ವೀರಾಜಪೇಟೆ: ಇಂದಿನ ಯುವಕರಲ್ಲಿ ದೇಶವನ್ನು ಸದೃಢವಾಗಿ ಕಟ್ಟುವ ಸಾಮಥ್ರ್ಯವಿದೆ. ಸ್ವಾಮಿ ವಿವೇಕಾನಂದರ ಕನಸಿನ ಭಾರತವನ್ನು ನನಸಾಗಿಸಲು ದೇಶದ ಯುವ ಶಕ್ತಿಯಿಂದ ಮಾತ್ರ ಸಾಧ್ಯ. ಯುವಕರು ಸಂಘ-ಸಂಸ್ಥೆಗಳ ಮೂಲಕ ಈ ಸಾಧನೆಯನ್ನು ಸಫಲಗೊಳಿಸಬೇಕು ಎಂದು ಸಮಾಜ ಸೇವಕರು ಹಾಗೂ ಜನತಾದಳದ ಜಿಲ್ಲಾ ಸಮಿತಿಯ ಅಧ್ಯಕ್ಷ ಮೇರಿಯಂಡ ಸಂಕೇತ್ ಪೂವಯ್ಯ ಹೇಳಿದರು.
ಕನ್ನಡ ರಾಜ್ಯೋತ್ಸವದ ಅಂಗವಾಗಿ ನೂತನವಾಗಿ ರಚಿಸಲಾದ ಜೀವನ ಜ್ಯೋತಿ ಯುವಕ ಸಂಘವನ್ನು ಕನ್ನಡದ ಧ್ವಜಾರೋಹಣ ಮಾಡಿ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಯನ್ನು ಸಹೋದರ ಭಾವನೆಯಿಂದ ಕಂಡು ಯುವ ಸಂಘಟನೆಗಳು ಸಮಸ್ಯೆಗಳಿಗೆ ಪರಿಹಾರ ಕಂಡು ಹಿಡಿಯಬೇಕು ಎಂದರು.
ವೀರಾಜಪೇಟೆ ತೆಲುಗರ ಬೀದಿಯ ಅಂಗನವಾಡಿ ಕೇಂದ್ರದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಲೆತಿರಿಕೆ ಬೆಟ್ಟದ ಶನೀಶ್ವರ ಭಕ್ತ ಜನ ಮಂಡಳಿಯಿಂದ ಜಿಲ್ಲೆಯಲ್ಲಿ ಕನ್ನಡದಲ್ಲಿ ಅತ್ಯಧಿಕ ಅಂಕ ಗಳಿಸಿದ ಸಿ. ಸರ್ವೀನ್ ಜಾಯ್ ಹಾಗೂ ಈ ತನಕ 216 ಮೃತದೇಹಗಳನ್ನು ಹೊಳೆಯಿಂದ ತೆಗೆದ ಹಾಗೂ ನೀರಿನಲ್ಲಿ ಮುಳುಗಿದ್ದ 4 ಮಂದಿಯ ಜೀವವನ್ನು ರಕ್ಷಿಸಿದ ಮುಳುಗು ತಜ್ಞ ಸಿದ್ಧಲಿಂಗ ಸ್ವಾಮಿ ಅವರುಗಳಿಗೆ ಸಂಕೇತ್ ಅವರು ಪ್ರಶಸ್ತಿ ಪತ್ರ ನೀಡಿ ಗೌರವಿಸಿದರು.
ಅತಿಥಿಯಾಗಿ ಭಾಗವಹಿಸಿದ್ದ ಸರಕಾರಿ ಪದವಿ ಕಾಲೇಜಿನ ಉಪನ್ಯಾಸಕ ವನಿತ್ ಕುಮಾರ್ ಮಾತನಾಡಿದರು. ಸಂಘಟನೆಯ ಪದಾಧಿಕಾರಿಗಳಾದ ಅಜಯ್ ನಾರಾಯಣರಾವ್, ಯುವರಾಜ್ ಕೃಷ್ಣ, ಎಂ.ಕೆ. ನಿತೀನ್, ಟಿ.ಡಿ. ಲೋಕೇಶ್, ಧನುಶ್, ಎ.ಎ. ಪುರುಷೊತ್ತಮ್, ಸಿ.ಜೆ. ಜಾಯ್ ಹಾಜರಿದ್ದರು.
