ಮಡಿಕೇರಿ, ಅ. 23: ಬೌದ್ಧಿಕವಾಗಿ ವಿಪ್ರರು ಬಲಿಷ್ಠರಾದರೆ ಮಾತ್ರ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಕುಕ್ಕೆ ಸುಬ್ರಮಣ್ಯ ಮಠದ ಮಠಾಧೀಶ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಅಭಿಪ್ರಾಯಿಸಿದ್ದಾರೆ.ಗೋಣಿಕೊಪ್ಪಲಿನ ಕೈಕೇರಿ ಗ್ರಾಮದಲ್ಲಿ ಕೊಡಗು ಜಿಲ್ಲಾ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ನಿರ್ಮಾಣಗೊಂಡ ನೂತನ ವಿಪ್ರ ಸಭಾ ಭವನವನ್ನು ಉದ್ಘಾಟಿಸಿದ ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿಪ್ರರು ಪ್ರತಿನಿತ್ಯ ತಪ್ಪದೆ ಮಂತ್ರಗಳಲ್ಲಿ ಶ್ರೇಷ್ಟವಾದ ಗಾಯತ್ರಿ ಮಂತ್ರವನ್ನು ಪ್ರಾತಃಕಾಲ ಹಾಗೂ ಸಂಧ್ಯಾ ಕಾಲದಲ್ಲಿ ಜಪಿಸಿದರೆ ಜೀವನದ ದಿಕ್ಕೇ ಬದಲಾಗುತ್ತದೆ. ಜ್ಞಾನ ಸಂಪಾದನೆಗೆ ಕೀರ್ತಿ ಹೊಂದಿರುವ ವಿಪ್ರರು ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತರು ಆದರೂ ಇಂದು ವಿಶ್ವದಲ್ಲೇ ತಮ್ಮ ಸಂಸ್ಕಾರದಿಂದ ಹೆಸರುಗಳಿಸಿದ್ದಾರೆ. ವಿಪ್ರರೆಲ್ಲರೂ ಸಂಸ್ಕಾರ, ಸಂಸ್ಕøತಿಯನ್ನು ಉಳಿಸಿ ಬೆಳೆಸುವಲ್ಲಿ ಹೆಚ್ಚಿನ ಆಸಕ್ತಿ ತೋರಬೇಕಾಗಿದೆ. ಪುಟ್ಟ ಜಿಲ್ಲೆಯಲ್ಲಿ ವಿಪ್ರರೆಲ್ಲಾ ಒಂದೆಡೆ ಸೇರಿ ಸಭಾ ಭವನ ಕಟ್ಟುವದರ ಮೂಲಕ ತಮ್ಮ ಸಂಸ್ಕøತಿಯ ಪ್ರತೀಕವನ್ನು ಬಿಂಬಿಸಲು ಸಹಕಾರಿಯಾಗಲಿದೆ ಎಂದರು.

ಸಭೆÉಯಲ್ಲಿ ಪಾಲ್ಗೊಂಡ ಮುಳಿಯ ಸಂಸ್ಥೆಗಳ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿದರು. ಇದೇ ಸಂದರ್ಭ 50000 ರೂ.ಗಳನ್ನು ಕಟ್ಟಡ ನಿರ್ಮಾಣ ಕಾರ್ಯಕ್ಕಾಗಿ ದೆÉೀಣಿಗೆ ರೂಪದಲ್ಲಿ ನೀಡಿದರು. ಅಥಿತಿಗಳಾಗಿ ಕಟ್ಟಡ ಸಮಿತಿಯ ಅಧ್ಯಕ್ಷ ಕೃಷ್ಣಮೂರ್ತಿ ತೊಟಂತ್ತಿಲ್ಲಾಯ, ಕದರಿ ಮಂಜುನಾಥ ದೇವಾಲಯದ ಮುಖ್ಯ ಅರ್ಚಕರು ಹಾಗೂ ವಿಧ್ವಾಂಸ ಡಾ. ಪ್ರಭಾಕರ ಅಡಿಗ, ಮಂಗಳೂರಿನ ಬಿ. ಸುಬ್ರಾಯ ಉಪಸ್ಥಿತರಿದ್ದು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಂಘದ ಅಧ್ಯಕ್ಷ ಪ್ರಭಾಕರ್ ನೆಲ್ಲಿತ್ತಾಯ ಅವರು ಸಂಘ ಬೆಳೆದು ಬಂದ ರೀತಿ, ಕಟ್ಟಡ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ ದಾನಿಗಳ ಕೊಡುಗೆಯನ್ನು ಈ ಸಂದರ್ಭ ಸ್ಮರಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಗುರುರಾಜ್ ಕಂಡಿಪಾಡಿತ್ತಾಯ ನೆರವೇರಿಸಿದರೆ, ಸದಾನಂದ ಪುರೋಹಿತ್ ಸ್ವಾಗತಿಸಿದರು. ವಂದನಾರ್ಪಣೆ ಯನ್ನು ವಿಷ್ಣು ಮೂರ್ತಿ ಅರಳಿತ್ತಾಯ ಮಾಡಿದರು. ಅತಿಥಿಗಳಿಗೆ ಇದೇ ಸಂದರ್ಭ ಸಂಘದ ಪ್ರಧಾನ ಕಾರ್ಯದರ್ಶಿ ರಘು ಕೆದಿಲಾಯ, ಉಪಾಧ್ಯಕ್ಷ ಶ್ರೀಪತಿ ಪಡಂತ್ತಾಯ, ಖಜಾಂಚಿ ಯೋಗೀಶ್ ಪಡಂತ್ತಾಯ ಅವರು ನೆನೆಪಿನ ಕಾಣಿಕೆ ನೀಡಿ ಸತ್ಕರಿಸಿದರು. ಭೋಜನದ ನಂತರ ಸಂಘದ 2015- 16ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು.