ಮಡಿಕೇರಿ, ಸೆ. 6: ಮಂಜಿನ ನಗರಿ ಮಡಿಕೇರಿಯಲ್ಲಿ ಗಣೇಶ ಚತುರ್ಥಿಯ ಮೊದಲ ದಿನ 12 ಉತ್ಸವ ಸಮಿತಿಗಳು ತಮ್ಮ ಉತ್ಸವ ಮೂರ್ತಿಗಳನ್ನು ಸಂಭ್ರಮದಿಂದ ಭವ್ಯ ಅಲಂಕೃತ ಮಂಟಪಗಳಲ್ಲಿ ಕೊಂಡೊಯ್ದು ಗೌರಿಕೆರೆಯಲ್ಲಿ ವಿಸರ್ಜಿಸಿದವು.ಧಾರ್ಮಿಕ ಯುವ ವೇದಿಕೆ, ಹಿಂದೂ ಯುವ ಶಕ್ತಿ, ಮುನೇಶ್ವರ ಯುವಕ ಸಂಘ, ಶಿವಶಕ್ತಿ ಯುವಕ ಸಂಘ, ಸ್ವಸ್ತಿಕ್ ಯುವ ವೇದಿಕೆ, ಕಾಮಾಕ್ಷಿ ಯುವಕ ಸಂಘ, ಸ್ಕಂದ ಯುವಕ ಸಂಘ, ಆದಿಪರಾಶಕ್ತಿ ಯುವಕ ಶಕ್ತಿ, ಸಂಪಿಗೆಕಟ್ಟೆ ಯುವಕ ಸಂಘ, ಕಲಾನಗರ ಸಾಂಸ್ಕøತಿಕ ವೇದಿಕೆ, ದೃಷ್ಟಿಗಣಪತಿ ಯುವಕ ಸಂಘ, ಕೆಎಸ್‍ಆರ್‍ಟಿಸಿ ಗಣಪತಿ ಸೇವಾ ಸಮಿತಿಗಳು ವಿನಾಯಕನನ್ನು ಆರಾಧಿಸಿ ವಿಸರ್ಜನೆ ಮಾಡಿದವು.

ತಾ. 7 ರಂದು (ಇಂದು) ಭಗವತಿ ಯುವಕ ಸಂಘ, ಕಾನ್ವೆಂಟ್ ಬಳಿಯ ಶ್ರೀ ಮಹಾಗಣಪತಿ ಸೇವಾ ಸಮಿತಿ, ಪಾರ್ಕ್‍ಸೈಡ್ ಗಣಪತಿ ಯುವಕ ಸಂಘ, ಪೌರಕಾರ್ಮಿಕರ ಗಣೇಶೋತ್ಸವ ಸಮಿತಿ, ಓಂಕಾರ ಯುವ ವೇದಿಕೆ, ಪ್ರಸನ್ನಗಣಪತಿ ಯುವಕ ಸಂಘ, ವಿನಾಯಕ ಯುವಕ ಮಿತ್ರ ಮಂಡಳಿ, ವಿದ್ಯಾವಿನಾಯಕ ಯುವಕ ಸಂಘ, ವಿನಾಯಕ ಉತ್ಸವ ಸಮಿತಿ, ಶ್ರೀ ಗಣೇಶ ಭಕ್ತಮಂಡಳಿ, ಶ್ರೀ ವಿದ್ಯಾವಾರಿದಿ ಯುವಕ ಮಿತ್ರ ಮಂಡಳಿ, ಓಂ ಶ್ರೀ ಗಣನಾಯಕ ಸೇವಾ ಸಮಿತಿಗಳ ಉತ್ಸವ ಮೂರ್ತಿಗಳ ವಿಸರ್ಜನೆ ನೆರವೇರಲಿದೆ.