ಮಡಿಕೇರಿ: ಕನ್ನಡ ಭಾಷೆಗೆ ಪ್ರಾಚೀನವಾದ ಇತಿಹಾಸವಿದ್ದು, ಕನ್ನಡಿಗರು ಭಾಷಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ನ ಹಿರಿಯ ಸದಸ್ಯ ಶೇಖ್ ಅಹಮದ್ ಅಭಿಪ್ರಾಯ ಪಟ್ಟರು. ಮೂರ್ನಾಡಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಜರುಗಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಹಿರಿಮೆ, ದಿನದ ಮಹತ್ವದ ಕುರಿತಂತೆ ಶಿಕ್ಷಕಿ ಪ್ರಣವಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಕನ್ನಡ ಗೀತ ಗಾಯನ ಹಾಗೂ ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಾದವರಿಗೆ ಪ್ರಶಂಸನಾ ಪತ್ರ ಹಾಗೂ ನೆನಪಿನ ಕಾಣಿಕೆಗಳನ್ನು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಕೆ.ಡಿ. ಗಣೇಶ್ ಹಾಗೂ ಪ್ರಬಾರ ಮುಖ್ಯ ಶಿಕ್ಷಕಿ ಎಂ. ದೇಚಮ್ಮ ವಿತರಿಸಿದರು. ಮೂರ್ನಾಡು ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷÀ ಪಿ.ಪಿ. ಸುಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಪಿ.ಎಸ್. ರವಿಕೃಷ್ಣ , ರಾಜೇಶ್ವರಿ ಶಿವಾನಂದ್, ಸಾಬ ಸುಬ್ರಮಣಿ, ಮಧು ಕುಮಾರ್, ಸರಸ್ವತಿ, ಕೆ. ಜಾನಕಿ, ಮಹೇಶ್ ಉಪಸ್ಥಿತರಿದ್ದರು. ಶಿಕ್ಷಕಿ ಉಷಾ ಸ್ವಾಗತಿಸಿದರು. ಸಿಸಿಲಿಯಾ ಡಿಸೋಜ ನಿರೂಪಿಸಿ ದೈಹಿಕ ಶಿಕ್ಷಣ ಶಿಕ್ಷಕ ಎಂ.ತಮ್ಮಯ್ಯ ವಂದಿಸಿದರು.
ಶನಿವಾರಸಂತೆ: ಪ್ರತಿಯೊಬ್ಬ ಕನ್ನಡಿಗನ ನಿತ್ಯದ ಭಾಷೆ ಕನ್ನಡವಾಗಿ ಅನ್ಯ ಭಾಷೆಗಳು ಅನಿವಾರ್ಯ ಸಂದರ್ಭದ ಭಾಷೆಯಾಗಬೇಕು. ರಾಜ್ಯೋತ್ಸವ ಕನ್ನಡ ಮನಸ್ಸುಗಳ ನಿತ್ಯೋತ್ಸವ ಆಗಬೇಕು ಎಂದು ವಿಘ್ನೇಶ್ವರ ವಿದ್ಯಾಸಂಸ್ಥೆ ಅಧ್ಯಕ್ಷ ಬಿ.ಕೆ. ಸುಬ್ರಹ್ಮಣ್ಯ ಹೇಳಿದರು.
