ಗೋಣಿಕೊಪ್ಪಲು, ಜೂ. 11: ಕಾವೇರಿ ಕಾಲೇಜು ಸ್ನಾತಕೋತ್ತರ ವಿಭಾಗದ ಎರಡನೇ ವರ್ಷದ 58 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಸಭಾಂಗಣದಲ್ಲಿ ನಡೆದ ಗ್ರ್ಯಾಜುವೇಶನ್ ಡೇ ಕಾರ್ಯಕ್ರಮದಲ್ಲಿ ಎಂ.ಕಾಂ ವಿಭಾಗದ 48 ಹಾಗೂ ಎಂ.ಎ. ವಿಭಾಗದ 10 ವಿದ್ಯಾರ್ಥಿಗಳಿಗೆ ಕೂರ್ಗ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ಕಾಲೇಜಿನ ಡೀನ್ ಡಾ. ಸುನಿಲ್ ಮುದ್ದಯ್ಯ ವಿತರಿಸಿದರು.

ನಂತರ ಮಾತನಾಡಿ, ಅಲೋಪತಿ ಬೇಡಿಕೆಗಳ ನಡುವೆ ದೇಶದಲ್ಲಿ ಗುರುಕುಲ ಶಿಕ್ಷಣಕ್ಕೆ ಪ್ರೋತ್ಸಾಹ ಸಿಗುತ್ತಿದೆ. ಸರ್ಕಾರ ಕೂಡ ಆಯುರ್ವೇದ, ಯುನಾನಿ ವೈದ್ಯಕೀಯ ವಿಜ್ಞಾನಗಳಲ್ಲಿ ವೈಜ್ಞಾನಿಕ ಸಂಶೋಧನೆಗಳನ್ನು ನಡೆಸುತ್ತಿದೆ. ಇದರಿಂದಾಗಿ ದೇಶದಲ್ಲಿ ಗುರುಕುಲ ಪದ್ಧತಿಯನ್ನು ಗುರುತಿಸುವಂತಾಗಿದೆ ಎಂದರು.

ಕಾವೇರಿ ವಿದ್ಯಾಸಂಸ್ಥೆ ಅಧ್ಯಕ್ಷ ಡಾ. ಎ.ಸಿ. ಗಣಪತಿ, ಕಾರ್ಯದರ್ಶಿ ಕೆ.ಜಿ. ಉತ್ತಪ್ಪ, ಪ್ರಾಂಶುಪಾಲ ಪ್ರೊ. ಪಟ್ಟಡ ಕೆ. ಪೂವಣ್ಣ, ಸ್ನಾತಕೋತ್ತರ ವಿಭಾಗದ ಮುಖ್ಯಸ್ಥರುಗಳಾದ ಎಸ್.ಎನ್. ಬೀನಾ ಹಾಗೂ ಸೌಮ್ಯ ಉಪಸ್ಥಿತರಿದ್ದರು.