಿ ಪದವಿ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಬಲ್ಯಮಂಡೂರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಏಳು ದಿನಗಳ ಕಾಲ ನಡೆಯುವ ವಿಶೇಷ ಶಿಬಿರವನ್ನು ಎಂಎಲ್ಸಿ ವೀಣಾ ಅಚ್ಚಯ್ಯ ಉದ್ಘಾಟಿಸಿದರು.
ಸಭಾ ಕಾರ್ಯಕ್ರಮ ಮುಗಿದ ನಂತರ ಎಂಎಲ್ಸಿ ವೀಣಾ ಅಚ್ಚಯ್ಯ ಶಾಲೆಯಲ್ಲಿ ಶಿಕ್ಷಣ ಪಡೆಯುತ್ತಿರುವ ಬಡ ವರ್ಗದ ವಿದ್ಯಾರ್ಥಿಗಳೊಂದಿಗೆ ಶಾಲೆಯಲ್ಲಿ ಸಿಗುತ್ತಿರುವ ಸವಲತ್ತುಗಳ ಬಗ್ಗೆ ವಿಚಾರಿಸಿದರು.
ದಾನಿಗಳಾದ ಪೆಮ್ಮಂಡ ಪೊನ್ನಪ್ಪ, ಮಾಚಿಮಾಡ ಸತೀಶ್, ದೇಯಂಡ ಹ್ಯಾರಿ, ಕೊಟ್ಟಂಗಡ ಕಾರ್ಯಪ್ಪ, ಮಾಚಿಮಾಡ ಕಾಳಪ್ಪ, ದೇಯಂಡ ನಂಜಪ್ಪ ಅವರುಗಳನ್ನು ಗೌರವಿಸಲಾಯಿತು.
ಈ ಸಂದರ್ಭ ಕಾವೇರಿ ವಿದ್ಯಾ ಸಂಸ್ಥೆ ಅಧ್ಯಕ್ಷ ಡಾ. ಅಜ್ಜಿನಿಕಂಡ ಸಿ ಗಣಪತಿ, ಪ್ರಾಂಶುಪಾಲ ಪ್ರೊ. ಪಿ ಎ ಪೂವಣ್ಣ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಕುಪ್ಪಂಡ ದತ್ತಾತ್ರಿ, ಜಿ ಪಂ ಸದಸ್ಯೆ ಶ್ರೀಜಾ ಅಚ್ಚುತ್ತನ್, ಬಲ್ಯಮುಂಡೂರು ಗ್ರಾ ಪಂ ಅಧ್ಯಕ್ಷ ಕೊಟ್ಟಂಗಡ ಸಿ ಪ್ರಕಾಶ್ ಉಪಸ್ಥಿತರಿದ್ದರು. ಎನ್ಎಸ್ಎಸ್ ಯೋಜನಾಧಿಕಾರಿ ವನೀತ್ ಕುಮಾರ್ ರಾಷ್ಟ್ರೀಯ ಸೇವಾ ಯೋಜನೆಯ ಬಗ್ಗೆ ಪ್ರಾಸ್ತಾವಿಕವಾಗಿ ಮಾಹಿತಿ ನೀಡಿದರು. ಯೋಜನಾಧಿಕಾರಿ ಮಚ್ಚಮಾಡ ರೀತಾ ವಂದಿಸಿದರು.