ಸ್ಥಳೀಯ ವಿಘ್ನೇಶ್ವರ ಪದವಿಪೂರ್ವ ಕಾಲೇಜಿನಲ್ಲಿ ಕ.ಸಾ.ಪ. ಹೋಬಳಿ ಘಟಕ ಹಾಗೂ ವಿದ್ಯಾಸಂಸ್ಥೆ ಆಶ್ರಯದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಭಾಷಣಕಾರ ತೊರೆನೂರು ಪ್ರೌಢಶಾಲೆ ಶಿಕ್ಷಕ ಟಿ.ಬಿ. ಮಂಜುನಾಥ್ ಮಾತನಾಡಿ, ಭಾಷೆ, ಸಾಹಿತ್ಯ, ಸಂಸ್ಕøತಿಯಲ್ಲಿ ವೈವಿಧ್ಯತೆ ಮೆರೆದ ಕನ್ನಡ ಭಾಷೆ ವಿಶ್ವ ಮಾನ್ಯತೆ ಪಡೆದಿದೆ ಎಂದರು. ಜಿ.ಪಂ. ಸದಸ್ಯೆ ಸರೋಜಮ್ಮ, ತಾ.ಪಂ. ಸದಸ್ಯ ಟಿ.ಎಸ್. ಅನಂತ್ ಕುಮಾರ್, ಕ.ಸಾ.ಪ. ಪದಾಧಿಕಾರಿ ಹೆಚ್.ಬಿ. ಜಯಮ್ಮ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ್ದ ಕ.ಸಾ.ಪ. ಹೋಬಳಿ ಘಟಕದ ಅಧ್ಯಕ್ಷ ಸಿ.ಎಂ. ಪುಟ್ಟಸ್ವಾಮಿ ಮಾತನಾಡಿದರು. ಪ್ರಮುಖರಾದ ಸಿ.ಜೆ. ಗಿರೀಶ್, ಮಹಮ್ಮದ್ ಗೌಸ್, ಎಸ್.ಎ. ಆದಿತ್ಯ, ವಿದ್ಯಾಸಂಸ್ಥೆ ನಿರ್ದೇಶಕರು. ಪ್ರಾಂಶುಪಾಲ ಟಿ.ಪಿ. ಶಿವಪ್ರಕಾಶ್, ಕ.ಸಾ.ಪ. ಕಾರ್ಯದರ್ಶಿ ಕೆ.ಪಿ. ಜಯಕುಮಾರ್, ಪದಾಧಿಕಾರಿಗಳು ಉಪಸ್ಥಿತರಿದ್ದರು.
ಸಿದ್ದಾಪುರ: ಯುವ ಜನತೆ ಮಾತೃ ಭಾಷೆಗೆ ಹೆಚ್ಚು ಮಹತ್ವ ನೀಡುವದರ ಮೂಲಕ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಸಮಿತಿ ಸದಸ್ಯ ಹಾಗೂ ಸಿದ್ದಾಪುರ ಗ್ರಾ.ಪಂ. ಸದಸ್ಯ ರೆಜಿತ್ ಕುಮಾರ್ ಕರೆ ನೀಡಿದರು.
ಇಲ್ಲಿನ ಇಂಜಲಗೆರೆಯ ಎ.ಪಿ.ಜೆ. ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಅಮ್ಮತ್ತಿ ಗ್ರಾ.ಪಂ. ಉಪಾಧ್ಯಕ್ಷ ಎಂ.ಹೆಚ್. ನಿತೀಶ್ ಧ್ವಜಾರೋಹಣ ನೆರವೇರಿಸಿ, ಶುಭಾಶಯ ಕೋರಿದರು.
ವೇದಿಕೆಯಲ್ಲಿ ಗ್ರಾಮದ ಹಿರಿಯರಾದ ಕಾಳಪ್ಪ, ಮಾಜಿ ತಾ.ಪಂ. ಸದಸ್ಯ ಜಾನ್ಸನ್, ಪತ್ರಕರ್ತ ಅಜೀಜ್ ಇದ್ದರು. ಕಾರ್ಯಕ್ರಮವನ್ನು ಜಿಮ್ಮಿ ಸಿಕ್ವೇರಾ ಸ್ವಾಗತಿಸಿ, ಟೋಮಿ ಥಾಮಸ್ ನಿರೂಪಿಸಿ ವಂದಿಸಿ, ಅಳಿಯುತ್ತಿಹುದು ಕನ್ನಡ ಎಂಬ ಕವನ ವಾಚಿಸಿ, ಕನ್ನಡವನ್ನು ಉಳಿಸಬೇಕೆಂಬ ಸಂದೇಶ ನೀಡಿದರು. ಈ ಸಂದರ್ಭ ಸ್ಥಳೀಯರಾದ ಶಶಿ, ಶಾಫಿ, ಡಾ. ರೋಶನ್, ದಿನೇಶ್ ಸೇರಿದಂತೆ ಇನ್ನಿತರರ ಇದ್ದರು.