ನಾಪೆÇೀಕು, ಡಿ. 12: ನಾಪೆÇೀಕ್ಲು ಜಿಲ್ಲಾ ಪಂಚಾಯಿತಿಗೆ ಒಳಪಟ್ಟ ಪೇರೂರು, ಕೂರುಳಿ, ಕಲ್ಲುಮೊಟ್ಟೆ, ನಾಪೆÇೀಕ್ಲುವಿನಲ್ಲಿ ಸುಮಾರು ರೂ. 14 ಲಕ್ಷ ವೆಚ್ಚದ ಕಾಮಗಾರಿಯ ಉದ್ಘಾಟನೆ ಮತ್ತು ಭೂಮಿ ಪೂಜೆಯನ್ನು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್ ನೆರವೇರಿಸಿದರು

ರೂ. 2 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪೇರೂರು ಗ್ರಾಮದ ಮೂವೇರ ಐನ್ ಮನೆ ಕಾಂಕ್ರೀಟ್ ರಸ್ತೆ ಮತ್ತು ರೂ. 4 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾದ ಪಟ್ಟಣದ ಇಂದಿರಾ ನಗರದಲ್ಲಿ ನಿರ್ಮಿಸಲಾದ ಕಾಂಕ್ರಿಟ್ ರಸ್ತೆಯನ್ನು ಅವರು ಉದ್ಘಾಟಿಸಿದರು. ನಂತರ ರೂ. 4.90 ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಥಳೀಯ ಹಿಂದೂ ರುದ್ರ ಭೂಮಿ ಅಭಿವೃದ್ಧಿ, ಕಲ್ಲು ಮೊಟ್ಟೆಯಿಂದ ಕಕ್ಕುಂದಕಾಡು ವೆಂಕಟೇಶ್ವರ ದೇವಳಕ್ಕೆ ಸಾಗುವ ರಸ್ತೆಯ ರೂ. 2 ಲಕ್ಷ ಕಾಮಗಾರಿಗೆ ಹಾಗೂ ಕೂರುಳಿ ಯಿಂದ ಎಮ್ಮೆಮಾಡುವಿಗೆ ಸಾಗುವ ರಸ್ತೆ ದುರಸ್ತಿಗೆ ಅವರು ಭೂಮಿ ಪೂಜೆ ನೆರವೇರಿಸಲಾಯಿತು.

ಈ ಸಂದರ್ಭ ‘ಶಕ್ತಿ’ಯೊಂದಿಗೆ ಮಾತನಾಡಿದ ಕ್ಷೇತ್ರದ ಜಿಲ್ಲಾ ಪಂಚಾಯಿತಿ ಸದಸ್ಯ ಪಾಡಿಯಮ್ಮಂಡ ಮುರಳಿ ಕರುಂಬಮ್ಮಯ್ಯ, ಶಾಸಕ ಕೆ.ಜಿ. ಬೋಪಯ್ಯ ಅವರ ನಿಧಿ ಮತ್ತು ಅವರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದ್ದು, ಮುಂದಿನ ದಿಗಳಲ್ಲಿ ಅವರ ಜೊತೆಗೂಡಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಶ್ರಮವಹಿಸುವ ದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ಉಪಾಧ್ಯಕ್ಷ ಬೊಳಿಯಾಡಿರ ಸಂತು ಸುಬ್ರಮಣಿ, ಸದಸ್ಯರಾದ ಕೋಡಿಯಂಡ ಇಂದಿರಾ ಹರೀಶ್, ನೆರೆಯಂಡಮ್ಮಂಡ ಉಮಾ ಪ್ರಭು, ನಾಪೆÇೀಕ್ಲು ಗ್ರಾಮ ಪಂಚಾಯಿತಿ ಸದಸ್ಯರಾದ ಪಿ.ಎಂ ರಷೀದ್, ಸುಶೀಲಮ್ಮ, ಚಿತ್ರಾ, ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಕೇಂದ್ರ ವಿಜಿಲೆನ್ಸ್ ಕಮಿಟಿ ಸದಸ್ಯ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ಸ್ಥಳೀಯ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ, ಭಜರಂಗದಳದ ಅಧ್ಯಕ್ಷ ಬಿ.ಎಂ.ಪ್ರತೀಪ್, ಮುಖಂಡರಾದ ಪಾಡಿಯಮ್ಮಂಡ ಮನು ಮಹೇಶ್, ಕರವಂಡ ಲವ ನಾಣಯ್ಯ, ನೆರೆಯಂಡಮ್ಮಂಡ ಪ್ರಭು, ಸುಕುಮಾರ ಸುಬ್ರಮಣಿ, ಎಂ.ಎ.ಆಶೀಪ್, ಗಣೇಶ್, ಜಲೇಂದ್ರ, ಕರ್ಪ ಸ್ವಾಮಿ, ಮಣಿ ಮತ್ತಿತರರು ಇದ್ದರು.