ಕರಿಕೆ, ಅ. 17: ಗಾಂಧಿ ಜಯಂತಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಸ್ವಚ್ಛ ಭಾರತ ಅಭಿಯಾನದಡಿಯಲ್ಲಿ ಗ್ರಾ. ಪಂ. ಹಾಗೂ ಭರೂಕ ಜಲವಿದ್ಯುತ್ ಘಟಕ, ಸರಕಾರಿ ಪ್ರಾಥಮಿಕ ಶಾಲೆ ಚೆತ್ತುಕಾಯ, ಸ್ಥಳೀಯ ಅಂಗನವಾಡಿ ಕಾರ್ಯಕರ್ತೆಯರು, ಸ್ಥಳೀಯ ಯುವಕ ಸಂಘದ ಆಶ್ರಯದಲ್ಲಿ ಸ್ವಚ್ಛತಾ ಕಾರ್ಯಕ್ರಮವನ್ನು ಕರಿಕೆಯ ಪ್ರವಾಸಿ ಸ್ಥಳ ಸೇರಿದಂತೆ ಮುಖ್ಯ ರಸ್ತೆಯ ಬದಿಯಲ್ಲಿನ ಪ್ಲಾಸ್ಟಿಕ್ ಬಾಟಲಿ, ಇತರೆ ಪ್ಲಾಸ್ಟಿಕ್ ತ್ಯಾಜ್ಯ, ಕಸ-ಕಡ್ಡಿಗಳನ್ನು ಸ್ವಚ್ಛಗೊಳಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಅಧ್ಯಕ್ಷ ಎನ್. ಬಾಲಚಂದ್ರ ನಾಯಕ್, ಪಿ.ಡಿ.ಓ. ಬಿಪಿನ್, ಭರೂಕ ಘಟಕ ವ್ಯವಸ್ಥಾಪಕ ಎಸ್.ಎನ್. ಬಿರಾಧರ್ ಹಾಗೂ ಸಿಬ್ಬಂದಿಗಳು, ಶಾಲಾ ಶಿಕ್ಷಕರು, ಗ್ರಾ.ಪಂ. ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು ಸೇರಿದಂತೆ ಗ್ರಾಮಸ್ಥರು ಪಾಲ್ಗೊಂಡಿದ್ದರು.