ಮಡಿಕೇರಿ, ಡಿ. 5: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಹಾಗೂ ಹಾಸನ ಜಿಲ್ಲಾ ಸಂಘದ ಆಶ್ರಯದಲ್ಲಿ ಹಾಸನದ ಸರಕಾರಿ ವಿಜ್ಞಾನ ಕಾಲೇಜು ಮೈದಾನದಲ್ಲಿ ನಡೆದ ರಾಜ್ಯಮಟ್ಟದ ಕೆಎಸ್‍ಎಲ್‍ಇಸಿಎ ಕ್ರಿಕೆಟ್ ಪಂದ್ಯಾವಳಿಯಲ್ಲಿ ಕೊಡಗು ಜಿಲ್ಲಾ ತಂಡ ಭಾಗವಹಿಸಿ 4ನೇ ಸ್ಥಾನ ಪಡೆದುಕೊಂಡಿದೆ.

ಪಂದ್ಯಾವಳಿಯನ್ನು ಶಾಸಕ ಹೆಚ್.ಡಿ. ರೇವಣ್ಣ ಉದ್ಘಾಟಿಸಿದರೆ, ಶಾಸಕ ಬಾಲಕೃಷ್ಣ ಬಹುಮಾನ ವಿತರಣೆ ಮಾಡಿದರು. ಸಂಘದ ಅಧ್ಯಕ್ಷ ಸತೀಶ್ ಪೂಣಚ್ಚ ನೇತೃತ್ವದಲ್ಲಿ ತೆರಳಿದ್ದ ತಂಡದಲ್ಲಿ ನಾಯಕ ಮಹಮ್ಮದ್ ಷರೀಫ್, ಚಂದನ್, ಧುರಿನ್, ಮಹಮ್ಮದ್ ರಫೀಕ್, ನವೀನ್, ಭರತ್ ಕುಮಾರ್, ಗಣೇಶ್, ತಿಮ್ಮಯ್ಯ, ರವಿಚಂದ್ರ, ರವಿ ಅಪ್ಪುಕುಟ್ಟ, ರಮೇಶ್, ರವಿ, ಸುಜಿತ್, ಶಿವದಾಸ್, ಮಣಿ ಪಾಲ್ಗೊಂಡಿದ್ದರು. ಪಂದ್ಯಾವಳಿಯ ಸರಣಿ ಉತ್ತಮ ಬಾಲಕ ಪ್ರಶಸ್ತಿಯನ್ನು ಕೊಡಗು ತಂಡದ ನವೀನ್ ಪಡೆದುಕೊಂಡರು.