ವೀರಾಜಪೇಟೆ, ಅ. 21: 17 ವಯೋಮಿತಿಯ ಮೈಸೂರು ವಿಭಾಗ ಮಟ್ಟದ ಬಾಲಕಿಯರ ಹ್ಯಾಂಡ್ ಪಂದ್ಯಾಟದಲ್ಲಿ ಪಟ್ಟಣದ ಸಂತ ಅನ್ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದಿದ್ದಾರೆ.

ಶನಿವಾರ ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ಕ್ರೀಡಾಕೂಟದ ಅಂತಿಮ ಪಂದ್ಯದಲ್ಲಿ ಸಂತ ಅನ್ನಮ್ಮ ಶಾಲೆಯ ವಿದ್ಯಾರ್ಥಿನಿಯರು ಗೆಲುವು ದಾಖಲಿಸುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.